ಸಾಮಗ್ರಿ : ಹೂಕೋಸು (Cauliflower) : 1 (ಮೀಡಿಯಂ ಗಾತ್ರದ್ದು), ಜೀರಿಗೆ: 1 - 1.5 ಚಮಚ, ಪೆಪ್ಪರ್ ಪೌಡರ್ : 1 - 1.5 ಚಮಚ, ತುಪ್ಪ : 4-5 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ವಿಧಾನ : ಹೂಕೋಸನ್ನು ಮಂಚೂರಿ ಗಾತ್ರದಲ್ಲಿ ಹೆಚ್ಚಿಕೊಂಡು ತೊಳೆದು ನೀರನ್ನು ಪೂರ್ತಿ ಬಸಿದುಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ಕಾದ ನಂತರ ಜೀರಿಗೆ ಹಾಕಿ. ಜೀರಿಗೆ ಹುರಿದ ನಂತರ ಪೆಪ್ಪರ್ ಪೌಡರ್ ಹಾಕಿ ತಕ್ಷಣ ಹೂಕೋಸನ್ನು ಹಾಕಿ, ಉಪ್ಪು ಹಾಕಿ ಕಲಸಿ ಮುಚ್ಚಿ. ಸಣ್ಣ ಉರಿಯಿರಲಿ. ಆಗಾಗ ಕೈ ಆಡಿಸುತ್ತಿರಿ. ನೀರು ಹಾಕುವುದು ಬೇಡ. ಮುಚ್ಚಳ ಮುಚ್ಚಿರುವುದರಿಂದ ಒಳಗಿನ ಉಗಿ ಮತ್ತು ತುಪ್ಪದಲ್ಲೇ ಹೂಕೋಸು ಬೇಯುತ್ತದೆ. ಟೇಸ್ಟ್ ನೋಡಿ ಖಾರ, ಉಪ್ಪು ಕಮ್ಮಿ ಇದ್ದಲ್ಲಿ ಸ್ವಲ್ಪ ಪೆಪ್ಪರ್ ಪೌಡರ್, ಉಪ್ಪು ಉದುರಿಸಿ ಮತ್ತೆ ಸ್ವಲ್ಪ ಫ್ರೈ ಮಾಡಿ. ಇದು 90% ನಷ್ಟು ಬೆಂದರೆ ಸಾಕು. ಚುಮು ಚುಮು ಮಳೆಯ ಸಂಜೆ ಬಿಸಿ ಬಿಸಿ ಗೋಭಿ ಚಾಟ್ ಸರ್ವ್ ಮಾಡಿ.....ಸ್ವಲ್ಪ ಬಾಯಿ ಚುರ್ ಎನ್ನುವಷ್ಟು ಖಾರವಿರುವ ಚಾಟ್ ಬಿಸಿ ಬಿಸಿ ತಿನ್ನಲು ಬಹು ರುಚಿ...
ಸೂಚನೆ: 1) ಒಳ್ಳೆಯ ತುಪ್ಪವನ್ನು ಬಳಸಿ.
2) ಇದಕ್ಕೆ ಉಪ್ಪು ತುಂಬಾ ಹಿಡಿಯುವುದಿಲ್ಲ. ಸ್ವಲ್ಪ ಹಾಕಿ ನೋಡಿಕೊಳ್ಳಿ, ಬೇಕಿದ್ದರೆ ಮತ್ತೆ ಸೇರಿಸಬಹುದು.
ಇಲ್ಲೊಂದು ಟಿಪ್ಸ್: ನೀರನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಉಪ್ಪು, ಅರಿಶಿನ ಹಾಕಿ, ಹೆಚ್ಚಿದ ಹೂಕೋಸನ್ನು ಹಾಕಿ 5 ನಿಮಿಷ ನೆನೆಸಿ ತೆಗೆದರೆ ಅದರಲ್ಲಿ ಕಾಣದೆ ಉಳಿದ ಕ್ರಿಮಿಗಳು ನಾಶವಾಗುತ್ತವೆ.
ಕಾವ್ಯಾ :)