ಗುರುವಾರ, ಏಪ್ರಿಲ್ 14, 2016

ಟೊಮೇಟೊ ಬಾತ್ :

ಸಾಮಗ್ರಿಗಳು :
ಅಕ್ಕಿ - 1 ಕಪ್, 
ಟೊಮೇಟೊ -  3,
ಈರುಳ್ಳಿ - 1(ದೊಡ್ಡದು), 
ವಾಂಗಿಬಾತ್ ಪುಡಿ - 2 ಟೇಬಲ್ ಚಮಚ,
ತೆಂಗಿನ ತುರಿ - 2-3 ಟೇಬಲ್ ಚಮಚ, 
ಸಕ್ಕರೆ - 1/2 ಟೇಬಲ್ ಚಮಚ,
ಎಣ್ಣೆ - 4 ಟೇಬಲ್ ಚಮಚ, 
ಸಾಸಿವೆ - 1/2 ಟೇಬಲ್ ಚಮಚ,
ಅರಿಶಿನ ಪುಡಿ - 1/4 ಟೇಬಲ್ ಚಮಚ,
ಕರಿಬೇವು - 1 ಎಸಳು, 
ಉಪ್ಪು - ರುಚಿಗೆ ತಕ್ಕಷ್ಟು  

ವಿಧಾನ :
ಅಕ್ಕಿ ತೊಳೆದು ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ. ಟೊಮೇಟೊವನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಸಣ್ಣಗೆ ಅಥವಾ ಉದ್ದುದ್ದ ಹೆಚ್ಚಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿ ಸಿಡಿದ ನಂತರ ಕರಿಬೇವು ಹಾಕಿ. ನಂತರ ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಅರಿಶಿನ ಪುಡಿ, ಹೆಚ್ಚಿದ ಟೊಮೇಟೊ, ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಫ್ರೈ ಮಾಡಿ. ಟೊಮೇಟೊ ಚೆನ್ನಾಗಿ ಮೆತ್ತಗಾದ ಮೇಲೆ ತೆಂಗಿನ ತುರಿ ಹಾಕಿ,  ವಾಂಗಿಬಾತ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 1 ನಿಮಿಷ ಫ್ರೈ ಮಾಡಿ ಉರಿ ಆರಿಸಿ. ಇದಕ್ಕೆ ಅನ್ನ ಹಾಕಿ ಕಲಸಿದರೆ ಟೊಮೇಟೊ ಬಾತ್ ತಯಾರಾದಂತೆ. ಸಲಹೆ: ಇದೇ ತರಹ ಟೊಮೇಟೊ ಬಾತ್ ಬದಲು ಸಣ್ಣಗೆ ಹೆಚ್ಚಿದ ಮೆಂತ್ಯ ಸೊಪ್ಪು ಹಾಕಿ ಟೊಮೇಟೊ ಬಾತ್ ಮಾಡಬಹುದು. ಮೆಂತ್ಯ ಸೊಪ್ಪಿಗೆ ಸ್ವಲ್ಪ ಹುಳಿ, ಸ್ವಲ್ಪ ಸಕ್ಕರೆ ಹಾಕಿ ಫ್ರೈ ಮಾಡಿಕೊಂಡರೆ ಕಹಿ ಅಂಶ ಇರುವುದಿಲ್ಲ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ