ಬುಧವಾರ, ಫೆಬ್ರವರಿ 25, 2015

ಮೊಸರು ಬೆಂಡೆ ಮಸಾಲಾ:

ಸಾಮಗ್ರಿಗಳು :
ಹೆಚ್ಚಿದ ಬೆಂಡೆಕಾಯಿ : 1.5 ಕಪ್, (ಚಿತ್ರದಲ್ಲಿ ತೋರಿಸಿದಂತೆ ಅಥವಾ ಉದ್ದುದ್ದ ಹೆಚ್ಚಿಕೊಳ್ಳಬಹುದು)
ಸಣ್ಣಗೆ ಹೆಚ್ಚಿದ ಈರುಳ್ಳಿ : 1/2 ಕಪ್,
ಸಣ್ಣಗೆ ಹೆಚ್ಚಿದ ಟೊಮೇಟೊ: 3/4 ಕಪ್,
ಮೊಸರು: 1/2 ಕಪ್ (ಹುಳಿ ಇರಬಾರದು), 
ಎಣ್ಣೆ: 2-3 ಟೇಬಲ್ ಚಮಚ,
ಜೀರಿಗೆ: 1/4 ಟೇಬಲ್ ಚಮಚ,
ಸಾಸಿವೆ: 1/4 ಟೇಬಲ್ ಚಮಚ,  
ಉದ್ದಿನ ಬೇಳೆ: 1/4 ಟೇಬಲ್ ಚಮಚ,
ಒಣ  ಮೆಣಸಿನ ಕಾಯಿ: 1,
ಕರಿ ಬೇವು: 5-6 ಎಲೆಗಳು,
ಒಣ ಮೆಣಸಿನ ಪುಡಿ: 1/2 ಟೇಬಲ್ ಚಮಚ (ನಿಮ್ಮ ಖಾರಕ್ಕೆ ತಕ್ಕಂತೆ),
ಗರಂ ಮಸಾಲಾ ಪುಡಿ: 1/4 ಟೇಬಲ್ ಚಮಚ,
ಅರಿಶಿನ ಪುಡಿ: 1/4 ಟೀ ಚಮಚ,
ಉಪ್ಪು: ರುಚಿಗೆ ತಕ್ಕಷ್ಟು. 

ರುಬ್ಬಲು ಸಾಮಗ್ರಿಗಳು:
ತೆಂಗಿನ ತುರಿ: 1/2 ಕಪ್,
ಗೋಡಂಬಿ: 5-6 

ವಿಧಾನ:
ತೆಂಗಿನ ತುರಿ & ಗೋಡಂಬಿ ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಹೆಚ್ಚಿಕೊಂಡ ಬೆಂಡೆ ಕಾಯಿ ಹಾಕಿ ಅದು ಸ್ವಲ್ಪ ಗರಿಯಾಗುವ ತನಕ (ಬೇಯುವ ತನಕ) ಹುರಿದು ಟಿಶ್ಯೂ ಪೇಪರ್ ಮೇಲೆ ಹರವಿಡಿ. 

ಅದೇ ಬಾಣಲೆಯಲ್ಲಿ ಉಳಿದ ಎಣ್ಣೆಗೆ ಇನ್ನೊಂದು ಚಮಚ ಎಣ್ಣೆ ಬೇಕಿದ್ದಲ್ಲಿ ಸೇರಿಸಿ ಕಾದ ಮೇಲೆ ಉದ್ದಿನ ಬೇಳೆ, ಜೀರಿಗೆ, ಸಾಸಿವೆ ಒಗ್ಗರಣೆ ಮಾಡಿ ಅದಕ್ಕೆ ಕತ್ತರಿಸಿದ ಒಣ ಮೆಣಸು, ಕರಿಬೇವು ಹಾಕಿ ಕಲಕಿ. ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ 2-3 ನಿಮಿಷ ಫ್ರೈ ಮಾಡಿ. ನಂತರ ಹೆಚ್ಚಿದ ಟೊಮೇಟೊ ಹಾಕಿ ಸ್ವಲ್ಪ ಫ್ರೈ ಮಾಡಿ ಇದಕ್ಕೆ ಒಣ ಮೆಣಸಿನ ಪುಡಿ, ಅರಿಶಿನ ಪುಡಿ ಹಾಕಿ ಕಲಕಿ, ರುಬ್ಬಿದ ಮಿಶ್ರಣ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಧ್ಯಮ ಉರಿಯಲ್ಲಿ 2-3 ನಿಮಿಷ ಕುದಿಸಿ. ಮೊಸರಿಗೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ ಸಣ್ಣ ಉರಿಯಲ್ಲಿ 1 ನಿಮಿಷ ಬಿಡದೇ ಕಲಕುತ್ತಿರಿ. ನಂತರ ಇದಕ್ಕೆ ಹುರಿದಿಟ್ಟ ಬೆಂಡೆ ಹೋಳುಗಳನ್ನು ಹಾಕಿ 1-2 ನಿಮಿಷ ಕುದಿಸಿದರೆ ಮೊಸರು - ಬೆಂಡೆ  ಮಸಾಲಾ ಸಿದ್ಧ. ಇದನ್ನು ಬಿಸಿ ಬಿಸಿಯಾಗಿ ಚಪಾತಿ/ಪುಲ್ಕಾ, ಪೂರಿ ಜೊತೆ ಸರ್ವ್ ಮಾಡಿ. 
 

ಬುಧವಾರ, ಫೆಬ್ರವರಿ 18, 2015

ಬಾಳೇಕಾಯಿ ಚಿಪ್ಸ್:



ಸಾಮಗ್ರಿಗಳು : ಬಲಿತ ಬಾಳೇಕಾಯಿ ೧೦, ಉಪ್ಪು, ಎಣ್ಣೆ.
ಚಿಪ್ಸ್ ಮಸಾಲ ಪೌಡರ್ : ಜೀರಿಗೆ 2 ಚಮಚ, ಓಮು ½ ಚಮಚ, ಧನಿಯಾ 1 ಚಮಚ,  ಇ೦ಗು , ಅಚ್ಚ ಖಾರದ ಪುಡಿ 6 ಚಮಚ

ವಿಧಾನ : ಬಾಳೇಕಾಯಿಯ ಸಿಪ್ಪೆ ತೆಗೆದು ಅದನ್ನು ಗೋಲಾಕಾರದಲ್ಲಿ ತೆಳ್ಳಗೆ ಹೆಚ್ಚಿಕೊಳ್ಳಿ. ಎಣ್ಣೆಯನ್ನು ಬಾಣಲೆಗೆ ಹಾಕಿ ಅದು ಕಾದ ನ೦ತರ ಗೋಲಾಕಾರದಲ್ಲಿ ಹೆಚ್ಚಿದ ಬಾಳೇಕಾಯಿಯನ್ನು ಹಾಕಿ ಹೊ೦ಬಣ್ಣ ಬರುವವರೆಗೆ ಕರಿಯಿರಿ. ಎಣ್ಣೆಯಿ೦ದ ತೆಗೆದು ಉಪ್ಪು & ಚಿಪ್ಸ್ ಮಸಾಲಾ ಪೌಡರ್ ಹಾಕಿ (ನಿಮ್ಮ ರುಚಿಗೆ ತಕ್ಕಷ್ಟು) ಮಿಕ್ಸ್ ಮಾಡಿ. ಸ೦ಜೆ ಸಮಯದಲ್ಲಿ ಚಹಾ / ಕಾಫಿ ಜೊತೆ ಸವಿಯಿರಿ.

ಸೂಚನೆ : ಪಚಬಾಳೆ, ನೇಂದ್ರ ಬಾಳೆ, ಕರಿಬಾಳೆ, ಬೂದುಬಾಳೆ ಮುಂತಾದ ಜಾತಿಯ ಬಾಳೆಕಾಯಿಗಳಿಂದ ಚಿಪ್ಸ್ ಮಾಡಬಹುದು. 

ಬುಧವಾರ, ಫೆಬ್ರವರಿ 11, 2015

ಮಸಾಲೆ ದೋಸೆ :

ದೋಸೆ ಹಿಟ್ಟಿಗೆ ಸಾಮಗ್ರಿಗಳು: 
ದೋಸೆ ಅಕ್ಕಿ : 2 ಕಪ್,
ಕಡಲೆಬೇಳೆ : 1/2 ಕಪ್,
ಮೆಂತ್ಯ : 1 ಚಮಚ, 
ಉದ್ದಿನ ಬೇಳೆ : 2 ಚಮಚ (optional),
ಅವಲಕ್ಕಿ : 1/4 ಕಪ್, 
ಉಪ್ಪು : ರುಚಿಗೆ,
ಸಕ್ಕರೆ : 1 ಚಮಚ 

ವಿಧಾನ : 
ಉಪ್ಪು, ಸಕ್ಕರೆ ಹೊರತು ಪಡಿಸಿ ಉಳಿದೆಲ್ಲ ಸಾಮಗ್ರಿಗಳನ್ನು ತೊಳೆದು 5-6  ನೀರಿನಲ್ಲಿ ನೆನೆಸಿ, ನುಣ್ಣಗೆ ರುಬ್ಬಿಕೊಳ್ಳಿ. (ಬೆಳಿಗ್ಗೆ ನೆನೆಸಿ ರಾತ್ರಿ ರುಬ್ಬಿಕೊಂಡು ಮರುದಿನ ಬೆಳಿಗ್ಗೆ ದೋಸೆ ಮಾಡಬಹುದು). ಇದನ್ನು 6-8 ಘಂಟೆಗಳ ಕಾಲ ಹಾಗೆಯೇ ಮುಚ್ಚಿಡಿ. ಬೆಳಿಗ್ಗೆ ಚೆನ್ನಾಗಿ ಹುದುಗಿದ ದೋಸೆ ಹಿಟ್ಟಿಗೆ ಉಪ್ಪು, ಸಕ್ಕರೆ ಸೇರಿಸಿ ಕಾದ ತವಾ ಮೇಲೆ ತೆಳ್ಳಗೆ ದೋಸೆ ಎರೆದು ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ, ಚಟ್ನಿ ಪುಡಿ ಉದುರಿಸಿ (ಬೇಕಿದ್ದರೆ ಮುಚ್ಚಿ) ಬೇಯಿಸಿ. ನಂತರ ಅದರ ಮೇಲೆ ಆಲೂ ಪಲ್ಯ ಹಾಕಿ ಸುರುಳಿ ಸುತ್ತಿ ಚಟ್ನಿಯ ಜೊತೆ ಸರ್ವ್ ಮಾಡಿ.   




ಆಲೂ ಪಲ್ಯಕ್ಕೆ ಸಾಮಗ್ರಿಗಳು :
ಆಲೂಗಡ್ಡೆ : 3-4 (ಮೀಡಿಯಂ ಗಾತ್ರ),
ಈರುಳ್ಳಿ : 3 (ಮೀಡಿಯಂ ಗಾತ್ರ),
ಕಡಲೆ ಬೇಳೆ : 1 ಚಮಚ,
ಉದ್ದಿನ ಬೇಳೆ : 1 ಚಮಚ,
ಸಾಸಿವೆ : 1/2 ಚಮಚ,
ಎಣ್ಣೆ : 5-6 ಟೇಬಲ್ ಚಮಚ,
ಕರಿಬೇವು : ಸ್ವಲ್ಪ, 
ಅರಿಶಿನ ಪುಡಿ : 1/4 ಚಮಚ,
ಹಸಿ ಮೆಣಸಿನ ಕಾಯಿ : 5-6 (ಮಧ್ಯ ಕತ್ತರಿಸಿ ಉದ್ದುದ್ದ ಸೀಳಿಕೊಳ್ಳಿ),
ಉಪ್ಪು : ರುಚಿಗೆ

ವಿಧಾನ : 
ಆಲೂಗಡ್ಡೆಯನ್ನು ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿಕೊಂಡು ಪುಡಿ ಮಾಡಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಕಡಲೇಬೇಳೆ, ಉದ್ದಿನ ಬೇಳೆ ಹಾಕಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಸಾಸಿವೆ ಹಾಕಿ ಸಿಡಿಸಿ. ನಂತರ ಹಸಿಮೆಣಸಿನ ಕಾಯಿ, ಕರಿಬೇವು ಮತ್ತು ಈರುಳ್ಳಿ, ಅರಿಶಿನ ಪುಡಿ ಹಾಕಿ ಎರಡು ನಿಮಿಷ ಹುರಿಯಿರಿ. ನಂತರ ಇದಕ್ಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಪುಡಿ ಮಾಡಿಟ್ಟುಕೊಂಡ ಆಲೂ ಹಾಕಿ ಚೆನ್ನಾಗಿ ಕಲಸಿ. ಒಂದೆರಡು ನಿಮಿಷ ಕಲಕುತ್ತಲೇ ಇದ್ದು ಉರಿ ಆರಿಸಿ ಮುಚ್ಚಿಡಿ. 


ಚಟ್ನಿಗೆ ಸಾಮಗ್ರಿಗಳು : 
ತೆಂಗಿನ ತುರಿ : 1 ಕಪ್,
ಹಸಿಮೆಣಸಿನ ಕಾಯಿ : 2-3,
ಹುರಿಗಡಲೆ : 1 ಟೇಬಲ್ ಚಮಚ,
ಕರಿಬೇವು : 5-6 ಎಲೆಗಳು,
ಶುಂಠಿ : ಸಣ್ಣ ಚೂರು, 
ಎಳ್ಳು : 1/2 ಚಮಚ,
ಉಪ್ಪು ರುಚಿಗೆ 
ವಿಧಾನ : 
ಒಗ್ಗರಣೆ ಸೌಟಿಗೆ ಒಂದೆರಡು ಹನಿ ಎಣ್ಣೆ ಹಾಕಿಕೊಂಡು ಹಸಿಮೆಣಸಿನ ಕಾಯಿ, ಕರಿಬೇವು, ಹಾಕಿ ಬಾಡಿಸಿಕೊಂಡು ಎಳ್ಳು ಹಾಕಿ ಹುರಿದುಕೊಳ್ಳಿ. ಮಿಕ್ಸಿ ಜಾರ್ ಗೆ ಹುರಿದುಕೊಂಡ ಮಿಶ್ರಣ, ಶುಂಠಿ, ತೆಂಗಿನ ತುರಿ, ಉಪ್ಪು ಹಾಕಿ ರುಬ್ಬಿದರೆ ಚಟ್ನಿ ಸಿದ್ಧ.

ಸಲಹೆಗಳು: 
೧) ದೋಸೆಯ ಮೇಲೆ ಚಟ್ನಿ ಪುಡಿಯ ಬದಲು ಬೆಳ್ಳುಳ್ಳಿ ಚಟ್ನಿ ಯನ್ನು ಸವರಿಕೊಳ್ಳಬಹುದು. ಒಣ ಮೆಣಸಿನ ಕಾಯಿ ಮತ್ತು ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಸ್ವಲ್ಪ ಹುರಿದು ತೆಂಗಿನ ತುರಿ ಮತ್ತು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಂಡರೆ ಬೆಳ್ಳುಳ್ಳಿ ಚಟ್ನಿ ಸಿದ್ಧ. 
೨) ದೋಸೆ ಹಿಟ್ಟಿಗೆ ಸಕ್ಕರೆ ಹಾಕುವುದರಿಂದ ಹೊಂಬಣ್ಣದ ಮತ್ತು ಗರಿ ಗರಿಯಾದ ದೋಸೆ ಮಾಡಬಹುದು. 

ಬುಧವಾರ, ಫೆಬ್ರವರಿ 4, 2015

ಫ್ರೈಡ್ ರೈಸ್:



ಸಾಮಗ್ರಿಗಳು: ಬೀನ್ಸ್ 8-10, ಕ್ಯಾರೆಟ್ 1, ಕ್ಯಾಪ್ಸಿಕಮ್ 1, ಕ್ಕಿ – 1 ಲೋಟ , ಸೋಯಾ ಸಾಸ್ 1 ಚಮಚ, ವಿನಿಗರ್ 1 ಚಮಚ, ಹಸಿ ಮೆಣಸು 3, ಪೆಪ್ಪರ್ ಪೌಡರ್ ½ ಚಮಚ, ಈರುಳ್ಳಿ 1, ಶು೦ಟಿ ಬೆಳ್ಳುಳ್ಳಿ ಪೇಸ್ಟ 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು.





ವಿಧಾನ: ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಮ್ ಇವನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿ & ಹಸಿಮೆಣಸನ್ನು ಉದ್ದುದ್ದಕ್ಕೆ ಹೆಚ್ಚಿಕೊಳ್ಳಬೇಕು. ಉದುರುದುರಾಗಿ ಅನ್ನ ಮಾಡಿ ಇಟ್ಟುಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಶು೦ಟಿ ಬೆಳ್ಳುಳ್ಳಿ ಪೇಸ್ಟ, ಈರುಳ್ಳಿ, ಹಸಿಮೆಣಸು & ಎಲ್ಲ ತರಕಾರಿಗಳನ್ನು ಹಾಕಿ ಉಪ್ಪು ಹಾಕಿ ಫ್ರೈ ಮಾಡಿ, ತರಕಾರಿ 8೦% ಬೆ೦ದ ಮೇಲೆ ವಿನಿಗರ್, ಸೋಯಾಸಾಸ್, ಪೆಪ್ಪರ್ ಪೌಡರ್ ಹಾಕಿ ತೊಳೆಸಿ ಅನ್ನಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನ೦ತರ ಬಿಸಿ ಬಿಸಿ ಪ್ರೈಡ್ ರೈಸ್ ನ್ನು ಟೊಮ್ಯಾಟೊ ಸಾಸ್ ಜೊತೆ ಸರ್ವ್ ಮಾಡಿ.