ಸಾಮಗ್ರಿಗಳು:
ಅಕ್ಕಿ : 1.5 ಕಪ್1/2
ಸಣ್ಣ ಹೆಚ್ಚಿದ ಟೊಮೇಟೊ : 3/4 ಕಪ್
ಸಣ್ಣ ಹೆಚ್ಚಿದ ಈರುಳ್ಳಿ : 1/2 ಕಪ್
ಸಣ್ಣ ಹೆಚ್ಚಿದ ಕ್ಯಾಪ್ಸಿಕಂ : 1/2 ಕಪ್
ಉದ್ದುದ್ದ ಹೆಚ್ಚಿದ ಕ್ಯಾರೆಟ್ : 1/4 ಕಪ್
ಹಸಿ ಬಟಾಣಿ : 1/2 ಕಪ್
ಹೆಚ್ಚಿದ ಆಲೂಗಡ್ಡೆ : 1/4 ಕಪ್
ಉದ್ದ ಹೆಚ್ಚಿದ ಬೀನ್ಸ್ (ಬೇಕಿದ್ದಲ್ಲಿ ಮಾತ್ರ) : 1/4 ಕಪ್
ಪಾವ್ ಭಾಜಿ ಮಸಾಲಾ ಪೌಡರ್ (Everest) : 1 ಟೇಬಲ್ ಚಮಚ
ಅಚ್ಚ ಖಾರದ ಪುಡಿ : 1/2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ : 1/2 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು : 1 ಚಮಚ
ಬೆಣ್ಣೆ : 3-4 ಟೇಬಲ್ ಚಮಚ
ಜೀರಿಗೆ : 1/2 ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ವಿಧಾನ :
ಅಕ್ಕಿಯನ್ನು ತೊಳೆದು ಉದುರುದುರಾಗಿ ಅನ್ನ ಮಾಡಿಕೊಳ್ಳಿ. ಟೊಮೇಟೊ, ಈರುಳ್ಳಿ, ಕ್ಯಾಪ್ಸಿಕಂ ಹೊರತುಪಡಿಸಿ ಉಳಿದೆಲ್ಲಾ ತರಕಾರಿ ಮತ್ತು ಹಸಿ ಬಟಾಣಿಯನ್ನು ನೀರು ಸ್ವಲ್ಪವೇ ಉಪ್ಪು ಹಾಕಿ ಬೇಯಿಸಿ ನೀರು ಬಸಿದುಕೊಳ್ಳಿ. ಬಾಣಲೆಗೆ ಬೆಣ್ಣೆ ಹಾಕಿ ಕರಗಿದ ಮೇಲೆ ಜೀರಿಗೆ ಹಾಕಿ ಹುರಿದು ಅದಕ್ಕೆ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ಈಗ ಟೊಮೇಟೊ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮೆತ್ತಗಾಗುವ ತನಕ ಫ್ರೈ ಮಾಡಿ. ಇದಕ್ಕೆ ಕ್ಯಾಪ್ಸಿಕಂ ಹಾಕಿ ಒಂದು ನಿಮಿಷ ಫ್ರೈ ಮಾಡಿಕೊಂಡು ಪಾವ್ ಭಾಜಿ ಮಸಾಲಾ ಪೌಡರ್, ಅಚ್ಚ ಖಾರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಬೇಯಿಸಿದ ತರಕಾರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಉಪ್ಪು ಬೇಕಿದ್ದಲ್ಲಿ ಹಾಕಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಉರಿ ಆರಿಸಿ.
ಇದಕ್ಕೆ ಉದುರುದುರಾಗಿ ಮಾಡಿಕೊಂಡ ಅನ್ನ ಹಾಕಿ ಚೆನ್ನಾಗಿ ಕಲಸಿದರೆ ಮುಂಬೈ ನ ಫೇಮಸ್ ತವಾ ಪುಲಾವ್ ಸಿದ್ಧ......
ಇದಕ್ಕೆ ಉದುರುದುರಾಗಿ ಮಾಡಿಕೊಂಡ ಅನ್ನ ಹಾಕಿ ಚೆನ್ನಾಗಿ ಕಲಸಿದರೆ ಮುಂಬೈ ನ ಫೇಮಸ್ ತವಾ ಪುಲಾವ್ ಸಿದ್ಧ......
ಸಲಹೆಗಳು :
1.ಅನ್ನ ಮಾಡುವಾಗ ಸ್ವಲ್ಪ ಉಪ್ಪು ಹಾಕಿ ಬೇಯಿಸಬಹುದು. ಇದರಿಂದ ಅನ್ನಕ್ಕೆ ಉಪ್ಪು ಚೆನ್ನಾಗಿ ಅಂಟುತ್ತದೆ.
2.ಪ್ರತಿ ಹಂತದಲ್ಲೂ ಉಪ್ಪು ಹಾಕುವುದರಿಂದ ಕೊನೆಯಲ್ಲಿ ಉಪ್ಪು ಹಾಕುವಾಗ ನೋಡಿಕೊಳ್ಳಿ.
3.ಟೊಮೇಟೊ, ಈರುಳ್ಳಿ, ಹಸಿಬಟಾಣಿ, ಆಲೂ, ಕಾಪ್ಸಿಕಂ ಬೇಕೇ ಬೇಕು. ಉಳಿದಂತೆ ನಿಮ್ಮಿಷ್ಟದ ತರಕಾರಿ ಹಾಕಬಹುದು
Banuvaarada menu.
ಪ್ರತ್ಯುತ್ತರಅಳಿಸಿTry it..!
ಅಳಿಸಿWowlov
ಪ್ರತ್ಯುತ್ತರಅಳಿಸಿ