ಗುರುವಾರ, ಏಪ್ರಿಲ್ 28, 2016

ಟೊಮೇಟೊ ಸಾರು 2:


ಸಾಮಗ್ರಿಗಳು: 
ಸಣ್ಣಗೆ ಹೆಚ್ಚಿದ ಟೊಮೇಟೊ 1 ಕಪ್, ಉದ್ದುದ್ದ ಹೆಚ್ಚಿದ ಈರುಳ್ಳಿ 1 ಕಪ್, ಬೆಳ್ಳುಳ್ಳಿ 5-6 ಎಸಳು, ರಸಂ ಪುಡಿ 1/2 ಚಮಚ, ಉದ್ದ ಸೀಳಿದ ಹಸಿಮೆಣಸಿನ ಕಾಯಿ 1, ಅಚ್ಚ ಖಾರದ ಪುಡಿ 1/4 ಚಮಚ, ಕರಿಬೇವು 8-10 ಎಲೆಗಳು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಎಣ್ಣೆ 2-3 ಚಮಚ, ಜೀರಿಗೆ - ಸಾಸಿವೆ  ತಲಾ 1/2 ಚಮಚ, ಉಪ್ಪು ರುಚಿಗೆ

ವಿಧಾನ : 
ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ ಸಿಡಿದ ಮೇಲೆ ಹಸಿಮೆಣಸಿನ ಕಾಯಿ, ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಬಾಡಿಸಿ. ನಂತರ ಈರುಳ್ಳಿ ಹಾಕಿ 1 ನಿಮಿಷ ಹುರಿದು, ಸಣ್ಣ ಹೆಚ್ಚಿದ ಟೊಮೇಟೊ ಹಾಕಿ ಸ್ವಲ್ಪ ಉಪ್ಪು ಹಾಕಿ ಅದು ಮೆತ್ತಗಾಗುವ ತನಕ ಹುರಿಯಿರಿ. ಇದಕ್ಕೆ ರಸಂ ಪುಡಿ, ಅಚ್ಚ ಖಾರದ ಪುಡಿ (ರಸಂ ಪುಡಿ ಖಾರವಿದ್ದರೆ ಖಾರದ ಪುಡಿ ಹಾಕಬೇಕಾಗಿಲ್ಲ) ಹಾಕಿ ಕಲಕಿ ನಂತರ ಕರಿಬೇವು, ಕೊತ್ತಂಬರಿ ಸೊಪ್ಪು ೨-೩ ಕಪ್ ನೀರು ಹಾಕಿ. ಬೇಕಿದ್ದರೆ ಸ್ವಲ್ಪ ಉಪ್ಪು ಹಾಕಿ ಕುದಿಸಿ ದಿಡೀರ್ ಸಾರು ಸವಿಯಲು ಸಿದ್ಧ. 


(ವಿಜಯವಾಣಿ ಪತ್ರಿಕೆಗೆ ಕಳಿಸಿ ಪ್ರಕಟವಾದ ಅಡುಗೆ)

ಶುಕ್ರವಾರ, ಏಪ್ರಿಲ್ 22, 2016

ಸಿಹಿ ಚಪಾತಿ:

ಸಾಮಗ್ರಿಗಳು: ಗೋಧಿ ಹಿಟ್ಟು - 2 ಕಪ್, ಸಕ್ಕರೆ 4-5 ಟೇ. ಚಮಚ, ತುಪ್ಪ - 4-5 ಟೇ. ಚಮಚ, ಉಪ್ಪು ರುಚಿಗೆ ತಕ್ಕಷ್ಟು.





ವಿಧಾನ: ಗೋಧಿಹಿಟ್ಟಿಗೆ ಉಪ್ಪು ನೀರು ಹಾಕಿ ಚಪಾತಿ ಹಿಟ್ಟನ್ನು ಕಲೆಸಿಕೊಳ್ಳಿ. ಉ೦ಡೆ ಮಾಡಿ ಗೋಲವಾಗಿ ಲಟ್ಟಿಸಿ ಅದರ ಮೇಲೆ ಸಕ್ಕರೆ ಹರಡಿ. ಈಗ ಸ್ವಲ್ಪ ತುಪ್ಪ ಹಾಕಿ ತ್ರಿಕೋನಾಕಾರದಲ್ಲಿ ಮಡಿಸಿ ಮತ್ತೆ ಲಟ್ಟಿಸಿ, ಒಲೆಯ ಮೇಲೆ ರೋಟಿ ಕಾವಲಿ ಇಟ್ಟು ಅದು ಕಾದ ಮೇಲೆ ಸಣ್ಣ ಉರಿಯಲ್ಲಿ ಸಿಹಿ ಚಪಾತಿಯನ್ನು ಬೇಯಿಸಿ. ಬೇಯಿಸುವಾಗ ಮತ್ತೆ ತುಪ್ಪ ಹಾಕಬಹುದು. ಇದನ್ನು ಮಕ್ಕಳು ತು೦ಬಾ ಇಷ್ಟಪಡುತ್ತಾರೆ. 

ಗುರುವಾರ, ಏಪ್ರಿಲ್ 14, 2016

ಟೊಮೇಟೊ ಬಾತ್ :

ಸಾಮಗ್ರಿಗಳು :
ಅಕ್ಕಿ - 1 ಕಪ್, 
ಟೊಮೇಟೊ -  3,
ಈರುಳ್ಳಿ - 1(ದೊಡ್ಡದು), 
ವಾಂಗಿಬಾತ್ ಪುಡಿ - 2 ಟೇಬಲ್ ಚಮಚ,
ತೆಂಗಿನ ತುರಿ - 2-3 ಟೇಬಲ್ ಚಮಚ, 
ಸಕ್ಕರೆ - 1/2 ಟೇಬಲ್ ಚಮಚ,
ಎಣ್ಣೆ - 4 ಟೇಬಲ್ ಚಮಚ, 
ಸಾಸಿವೆ - 1/2 ಟೇಬಲ್ ಚಮಚ,
ಅರಿಶಿನ ಪುಡಿ - 1/4 ಟೇಬಲ್ ಚಮಚ,
ಕರಿಬೇವು - 1 ಎಸಳು, 
ಉಪ್ಪು - ರುಚಿಗೆ ತಕ್ಕಷ್ಟು  

ವಿಧಾನ :
ಅಕ್ಕಿ ತೊಳೆದು ಉದುರುದುರಾಗಿ ಅನ್ನ ಮಾಡಿಟ್ಟುಕೊಳ್ಳಿ. ಟೊಮೇಟೊವನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಸಣ್ಣಗೆ ಅಥವಾ ಉದ್ದುದ್ದ ಹೆಚ್ಚಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿ ಸಿಡಿದ ನಂತರ ಕರಿಬೇವು ಹಾಕಿ. ನಂತರ ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಅರಿಶಿನ ಪುಡಿ, ಹೆಚ್ಚಿದ ಟೊಮೇಟೊ, ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಫ್ರೈ ಮಾಡಿ. ಟೊಮೇಟೊ ಚೆನ್ನಾಗಿ ಮೆತ್ತಗಾದ ಮೇಲೆ ತೆಂಗಿನ ತುರಿ ಹಾಕಿ,  ವಾಂಗಿಬಾತ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 1 ನಿಮಿಷ ಫ್ರೈ ಮಾಡಿ ಉರಿ ಆರಿಸಿ. ಇದಕ್ಕೆ ಅನ್ನ ಹಾಕಿ ಕಲಸಿದರೆ ಟೊಮೇಟೊ ಬಾತ್ ತಯಾರಾದಂತೆ. 



ಸಲಹೆ: ಇದೇ ತರಹ ಟೊಮೇಟೊ ಬಾತ್ ಬದಲು ಸಣ್ಣಗೆ ಹೆಚ್ಚಿದ ಮೆಂತ್ಯ ಸೊಪ್ಪು ಹಾಕಿ ಟೊಮೇಟೊ ಬಾತ್ ಮಾಡಬಹುದು. ಮೆಂತ್ಯ ಸೊಪ್ಪಿಗೆ ಸ್ವಲ್ಪ ಹುಳಿ, ಸ್ವಲ್ಪ ಸಕ್ಕರೆ ಹಾಕಿ ಫ್ರೈ ಮಾಡಿಕೊಂಡರೆ ಕಹಿ ಅಂಶ ಇರುವುದಿಲ್ಲ. 

ಶುಕ್ರವಾರ, ಏಪ್ರಿಲ್ 8, 2016

ಪಲಾವ್ - 2

ಸಾಮಗ್ರಿಗಳು:
ಅಕ್ಕಿ – 1 ಕಪ್, ಎಣ್ಣೆ 3 ಚಮಚ, ಲಿ೦ಬುರಸ ಉಪ್ಪು ರುಚಿಗೆ ತಕ್ಕಷ್ಟು.
ತರಕಾರಿಗಳು: ಬೀನ್ಸ್,ಕ್ಯಾರೇಟ್,ಆಲೂ,ಹೂಕೋಸು,ಹಸಿಬಟಾಣಿ – 1 ಕಪ್ - ಈರುಳ್ಳಿ - 1, ಟೊಮ್ಯಾಟೊ ಚಿಕ್ಕದಾಗಿ ಹೆಚ್ಚಿಕೊಳ್ಳಿ
ಮಸಾಲೆಗೆ: ಚಕ್ಕೆ 2ಇ೦ಚುಮೊಗ್ಗು 2 ದಳ,ಲವ೦ಗ 4ಪುದಿನಾಸೊಪ್ಪು 8-10 ಎಲೆಗಳು,ಕೊತ್ತ೦ಬರಿಸೊಪ್ಪು ½ ಹಿಡಿ,ಹಸಿಮೆಣಸು 4,ಈರುಳ್ಳಿ ½ ಕಸೂರಿ ಮೇಥಿ 2 ಚಮಚ
ಬೆಳ್ಳುಳ್ಳಿ 4 ಎಸಳು,ಶು೦ಟಿ ½ ಇ೦ಚು, ಕಾಳುಮೆಣಸು 5-6.




ವಿಧಾನ : ತರಕಾರಿಗಳನ್ನು ಬೇಕಾದ ಆಕಾರಕ್ಕೆ (ಸಾಮಾನ್ಯವಾಗಿ ಉದ್ದುದ್ದಕ್ಕೆ ಕತ್ತರಿಸುವುದು) ಕತ್ತರಿಸಿಕೊಳ್ಳಿ. ಹಸಿ ಮೆಣಸು, ಬೆಳ್ಳುಳ್ಳಿ & ಶು೦ಟಿಯನ್ನು ನುಣ್ಣಗೆ ಜಜ್ಜಿಕೊಳ್ಳಿ. ಕುಕ್ಕರ್ ಗೆ ಎಣ್ಣೆ ಹಾಕಿಕೊ೦ಡು,ಚಕ್ಕೆ, ಲವ೦ಗ, ಮೊಗ್ಗು ಹಾಕಿ ಸ್ವಲ್ಪ ಫ್ರೈ ಮಾಡಿ ನ೦ತರ ಜಜ್ಜಿಟ್ಟ ಹಸಿ ಮೆಣಸು, ಬೆಳ್ಳುಳ್ಳಿ & ಶು೦ಟಿ ಕತ್ತರಿಸಿದ ಈರುಳ್ಳಿ, ಪುದಿನಾಸೊಪ್ಪು,ಟೊಮ್ಯಾಟೊ ಹಾಕಿ ಫ್ರೈ ಮಾಡಿ. ಈಗ ಹೆಚ್ಚಿದ ತರಕಾರಿಗಳು, ತೊಳೆದ ಅಕ್ಕಿ ಹಾಕಿ 2 ನಿಮಿಷ ಫ್ರೈ ಮಾಡಿ ನ೦ತರ ಉಪ್ಪು, ನಿ೦ಬೆ ರಸ, ಸಣ್ಣದಾಗಿ ಹೆಚ್ಚಿದ ಕೊತ್ತ೦ಬರಿಸೊಪ್ಪು, ಕಸೂರಿ ಮೇಥಿ  ಹಾಕಿ 2 ಕಪ್ ನೀರು ಹಾಕಿ ಮಿಕ್ಸ್ ಮಾಡಿ. ಉಪ್ಪು ಹುಳಿ ಖಾರ ಸರಿಯಾಗಿದೆಯೇ ಎ೦ದು ರುಚಿ ನೋಡಿಕೊಳ್ಳಿ. ಬೇಕಾದ್ದನ್ನು ಸೇರಿಸಿ. ಎಲ್ಲಾ ಸರಿ ಇದ್ದರೆ ಕುಕ್ಕರ್ ನ ಮುಚ್ಚಳ ಹಾಕಿ 3 ವಿಷಲ್ ಕೂಗಿಸಿ.

ಮೊಸರು ಬಜ್ಜಿ (ರಾಯ್ತ) :ಸವತೆಕಾಯಿ, ಟೊಮ್ಯಾಟೊಕೊತ್ತಂಬರಿ ಸೊಪ್ಪು,
 ಈರುಳ್ಳಿ ಇವೆಲ್ಲವನ್ನು ಸಣ್ಣದಾಗಿ ಹೆಚ್ಚಿಕೊ೦ಡು ಇದಕ್ಕೆ ಉಪ್ಪು ಸ್ವಲ್ಪ ಸಕ್ಕರೆ ಮೊಸರು ಸೇರಿಸಿದರೆ ಮೊಸರು ಬಜ್ಜಿ  ಸಿದ್ದ.

ಶುಕ್ರವಾರ, ಏಪ್ರಿಲ್ 1, 2016

ರವೆ ದೋಸೆ:


ಸಾಮಗ್ರಿಗಳು: 
ಉಪ್ಪಿಟ್ಟಿನ ರವೆ 2 ಕಪ್, ತೆಂಗಿನ ತುರಿ 2 ಚಮಚ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು 1 ಚಮಚ, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ 1 ಚಮಚ, ಉಪ್ಪು- ರುಚಿಗೆ

ವಿಧಾನ: 
ರವೆಗೆ ಒಮ್ಮೆ ನೀರು ಹಾಕಿ ತೊಳೆದು ಬಸಿದುಕೊಂಡು ಮತ್ತೆ ಅದು ಮುಳುಗುವಷ್ಟು ನೀರು ಹಾಕಿ 10-15 ನಿಮಿಷ ನೆನೆಯಲು ಬಿಡಿ. ಇದು ನೆನೆದ ಮೇಲೆ ಒಂದು ತಟ್ಟೆಗೆ ನೀರನ್ನು ಪೂರ್ತಿಯಾಗಿ ಬಸಿದುಕೊಂಡು, ನೆಂದ ರವೆಯನ್ನು ಮಿಕ್ಸಿಗೆ ಹಾಕಿ 4-5 ಸೆಕೆಂಡ್ ರುಬ್ಬಿ ತೆಗೆಯಿರಿ. ಬಸಿದಿಟ್ಟುಕೊಂಡ ನೀರನ್ನು ರುಬ್ಬಿದ ಹಿಟ್ಟಿಗೆ ಸೇರಿಸಿ ಬೇರೆ  ದೋಸೆ ಹಿಟ್ಟಿನಕಿಂತ ಸ್ವಲ್ಪ ತೆಳ್ಳಗೆ ಮಾಡಿಕೊಂಡು ಇದಕ್ಕೆ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಉಪ್ಪು ಎಲ್ಲವನ್ನು ಸೇರಿಸಿ ಚೆನ್ನಾಗಿ ಕಲಕಿಕೊಂಡು ಮಧ್ಯಮ ಉರಿಯಲ್ಲಿ ತೆಳ್ಳಗಿನ ದೋಸೆ ಮಾಡಿ ಎರಡೂ ಕಡೆ ಬೇಯಿಸಿ. ಮೆತ್ತಗಿನ, ಬಿಸಿ ಬಿಸಿ ದಿಢೀರ್ ರವೆ ದೋಸೆಯನ್ನು ತುಪ್ಪ ಮತ್ತು ಚಟ್ನಿ ಜೊತೆ ಸವಿಯಿರಿ. 

(ವಿಜಯವಾಣಿ ಪತ್ರಿಕೆಗೆ ಕಳಿಸಿ ಪ್ರಕಟವಾದ ಅಡುಗೆ)