ಸಾಮಗ್ರಿಗಳು :
ಫಾರ್ಮ್ ಟೊಮೇಟೊ - 4-5,
ಮಧ್ಯಮ ಗಾತ್ರದ ಈರುಳ್ಳಿ - 2,
ತೆಂಗಿನ ತುರಿ - 3-4 ಚಮಚ,
ಬೆಳ್ಳುಳ್ಳಿ - 5-6 ಎಸಳು (ಜಜ್ಜಿಕೊಳ್ಳಿ),
ಎಣ್ಣೆ - 4 ಚಮಚ,
ಜೀರಿಗೆ - ಸಾಸಿವೆ - ತಲಾ 1/2 ಚಮಚ,
ಕರಿಬೇವು - 1 ಎಸಳು,
ಹೆಚ್ಚಿದ ಕೊತ್ತಂಬರಿ ಸೊಪ್ಪು - 1 ಚಮಚ,
ಹೆಚ್ಚಿದ ಕೊತ್ತಂಬರಿ ಸೊಪ್ಪು - 1 ಚಮಚ,
ಅಚ್ಚ ಮೆಣಸಿನ ಪುಡಿ - 1 ಚಮಚ (ಅಥವಾ ನಿಮ್ಮ ಖಾರಕ್ಕೆ ತಕ್ಕಷ್ಟು)
ಗರಂ ಮಸಾಲ ಪುಡಿ - 1/2 ಚಮಚ,
ಅರಿಶಿನ ಪುಡಿ - 1/4 ಚಮಚ,
ಸಕ್ಕರೆ - 1 ಚಮಚ,
ಉಪ್ಪು - ರುಚಿಗೆ
ವಿಧಾನ :
ಟೊಮೇಟೊ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಜೀರಿಗೆ, ಸಾಸಿವೆ ಹಾಕಿ ಸಿಡಿಸಿ. ನಂತರ ಇದಕ್ಕೆ ಕರಿಬೇವು, ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಹೆಚ್ಚಿದ ಈರುಳ್ಳಿ, ಅರಶಿನ ಪುಡಿ ಹಾಕಿ ಎರಡು ನಿಮಿಷ ಫ್ರೈ ಮಾಡಿ. ಹೆಚ್ಚಿದ ಟೊಮೇಟೊ ಹಾಕಿ, ಉಪ್ಪು, ಸಕ್ಕರೆ ಹಾಕಿ ಟೊಮೇಟೊ ಮೆತ್ತಗಾಗುವ ತನಕ ಫ್ರೈ ಮಾಡಿ. ನಂತರ ಇದಕ್ಕೆ ಅಚ್ಚ ಮೆಣಸಿನ ಪುಡಿ, ಗರಂ ಮಸಾಲ ಪುಡಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದೆರಡು ನಿಮಿಷ ಬೇಯಿಸಿದರೆ ಬಿಸಿ ಬಿಸಿ ಟೊಮೇಟೊ ಗೊಜ್ಜು ದೋಸೆ, ಚಪಾತಿ, ರೋಟಿ ಜೊತೆ ಸವಿಯಲು ಸಿಧ್ಧ.
ಸಲಹೆ:
ಅಚ್ಚ ಖಾರದ ಪುಡಿ ಬದಲು ಹಸಿಮೆಣಸಿನಕಾಯಿ ಹಾಕಬಹುದು.
ಸಲಹೆ:
ಅಚ್ಚ ಖಾರದ ಪುಡಿ ಬದಲು ಹಸಿಮೆಣಸಿನಕಾಯಿ ಹಾಕಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ