ಗುರುವಾರ, ಡಿಸೆಂಬರ್ 31, 2015

ಸವತೆಕಾಯಿ ಖರೆ (ಖಾರದ ಕಡ್ಡಿ) :

ಸಾಮಗ್ರಿಗಳು : 
ಸವತೆಕಾಯಿ - 1
ಅಕ್ಕಿಹಿಟ್ಟು - 1/2 ಕೆ.ಜಿ
ಇ೦ಗು ಚಿಟಿಕೆ
ಜೀರಿಗೆ - 2 ಚಮಚ
ಓಮು - 1 ಚಮಚ
ಅಚ್ಚಖಾರದ ಪುಡಿ - 3  ಚಮಚ
 (ಹಸಿಮೆಣಸು 5)
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು.

ವಿಧಾನ : ಸವತೆಕಾಯಿಯನ್ನು ಸಿಪ್ಪೆ ತೆಗೆದು ಹೆಚ್ಚಿಕೊ೦ಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಳ್ಳುವಾಗ ಇ೦ಗು, ಜೀರಿಗೆ, ಓಮು, ಅಚ್ಚಖಾರದ ಪುಡಿ ಹಾಕಿ. ಒ೦ದು ಪಾತ್ರೆಯಲ್ಲಿ ರುಬ್ಬಿದ ಸವತೆಕಾಯಿ ರಸ ಹಾಕಿ ಸಣ್ಣ ಉರಿಯಲ್ಲಿ ಒ೦ದು ಕುದಿ ಬ೦ದ ಮೇಲೆ ಉಪ್ಪು ಹಾಕಿ ಹಾಗೆ ಸ್ವಲ್ಪ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸುತ್ತಿರಿ. ಈಗ ಉರಿ ಆರಿಸಿ. ಸ್ವಲ್ಪ ಬಿಸಿ ಆರಿದಮೇಲೆ ಹಿಟ್ಟನ್ನು ಚೆನ್ನಾಗಿ ಕಲೆಸಿಕೊಳ್ಳಿ. ಚಪಾತಿ ಹಿಟ್ಟಿನ ಹದಕ್ಕೆ ಬರಬೇಕು. ಬೇಕಾದಲ್ಲಿ ಸ್ವಲ್ಪ ಹಿಟ್ಟು ಸೇರಿಸಬಹುದು. ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟು ಹಿಟ್ಟನ್ನು ಮಟ್ಟಿನಲ್ಲಿ ಹಾಕಿ ಎಣ್ಣೆ ಕಾದ ಮೇಲೆ ಬಾಣಲೆಗೆ ಹಿಟ್ಟನ್ನು ಒತ್ತಬೇಕು. ಹದವಾದ ಉರಿಯಲ್ಲಿ ಬೇಯಿಸಿ. ಈಗ ಸವತೆಕಾಯಿ ಖರೆ ರೆಡಿ.

ಗುರುವಾರ, ಡಿಸೆಂಬರ್ 24, 2015

ಕ್ಯಾರಟ್ ಹಶಿ / ಮೊಸರು ಬಜ್ಜಿ :

ಸಾಮಗ್ರಿಗಳು:
ಕ್ಯಾರಟ್ : 1 ,
ಈರುಳ್ಳಿ : 1/2,
ತೆಂಗಿನ ತುರಿ : 1/2 ಕಪ್,
ಮೊಸರು : 1/2 ಕಪ್,
ಸಕ್ಕರೆ : 1/4 ಚಮಚ, 
ಉಪ್ಪು: ರುಚಿಗೆ 

ಒಗ್ಗರಣೆಗೆ: 
ಎಣ್ಣೆ: 1 ಚಮಚ,
ಉದ್ದಿನ ಬೇಳೆ : 1/2 ಚಮಚ,
ಸಾಸಿವೆ: 1/4 ಚಮಚ,
ಹಸಿಮೆಣಸಿನ ಕಾಯಿ: 1,
ಒಣಮೆಣಸಿನ ಕಾಯಿ : 2 ಚೂರು

ವಿಧಾನ:
ಕ್ಯಾರಟ್  ತೆಗೆದು ತುರಿದು ಒಂದು ಪಾತ್ರೆಗೆ ಹಾಕಿ,  ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಮತ್ತು ಮೊಸರು ಹಾಕಿ. ತೆಂಗಿನ ತುರಿಗೆ  ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಇದಕ್ಕೆ ಸೇರಿಸಿಕೊಳ್ಳಿ. ನಂತರ ಉಪ್ಪು, ಸಕ್ಕರೆ, ಬೇಕಿದ್ದಲ್ಲಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಗ್ಗರಣೆ ಸೌಟಿಗೆ ಎಣ್ಣೆ, ಉದ್ದಿನ ಬೇಳೆ ಹಾಕಿ ಸ್ವಲ್ಪ ಕಂದು ಬಣ್ಣವಾದಾಗ ಒಣಮೆಣಸಿನ ಚೂರು, ಸಾಸಿವೆ ಹಾಕಿ ಸಿಡಿಸಿ.  ಇದಕ್ಕೆ ಹೆಚ್ಚಿದ ಹಸಿಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿದು ಮೊಸರು ಬಜ್ಜಿಗೆ ಹಾಕಿ ಚೆನ್ನಾಗಿ  ಕಲಕಿ. ಇದನ್ನು ಅನ್ನದ ಜೊತೆ ಅಥವಾ ಪಲಾವ್ ಇತ್ಯಾದಿ ರೈಸ್ ಬಾತ್ ಜೊತೆ ಸವಿಯಬಹುದು.   ಬುಧವಾರ, ಡಿಸೆಂಬರ್ 16, 2015

ಗೋಧಿ ಹಿಟ್ಟಿನ ದೋಸೆ :

ಸಾಮಗ್ರಿಗಳು:
ಗೋಧಿ ಹಿಟ್ಟು : 1 ಕಪ್,
ಅಕ್ಕಿ ಹಿಟ್ಟು : 1 ಟೇಬಲ್ ಚಮಚ,
ಬೆಲ್ಲ : 3-4 ಚಮಚ,
ತೆಂಗಿನ ತುರಿ : 2 ಚಮಚ,
ಉಪ್ಪು : ರುಚಿಗೆ 

ವಿಧಾನ :
ಮಿಕ್ಸಿಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ನೀರು ಹಾಕಿ ಗಂಟಿಲ್ಲದೇ ರುಬ್ಬಿ. ಅಥವಾ ಪಾತ್ರೆಗೆ ಹಾಕಿ ಸೌಟಿನಲ್ಲೇ ಗಂಟಿಲ್ಲದಂತೆ ಕಲಕಬಹುದು.
ಬೇರೆ ದೋಸೆ ಹಿಟ್ಟಿನಕಿಂತ ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಿ. ಇದಕ್ಕೆ ಬೆಲ್ಲ, ಉಪ್ಪು, ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಕಿ. ನಂತರ ಕಾದ ತವಾಗೆ ಎಣ್ಣೆ ಸವರಿ ತೆಳ್ಳಗೆ ದೋಸೆ ಮಾಡಿ ಎರಡೂ  ಕಡೆ ಬೇಯಿಸಿ.  


ಚಿತ್ರದಲ್ಲಿ ಇರುವುದಕ್ಕಿಂತ ಸ್ವಲ್ಪ ದಪ್ಪಗೆ ಕೂಡ ದೋಸೆ ಮಾಡಬಹುದು. ಬಿಸಿ ಬಿಸಿ, ಸಿಹಿ ದೋಸೆಯನ್ನು ತುಪ್ಪ ಮತ್ತು ಚಟ್ನಿಪುಡಿ ಜೊತೆ ಸರ್ವ್ ಮಾಡಿ. ಶುಕ್ರವಾರ, ಡಿಸೆಂಬರ್ 4, 2015

ಸ್ವೀಟ್ ಕಾರ್ನ್ ಸೂಪ್

ಸಾಮಗ್ರಿಗಳು:
ಸ್ವೀಟ್ ಕಾರ್ನ್ 1/2 ಕಪ್
ಕಾರ್ನ ಫ್ಲೋರ್ (ಜೋಳದ ಹಿಟ್ಟು) 2 ಟೇ. ಚಮಚ
ಈರುಳ್ಳಿ - 1/2
ಬೆಳ್ಳುಳ್ಳಿ - 2 ಎಸಳು
ಕಾಳುಮೆಣಸಿನ ಪುಡಿ
ಬೆಣ್ಣೆ.
ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ : ಸ್ವೀಟ್ ಕಾರ್ನ್ ಬೇಯಿಸಿಕೊಳ್ಳಿ. ಅದರಲ್ಲಿ ಅರ್ಧದಷ್ಟು ಬದಿಗಿಟ್ಟುಕೊಳ್ಳಿ. ಉಳಿದರ್ಧಕ್ಕೆ ಈರುಳ್ಳಿ ಬೆಳ್ಳುಳ್ಳಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಸೂಪ್ ಮಾಡುವ ಪಾತ್ರೆಗೆ ಸ್ವಲ್ಪ ಬೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ಇಡಿ. ಬೆಣ್ಣೆ ಕರಗಿದ ಮೇಲೆ ರುಬ್ಬಿದ ಮಿಶ್ರಣ ಹಾಕಿ ೨-೩ ನಿಮಿಷ ಫ್ರೈ ಮಾಡಿ. ನ೦ತರ ನೀರು ಉಪ್ಪು ಕೊತ್ತ೦ಬರಿಸೊಪ್ಪು ಸೇರಿಸಿ ಕುದಿಸಿ. ಕಾರ್ನ ಫ್ಲೋರ್ ನ್ನು ಸ್ವಲ್ಪ ನೀರು ಹಾಕಿ ಕದಡಿಕೊ೦ಡು (ಗ೦ಟಾಗದ೦ತೆ) ಸ್ವಲ್ಪ ಸ್ವಲ್ಪವಾಗಿ ಸೂಪ್ ಗೆ ಸೇರಿಸಿ. ಇದರಿ೦ದ ಸೂಪ್ ಹದವಾಗುತ್ತದೆ. ಕೊನೆಯಲ್ಲಿ ಕಾಳುಮೆಣಸಿನ ಪುಡಿ ಹಾಕಿ.  ಬದಿಗಿಟ್ಟ ಬೇಯಿಸಿದ ಸ್ವೀಟ್ ಕಾರ್ನ್ ಸ್ವಲ್ಪ ಸ್ವಲ್ಪ ಹಾಕಿ ಬಿಸಿ ಬಿಸಿ ಸೂಪ್ ಸರ್ವ ಮಾಡಿ.