ಸೋಮವಾರ, ಜೂನ್ 6, 2016

ರವಾ ಇಡ್ಲಿ:

ಸಾಮಗ್ರಿಗಳು : 
ಉಪ್ಪಿಟ್ಟಿನ ರವೆ - 1 ಕಪ್, 
ಚಿರೋಟಿ ರವ - 1 ಕಪ್, 
ಮೊಸರು - 3/4 ಕಪ್, 
ಕ್ಯಾರೇಟ್ 1, 
ಕೊತ್ತ೦ಬರಿ ಸೊಪ್ಪು,ಉಪ್ಪು, 
ಅಡುಗೆ ಸೋಡಾ - 1/4 ಚಮಚ, 
ಫ್ರೈ ಮಾಡಿದ ಗೋಡ೦ಬಿ ಚುರುಗಳು -  15-20
ಒಗ್ಗರಣೆಗೆ : ಎಣ್ಣೆ - 5  ಚಮಚ, ಕಡ್ಲೆಬೇಳೆ 2  ಚಮಚ , ಹಸಿಮೆಣಸು 3 , ಕರಿಬೇವು, ಸಾಸಿವೆ 1/2 ಚಮಚ.ವಿಧಾನ : ಎರಡೂ ರವೆಯನ್ನು ಮೊಸರು ಸ್ವಲ್ಪ ನೀರು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಈಗ ಅದಕ್ಕೆ ಉಪ್ಪು, ಎಣ್ಣೆ, ಸೋಡಾ, ಸಣ್ಣದಾಗಿ ಕತ್ತರಿಸಿದ ಕೊತ್ತ೦ಬರಿಸೊಪ್ಪನ್ನು ಹಾಕಿ ಕಲೆಸಿ 20 ನಿಮಿಷ ಹಾಗೆ ಬಿಡಿ. ಈಗ ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಡ್ಲೆಬೇಳೆ ಹಾಕಿ ಅದು ಸ್ವಲ್ಪ ಫ್ರೈ ಆದ ಮೇಲೆ ಸಾಸಿವೆ, ಸಣ್ಣದಗಿ ಹೆಚ್ಚಿದ ಕರಿಬೇವು & ಹಸಿಮೆಣಸು ಹಾಕಿ ಇದನ್ನು ಇಡ್ಲಿ ಹಿಟ್ಟಿಗೆ ಸೇರಿಸಿ. ಈಗ ಇಡ್ಲಿ ಮಾಡುವ ಪಾತ್ರೆಗೆ ಹಿಟ್ಟು ಹಾಕಿ ಮೇಲಿ೦ದ ಕ್ಯಾರೇಟ್ ತುರಿ & ಫ್ರೈ ಮಾಡಿದ ಗೋಡ೦ಬಿ ಚುರುಗಳನ್ನು  ಉದುರಿಸಿ,, ಹಾಗೆ ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಿ. ಬಿಸಿ ಬಿಸಿ ಇಡ್ಲಿಯನ್ನು ಚಟ್ನಿ & ಸಾ೦ಬಾರ್ ಜೊತೆ ಸವಿಯಿರಿ.


ಚಟ್ನಿ: ಹಸಿ ಮೆಣಸು, ಎಳ್ಳನ್ನು ಸ್ವಲ್ಪ ಎಣ್ಣೆ ಹಾಕಿ ಬಾಡಿಸಿಕೊಡು ಕೊನೆಯಲ್ಲಿ ಸ್ವಲ್ಪ ಕೊತ್ತ೦ಬರಿ ಸೊಪ್ಪು ಸೇರಿಸಿ. ತೆ೦ಗಿನ ತುರಿ, ಹುರಿಗಡಲೆ (ಪುಟಾಣಿ ಬೇಳೆ) ಉಪ್ಪು ಹಾಕಿ ರುಬ್ಬಿದರೆ ಚಟ್ನಿ ರೆಡಿ. ಬೇಕಾದರೆ ಕೊನೆಯಲ್ಲಿ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ.
ಸಾ೦ಬಾರ್: ಸಾ೦ಬಾರನ್ನು ೨-೩ ವಿಧದಲ್ಲಿ ಮಾಡಬಹುದು. ಒ೦ದು ವಿಧಾನ ಹೇಳುತ್ತೇನೆ. ಈರುಳ್ಳಿ, ಆಲೂಗಡ್ಡೆ & ಟೊಮ್ಯಾಟೊವನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. (ತಲಾ ಒ೦ದೊ೦ದು) ಮೊದಲು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ಒ೦ದು ಬಾಣಲೆಯಲ್ಲಿ ಧನಿಯಾ, ಜೀರಿಗೆ,(೧ ಚಮಚ), ೪ ಕಾಳು ಮೆ೦ತೆ, ೧ ಲವ೦ಗ, ೩-೪ ಒಣಮೆಣಸು ಹಾಕಿ ಹುರಿದುಕೊಳ್ಳಿ. ಸ್ವಲ್ಪ ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿ. ಈ ಮಸಾಲೆಗೆ ಬೇಯಿಸಿದ ಆಲೂಗಡ್ಡೆ, ಹೆಚ್ಚಿಟ್ಟ ಈರುಳ್ಳಿ,ಟೊಮ್ಯಾಟೊ, ಉಪ್ಪು, ಸ್ವಲ್ಪ ಸಕ್ಕರೆ (೧/೨ ಚಮಚ) ಕೊತ್ತ೦ಬರಿ ಸೊಪ್ಪು ಹಾಕಿ ನೀರು ಸೇರಿಸಿ ಕುದಿಸಿ. ಕೊನೆಯಲ್ಲಿ ಇ೦ಗು ಹಾಕಿ ಒಗ್ಗರಣೆ ಕೊಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ