ಸಾಮಗ್ರಿಗಳು:
ಹುಳಿ ಸಿಹಿ ಮಾವಿನಹಣ್ಣು - 5-6
ಉಪ್ಪು ರುಚಿಗೆ ತಕ್ಕಷ್ಟು
ಬೆಲ್ಲ -2 ಚಮಚ,
ತೆ೦ಗಿನತುರಿ 1/2 ಕಪ್,
ಸಾಸಿವೆ 1/2 ಚಮಚ ,
ಹಸಿ ಮೆಣಸು-1,
ಅರಿಶಿನ - ದೊಡ್ಡ ಚಿಟಿಕೆ.
ಒಗ್ಗರಣೆಗೆ : ಎಣ್ಣೆ, ಒಣಮೆಣಸು, ಸಾಸಿವೆ.
ವಿಧಾನ : ತೆ೦ಗಿನತುರಿ, ಹಸಿ ಮೆಣಸು, ಸಾಸಿವೆ, ಅರಿಶಿನ ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಾವಿನಹಣ್ಣಿನ ಸಿಪ್ಪೆ ತೆಗೆದು ಅದಕ್ಕೆ ಉಪ್ಪು ಬೆಲ್ಲ ಹಾಕಿ ಕಿವಿಚಿ. ರುಬ್ಬಿದ ಮಿಶ್ರಣವನ್ನು ಇದಕ್ಕೆ ಹಾಕಿ. ನ೦ತರ ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಬಿಸಿ ಆದಮೇಲೆ ಒಣಮೆಣಸು ಸಾಸಿವೆ ಹಾಕಿ ಅದು ಚಿಟಪಟಿಸಿದ ಮೇಲೆ ಸಾಸಿವೆಗೆ ಒಗ್ಗರಣೆ ಸೇರಿಸಿದರೆ ಮಾವಿನಹಣ್ಣಿನ ಸಾಸಿವೆ ಅನ್ನದ ಜೊತೆ ಸವಿಯಲು ಸಿದ್ಧ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ