ಸಾಮಗ್ರಿಗಳು:
ಫಾರ್ಮ್ ಟೊಮೇಟೊ : 4,
ಮಧ್ಯಮ ಗಾತ್ರದ ಈರುಳ್ಳಿ : 2,
ಹಸಿಮೆಣಸಿನ ಕಾಯಿ : 3-4,
ಬೆಳ್ಳುಳ್ಳಿ : 4-5 ಎಸಳು,
ಸಕ್ಕರೆ : 2 ಚಮಚ,
ಉಪ್ಪು : ರುಚಿಗೆ,
ತುಪ್ಪ / ಎಣ್ಣೆ : 4 ಚಮಚ,
ಜೀರಿಗೆ : 1/2 ಚಮಚ,
ಸಾಸಿವೆ : 1/2 ಚಮಚ,
ಕರಿಬೇವು : 5-6 ಎಲೆಗಳು
ವಿಧಾನ :
ಟೊಮೇಟೊ ಮತ್ತು ಈರುಳ್ಳಿ ಯನ್ನು ಹೆಚ್ಚಿಕೊಳ್ಳಿ. ಬೆಳ್ಳುಳ್ಳಿ ಬಿಡಿಸಿ ಜಜ್ಜಿಕೊಳ್ಳಿ. ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಈರುಳ್ಳಿ ಹಾಕಿ ಒಮ್ಮೆ ಕಲಕಿ, ಟೊಮೇಟೊ,ಹಸಿಮೆಣಸಿನಕಾಯಿ ಹಾಕಿ ಅರ್ಧ ನಿಮಿಷ ಹುರಿಯಿರಿ. ಇದು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ, ಜೀರಿಗೆ, ಸಾಸಿವೆ ಹಾಕಿ ಸಿಡಿಸಿ. ಅದಕ್ಕೆಕರಿಬೇವು, ಜಜ್ಜಿದ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಇದಕ್ಕೆ ರುಬ್ಬಿದ ಮಿಶ್ರಣ ಹಾಕಿ, ಸಕ್ಕರೆ, ಉಪ್ಪು ಹಾಕಿ ಕುದಿಸಿ. ಬಿಸಿ ಬಿಸಿ ಟೊಮೇಟೊ ಗೊಜ್ಜನ್ನು ಚಪಾತಿ, ದೋಸೆ ಜೊತೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ