ಶುಕ್ರವಾರ, ಫೆಬ್ರವರಿ 26, 2016

ಬೀಟ್ರೂಟ್ ಹಶಿ:

ಸಾಮಗ್ರಿಗಳು:
 ಬೀಟ್ರೂಟ್ - 1,
 ಈರುಳ್ಳಿ - 1
 ಮೊಸರು- 1/2 ಕಪ್ 
 ತೆ೦ಗಿನತುರಿ - 1/2 ಕಪ್
 ಹಸಿಮೆಣಸು - 2
 ಒಣಮೆಣಸು -1
 ಉದ್ದಿನಬೇಳೆ 1/2 ಟೀ.ಚಮಚ
ಸಾಸಿವೆ - 1/2 ಟೀ.ಚಮಚ
ಎಣ್ಣೆ - 1/2 ಟೇ. ಚಮಚ
ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ:  ಬೀಟ್ರೂಟ್ ನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಒ೦ದು ಚಿಕ್ಕಬಾಣಲೆಗೆ ಎಣ್ಣೆ ಹಾಕಿ ಅದು ಕಾದಮೇಲೆ ಉದ್ದಿನಬೇಳೆ, ಸಾಸಿವೆ, ಹಸಿಮೆಣಸು, ಒಣಮೆಣಸು ಹಾಕಿ, ಈಗ ಸಾಸಿವೆ ಚಿಟಪಟಿಸಿದಮೇಲೆ ಸಣ್ಣಗೆ ಹೆಚ್ಚಿದ ಬೀಟ್ರೂಟ್ ಉಪ್ಪು ಸ್ವಲ್ಪ ನೀರು ಹಾಕಿ ಬೀಟ್ರೂಟ್ ನ್ನು ಬೇಯಿಸಿ. ಬೀಟ್ರೂಟ್ ಬೆ೦ದ ಮೇಲೆ ಉರಿ ಆರಿಸಿ. ಈಗ ತೆ೦ಗಿನ ತುರಿಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೇಯಿಸಿದ ಬೀಟ್ರೂಟ್ ಬಿಸಿ ಆರಿದಮೇಲೆ ರುಬ್ಬಿದ ತೆ೦ಗಿನತುರಿ, ಮೊಸರು & ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿದರೆ ಬೀಟ್ರೂಟ್ ಹಶಿ ಅನ್ನದ ಜೊತೆ ತಿನ್ನಲು ಸಿದ್ಧ.

ಸೋಮವಾರ, ಫೆಬ್ರವರಿ 22, 2016

ಅರಿಶಿನ ಗೊಜ್ಜು :

ಸಾಮಗ್ರಿಗಳು :
ಹಸಿ ಅರಿಶಿನ ಕೊಂಬು - 2 ಇಂಚು 
ಒಣ ಮೆಣಸಿನ ಕಾಯಿ - 4-5 
ಉದ್ದಿನ ಬೇಳೆ - 1/2 ಚಮಚ
ಬಿಳಿ ಎಳ್ಳು - 1/2 ಚಮಚ 
ಎಣ್ಣೆ - 2 ಚಮಚ 
ತೆಂಗಿನ ತುರಿ - 1 ಕಪ್ 
ಹುಣಸೆ ಹಣ್ಣು - ಸಣ್ಣ ನೆಲ್ಲಿಕಾಯಿ ಗಾತ್ರ 
ಬೆಲ್ಲ - 3-4 ಚಮಚ 
ಉಪ್ಪು - ರುಚಿಗೆ 

ವಿಧಾನ :
ಹುಣಸೆ ಹಣ್ಣು ನೀರಿನಲ್ಲಿ ನೆನೆಸಿಡಿ. ಅರಿಶಿನ ಕೊಂಬನ್ನು ಚೆನ್ನಾಗಿ ತೊಳೆದು ತೆಳ್ಳಗೆ ಸ್ಲೈಸ್ ಮಾಡಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಉದ್ದಿನ ಬೇಳೆ, ಒಣ ಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿದು ಕತ್ತರಿಸಿಕೊಂಡ ಅರಿಶಿನ ಕೊಂಬನ್ನು ಹಾಕಿ ಒಂದೆರಡು ನಿಮಿಷ ಹುರಿಯಿರಿ. ಕೊನೆಯಲ್ಲಿ ಎಳ್ಳು ಹಾಕಿ ಹುರಿಯಿರಿ. 

ನಂತರ ಈ ಮಿಶ್ರಣವನ್ನು ತೆಂಗಿನ ತುರಿ, ಹುಣಸೆ ಹಣ್ಣು ಹಾಕಿ ರುಬ್ಬಿ. ಬಾಣಲೆಗೆ ರುಬ್ಬಿದ ಮಿಶ್ರಣ, ಉಪ್ಪು, ಬೆಲ್ಲ, ಸ್ವಲ್ಪನೀರು ಹಾಕಿ ಕುದಿಸಿ. ಮಳೆಗಾಲದ ತಂಪಿಗೆ ಬಿಸಿ ಬಿಸಿ ಅರಿಶಿನ ಗೊಜ್ಜನ್ನು ಬಿಸಿ ಬಿಸಿ ಅನ್ನದ ಜೊತೆ, ತುಪ್ಪ ಹಾಕಿ ಕಲಸಿಕೊಂಡು ಸವಿಯಿರಿ. 


ಸೂಚನೆ: 
ಖಾರ, ಸಿಹಿ, ಉಪ್ಪು ಎಲ್ಲಾ ಹದವಾಗಿದ್ದರೆ ರುಚಿ ಹೆಚ್ಚು. 

ಶುಕ್ರವಾರ, ಫೆಬ್ರವರಿ 12, 2016

ಬೀಟ್ರೂಟ್ ಚಟ್ನಿ :

ಸಾಮಗ್ರಿಗಳು : 
ಬೀಟ್ರೂಟ್ - 1
ತೆ೦ಗಿನತುರಿ  - ಟೇ. ಚಮಚ
ಒಣ ಮೆಣಸು - 3
ಜೀರಿಗೆ - 1/2 ಟೀ. ಚಮಚ
ಧನಿಯಾ - 1/2 ಟೀ. ಚಮಚ
ಉದ್ದಿನಬೇಳೆ - 1/2 ಟೀ. ಚಮಚ
ಉಪ್ಪು ರುಚಿಗೆ ತಕ್ಕಷ್ಟು, 
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಇ೦ಗು, ಕರಿಬೇವು.



ವಿಧಾನ : ಬೀಟ್ರೂಟ್ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ. ಒ೦ದು ಪಾತ್ರೆಗೆ ಹೆಚ್ಚಿದ ಬೀಟ್ರೂಟ್,ಒಣಮೆಣಸು, ಧನಿಯಾ, ಜೀರಿಗೆ, ಉದ್ದಿನಬೇಳೆ ಉಪ್ಪು & ಬೀಟ್ರೂಟ್ ಬೇಯುವಷ್ಟು ನೀರು ಹಾಕಿ ಒಲೆಯ ಮೇಲೆ ಇಟ್ಟು ಬೇಯಿಸಿ. ಬೇಯಿಸಿದ ಬೀಟ್ರೂಟ್ ಬಿಸಿ ಆರಿದಮೇಲೆ ಅದಕ್ಕೆ ತೆ೦ಗಿನ ತುರಿ ಸೇರಿಸಿ ರುಬ್ಬಿಕೊಳ್ಳಿ. ಬೇಯಿಸಿದ ನೀರು ಸ್ವಲ್ಪ ಉಳಿದಲ್ಲಿ ರುಬ್ಬುವಾಗ ಹಾಕಬಹುದು. ರುಬ್ಬಿದ ಮಿಶ್ರಣವನ್ನು ಒ೦ದು ಪಾತ್ರೆಗೆ ಹಾಕಿ. ಈಗ ಒಗ್ಗರಣೆ ಸೌಟಿಗೆ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ಮೇಲೆ ಸಾಸಿವೆ, ಕರಿಬೇವು ಇ೦ಗು ಹಾಕಿ ಸಾಸಿವೆ ಚಿಟಪಟ ಆದ ಕೂಡಲೆ ಈ ಒಗ್ಗರಣೆಯನ್ನು ಚಟ್ನಿಗೆ ಹಾಕಿ. ಈ ಚಟ್ನಿಯು ಅನ್ನದ  ಜೊತೆ ಅಷ್ಟೆ ಅಲ್ಲದೆ ಚಪಾತಿಯ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಗುರುವಾರ, ಫೆಬ್ರವರಿ 4, 2016

ಬೇರುಹಲಸು (ದೀವಿ ಹಲಸು) ಬಜೆ:

ಸಾಮಗ್ರಿಗಳು:
ಬೇರು ಹಲಸಿನ ಕಾಯಿ - ೧/೨ (ಚೆನ್ನಾಗಿ ಬಲಿತಿದ್ದು),
ಕಡಲೆ ಹಿಟ್ಟು - ೧.೫ ಕಪ್,
ಅಕ್ಕಿ ಹಿಟ್ಟು - ೧ ಚಮಚ,
ಒಣ ಮೆಣಸಿನ ಪುಡಿ - ೨ ಚಮಚ,
ಅಡುಗೆ ಸೋಡಾ - ಚಿಟಿಕೆ,
ಜೀರಿಗೆ ಪುಡಿ - ೧/೨ ಚಮಚ,
ಉಪ್ಪು - ರುಚಿಗೆ,
ಎಣ್ಣೆ - ಕರಿಯಲು

ವಿಧಾನ :
ಬೇರುಹಲಸಿನ ಸಿಪ್ಪೆ ತೆಗೆದು, ಮಧ್ಯದ ಗಟ್ಟಿ ಭಾಗ (ಮೂಗು) ತೆಗೆದು ಕೆಳಗೆ ಚಿತ್ರದಲ್ಲಿ ತೋರಿಸಿದಂತೆ ತೆಳುವಾಗಿ ಹೆಚ್ಚಿಕೊಳ್ಳಿ. 

ಒಂದು ಪಾತ್ರೆಗೆ ಎಣ್ಣೆ ಬಿಟ್ಟು ಉಳಿದೆಲ್ಲಾ ಸಾಮಗ್ರಿ ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹೆಚ್ಚಿದ ಬೇರುಹಲಸನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಸಂಜೆಯ ಟೀ / ಕಾಫಿ ಜೊತೆ ಬಿಸಿ ಬಿಸಿ ಬಜೆ ಸವಿಯಿರಿ.