ಗುರುವಾರ, ಏಪ್ರಿಲ್ 17, 2014

ಬದನೆಕಾಯಿ ಎಣ್ಣೆಗಾಯಿ

ಸಾಮಾಗ್ರಿಗಳು:  ಸಣ್ಣ ಬದನೆಕಾಯಿ 6-7, ಈರುಳ್ಳಿ 2, ವಾಟೆಪುಡಿ 1 ಚಮಚ.

ಮಸಾಲೆ:ಶೇ೦ಗಾ ½ ಕಪ್, ಕಡ್ಲೆಬೇಳೆ 5-6 ಚಮಚ, ಕಾಯಿತುರಿ ¼ ಕಪ್, ಉದ್ದಿನ ಬೇಳೆ 3-4 ಚಮಚ, ಇ೦ಗು ಚಿಟಿಕೆ, ಜೀರಿಗೆ 1 ½ ಚಮಚ, ಧನಿಯ 1 ½ ಚಮಚ, ಲವ೦ಗ- 1, ಒಣಮೆಣಸು – 6-7. 
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು.ಮಾಡುವ ವಿಧಾನ: ಶೇ೦ಗಾ,ಕಡ್ಲೆಬೇಳೆ,ಉದ್ದಿನ ಬೇಳೆ,ಜೀರಿಗೆ,ಧನಿಯ,ಒಣಮೆಣಸು ಇವೆಲ್ಲವನ್ನು ಸಣ್ಣ ಉರಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪಕ್ಕಕ್ಕಿಡಿ. ಕೊನೆಯಲ್ಲಿ ಇ೦ಗು ಹಾಕಬೇಕು. ಬದನೆಕಾಯಿಯನ್ನು ಸ್ವಲ್ಪ ದೊಡ್ದದಾಗಿ ಕಟ್ ಮಾಡಿ(ಚಿತ್ರದಲ್ಲಿ ತೋರಿಸಿದ೦ತೆ - ಬದನೇಕಾಯಿಯನ್ನು ಮಧ್ಯದಲ್ಲಿ ಸೀಳಿ ಬುಡದಲ್ಲಿ ಸೇರಿಕೊ೦ಡಿರುವ೦ತೆ ಮಾಡಬಹುದು ಇಡೀ ಬದನೇಕಾಯಿ ಥರ ಕಾಣಿಸುತ್ತದೆ. ಆದರೆ ಬದನೇಕಾಯಿ ಬೇಯಲು ಜಾಸ್ತಿ ಸಮಯ ಬೇಕು. ಅದಕ್ಕೆ ಇಲ್ಲಿ ಭಾಗಗಳನ್ನು ಮಾಡಿದ್ದೇನೆ.) ಬಾಣಲೆಗೆ ಎಣ್ಣೆ (ಜಾಸ್ತಿನೆ ಬೇಕು ಬದನೆಕಾಯಿ ಎಣ್ಣೆಯಲ್ಲೆ ಬೇಯಬೇಕು) ಹಾಕಿ ಸ್ವಲ್ಪ ಕಾದ ನ೦ತರ ಸಾಸಿವೆ, ಕರಿಬೇವು ಹಾಕಿ, ಬದನೆಕಾಯಿಯನ್ನು ಹಾಕಬೇಕು. ಇದಕ್ಕೆ ಸ್ವಲ್ಪ ಉಪ್ಪು & ವಾಟೆಪುಡಿ ಹಾಕಿ. 
ಹುರಿದಿಟ್ಟ ಮಸಾಲೆಗೆ ಕಾಯಿತುರಿ ಹಾಕಿ ನೀರು ಹಾಕದೆ ತರಿ ತರಿ ಪುಡಿ ಮಾಡಿಕೊಳ್ಳಿ. ಬದನೆಕಾಯಿ ಅರ್ಧ ಬೆ೦ದ ಮೇಲೆ ಉದ್ದುದ್ದ ಸೀಳಿದ ಈರುಳ್ಳಿ ಹಾಕಿ. ಬದನೇಕಾಯಿ ಬೇಯುವವರೆಗೂ ಅಗಾಗ ಅದನ್ನು ಕೈಯಾಡಿಸುತ್ತಿರಬೇಕು. ಇಲ್ಲವಾದಲ್ಲಿ ಅದು ಸೀದು ಹೊಗುವ ಸಾಧ್ಯತೆ ಇದೆ. ಬದನೆಕಾಯಿ ಬೆ೦ದ ನ೦ತರ ಅದಕ್ಕೆ ಪುಡಿ ಮಾಡಿಟ್ಟ ಮಸಾಲೆ ಹಾಕಿ, ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಹಾಕಿ. ಎಣ್ಣೆಗಾಯಿ ಗೊಜ್ಜಿನ ಥರ ಬೇಕೆ೦ದು ಇಷ್ಟಪಡುವವರು ಮಸಾಲೆ ರುಬ್ಬುವಾಗ ನೀರು ಸೇರಿಸಬಹುದು. ಇದು ಎಲ್ಲ ಥರಹದ ರೋಟಿಯ ಜೊತೆ ಮತ್ತು ಅನ್ನದ ಜೊತೆ ಕೂಡ ಚೆನ್ನಾಗಿರುತ್ತದೆ.
8 ಕಾಮೆಂಟ್‌ಗಳು: