ಸಾಮಗ್ರಿಗಳು :
MTR ಶ್ಯಾವಿಗೆ 150 ಗ್ರಾ೦
ಹಾಲು 1 1/4 ಕಪ್
ಸಕ್ಕರೆ 1- 1 1/4 ಕಪ್,
ತುಪ್ಪ 1/4 ಕಪ್,
ಗೋಡಂಬಿ 6-7,
ಹಳದಿ / ಕೇಸರಿ ಬಣ್ಣ 3-4 ಚಿಟಿಕೆ (Food Color)
ವಿಧಾನ:
ಶ್ಯಾವಿಗೆಯನ್ನು ಬಾಣಲೆಗೆ ಹಾಕಿ ತುಪ್ಪ ಹಾಕಿ ಹೊಂಬಣ್ಣಕ್ಕೆ ಹುರಿಯಿರಿ. ನಂತರ ಚೂರು ಮಾಡಿದ ಗೋಡಂಬಿ ಹಾಕಿ. ಇದಕ್ಕೆ ಎರಡು ಚಮಚ ಹಾಲಿಗೆ ಹಳದಿ / ಕೇಸರಿ ಬಣ್ಣವನ್ನು ಹಾಕಿ ಕಲಕಿ ಅದನ್ನು ಹಾಕಿ. ನಂತರ ಬಿಸಿ ಬಿಸಿ ಹಾಲನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತ ಕಲಕುತ್ತಾ ಬನ್ನಿ. ಶ್ಯಾವಿಗೆ ತುಂಬಾ ಮೆತ್ತಗಾಗಿ, ಮಡ್ಡಿಯಾಗದಂತೆ ನೋಡಿಕೊಳ್ಳಿ. ಶ್ಯಾವಿಗೆ 75% ಬೆಂದು ಉದುರುದುರಾಗಿ ಇರುವಾಗಲೇ ಹಾಲು ಹಾಕುವುದನ್ನು ನಿಲ್ಲಿಸಬೇಕು. ಆಮೇಲೆ ಇದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. ಸಕ್ಕರೆ ಕರಗಿದ ಮೇಲೆ ಉರಿ ಆರಿಸಿ. ಬಿಸಿ ಬಿಸಿ ಶ್ಯಾವಿಗೆ ಶಿರಾ ತಿನ್ನಲು ರುಚಿ.
ಸೂಚನೆ:
1) ಇದರಲ್ಲಿ ಶ್ಯಾವಿಗೆ, ಪಾಯಸದಷ್ಟು ಮೆತ್ತಗಾಗುವುದಿಲ್ಲ. ಸಕ್ಕರೆ ಹಾಕಿದ ಮೇಲೆ ಶ್ಯಾವಿಗೆ ಗಟ್ಟಿ ಆಗುವುದರಿಂದ ಅಗಿದು ತಿನ್ನಲು ಇಷ್ಟ ಪಡುವವರಿಗೆ ಈ ರೆಸಿಪಿ ಇಷ್ಟವಾಗುತ್ತದೆ.
2) ಸಕ್ಕರೆಯನ್ನು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ನೋಡಿಕೊಂಡು ಹಾಕಿಕೊಳ್ಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ