ಶುಕ್ರವಾರ, ಫೆಬ್ರವರಿ 24, 2017

ಮೊಳಕೆ ಕಾಳಿನ ಮಸಾಲಾ ಸಾ೦ಬಾರ್:

ಸಾಮಗ್ರಿಗಳು : 
ಮೊಳಕೆ ಕಾಳು - 1 ಕಪ್(ಹೆಸರುಕಾಳು, ಹುರುಳಿ, ಕಡಲೆ),
ಈರುಳ್ಳಿ - 1, 
ಟೊಮ್ಯಾಟೊ - 1, 
ತೆ೦ಗಿನತುರಿ - 1/2 ಕಪ್, 
ಬೆಳ್ಳುಳ್ಳಿ - 5-6 ಎಸಳು,
ಶು೦ಟಿ - 1"
ಅಚ್ಚಖಾರದ ಪುಡಿ  - 2 ಚಮಚ (ಒಣಮೆಣಸು - 5)
ಕೊತ್ತ೦ಬರಿ ಸೊಪ್ಪು - 2 ಗಿಡ, 
ಚಕ್ಕೆ - 1", ಲವ೦ಗ - 2.
ಎಣ್ಣೆ - 3 ಚಮಚ
ಸಾಸಿವೆ - 1/2 ಚಮಚ , ಕರಿಬೇವು - 6-7, 
ಉಪ್ಪು ರುಚಿಗೆ ತಕ್ಕಷ್ಟು

ವಿಧಾನ: ಒ೦ದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಒಣ ಮೆಣಸು (ಒಣಮೆಣಸಿನ ಬದಲು ಅಚ್ಚ ಖಾರದ ಪುಡಿ ಹಾಕಬಹುದು) ಹುರಿದುಕೊಳ್ಳಿ. ತೆ೦ಗಿನತುರಿ, ಬೆಳ್ಳುಳ್ಳಿ, ಶು೦ಟಿ, ಕೊತ್ತ೦ಬರಿ ಸೊಪ್ಪು, ಚಕ್ಕೆ, ಲವ೦ಗ, ಹುರಿದ ಒಣ ಮೆಣಸು ಹಾಕಿ ಸಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಈಗ ಕುಕ್ಕರ್ ಗೆ 2 ಚಮಚ ಎಣ್ಣೆ ಹಾಕಿ ಅದು ಕಾದ ಮೇಲೆ ಸಾಸಿವೆ, ಕರಿಬೇವು ಹಾಕಿ ನ೦ತರ ಹೆಚ್ಚಿಟ್ಟ ಈರುಳ್ಳಿ & ಟೊಮ್ಯಾಟೊ ಹಾಕಿ ಸ್ವಲ್ಪ ಬಾಡಿಸಿ ನ೦ತರ ರುಬ್ಬಿಟ್ಟ ಮಸಾಲೆ ಹಾಕಿ 5 ನಿಮಿಷ ಫ್ರೈ ಮಾಡಿ ಹಾಗೆ ಉಪ್ಪು ಮೊಳಕೆ ಕಾಳುಗಳನ್ನು ಹಾಕಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2  ವಿಶಲ್ ಕೂಗಿಸಿ. ಈಗ ಬಿಸಿ ಬಿಸಿಯಾದ ಮೊಳಕೆಕಾಳಿನ ಮಸಾಲಾವನ್ನು ಚಪಾತಿ, ಪುಲ್ಕ, ಅನ್ನದ ಜೊತೆ ಸರ್ವ ಮಾಡಿ.

ಶುಕ್ರವಾರ, ಫೆಬ್ರವರಿ 17, 2017

ಹಸಿ ಬಟಾಣಿ ಖೀರು :

ಸಾಮಗ್ರಿಗಳು :
ಎಳೆಯ ಹಸಿಬಟಾಣಿ : 1 ಕಪ್
ಹಾಲು: 2.5 - 3 ಕಪ್
ಸಪ್ಪೆ ಖೋವಾ : 3-4 ಚಮಚ
ಸಕ್ಕರೆ : 3/4 ಕಪ್
ಏಲಕ್ಕಿ ಪುಡಿ : ಒಂದು ಚಿಟಿಕೆ (ಅಥವಾ ವೆನಿಲ್ಲಾ ಎಸೆನ್ಸ್ 3-4 ಹನಿ)

ವಿಧಾನ :
ಹಸಿ ಬಟಾಣಿಯನ್ನು ಕುಕ್ಕರ್ ನಲ್ಲಿ ಬೇಯಿಸಿ ಸ್ವಲ್ಪ ಮಸೆದುಕೊಳ್ಳಿ. ಹಾಲನ್ನು ಕಾಯಿಸಿ 10-15 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಆಗ ಹಾಲು ಸ್ವಲ್ಪ ದಪ್ಪಗಾಗುತ್ತದೆ. ಅದಕ್ಕೆ ಖೋವಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಕ್ಕರೆ ಹಾಕಿ ಮಸೆದುಕೊಂಡ ಬಟಾಣಿ, ಏಲಕ್ಕಿ ಪುಡಿ / ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಕುದಿಸಿ.

 ಸಿಹಿ ಸವಿ ಖೀರು ಮಕ್ಕಳಿಗೆ ಒಳ್ಳೆಯ ಆಹಾರ. ದೊಡ್ಡವರೂ ಇಷ್ಟ ಪಡುತ್ತಾರೆ .......


ಸಲಹೆ :
1) ಇದಕ್ಕೆ condensed milk ಕೂಡ ಹಾಕಬಹುದು.
2) ಇದೇ ರೀತಿ ಸ್ವೀಟ್ ಕಾರ್ನ್ ಖೀರು ಕೂಡ ಚೆನ್ನಾಗಿರುತ್ತದೆ. 

ಭಾನುವಾರ, ಫೆಬ್ರವರಿ 12, 2017

ಸಿಹಿ ಕು೦ಬಳ (ಗೋವೆಕಾಯಿ) ಕಡುಬು:

ಸಾಮಗ್ರಿಗಳು: 
ಅಕ್ಕಿ - 1 ಕಪ್, 
ಬೆಲ್ಲ - 1/2 ಕಪ್, 
ಸಿಹಿ ಕು೦ಬಳ ಸಿಪ್ಪೆ ತೆಗೆದು ಹೆಚ್ಚಿದ್ದು - 1 ಕಪ್,
ಉಪ್ಪು - 1/2 ಚಮಚ.
ತೆ೦ಗಿನ ತುರಿ - 2-3 ಚಮಚ





ವಿಧಾನ: ಅಕ್ಕಿಯನ್ನು 3 ಗ೦ಟೆ ನೆನೆಸಿಟ್ಟುಕೊಳ್ಳಿ. ನ೦ತರ ಇದನ್ನು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹೆಚ್ಚಿಟ್ಟುಕೊ೦ಡ ಸಿಹಿ ಕು೦ಬಳಕ್ಕೆ ಉಪ್ಪು, ಬೆಲ್ಲ ಸ್ವಲ್ಪ ನೀರು ಹಾಕಿ 10-15 ನಿಮಿಷ ಬೇಯಿಸಿ. ನ೦ತರ ಉರಿ ಸಣ್ಣ ಮಾಡಿ ರುಬ್ಬಿಟ್ಟ ಅಕ್ಕಿ ಹಿಟ್ಟನ್ನು ಹಾಕಿ ಗ೦ಟಾಗದ೦ತೆ ಕಲೆಸುತ್ತಾ ಇರಬೇಕು. 10 ನಿಮಿಷ ಬಿಡದೆ ಕಲಸಿ, ಉರಿ ಆರಿಸಿ. ಬಿಸಿ ಆರಿದ ಮೇಲೆ ಬಾಳೆ ಎಲೆಗೆ ಸ್ವಲ್ಪ ನೀರು ಹಾಕಿ ವರೆಸಿಕೊ೦ಡು ಹಿಟ್ಟನ್ನು ತೆಳ್ಳಗೆ ತಟ್ಟಿ ಅದರ ಮೇಲೆ ತೆ೦ಗಿನ ತುರಿ ಉದುರಿಸಿ. ನ೦ತರ ಬಾಳೆ ಎಲೆಯನ್ನು ಮಡಿಸಿ ಇಡ್ಲಿ ಪಾತ್ರೆಯಲ್ಲಿ ಹಾಕಿ 45 ನಿಮಿಷ  ಬೇಯಿಸಿ. ಈಗ ಬಿಸಿ ಬಿಸಿ ಸಿಹಿಕು೦ಬಳದ ಕಡುಬು ತಿನ್ನಲು ಸಿದ್ಧ. ಇದಕ್ಕೆ ತುಪ್ಪ ಅಥವಾ ಗಟ್ಟಿ ಮೊಸರು ಹಾಕಿಕೊ೦ಡು ತಿನ್ನಲು ಚೆನ್ನಾಗಿರುತ್ತದೆ.


ಇದು ದೀಪಾವಳಿ ಹಬ್ಬದ ವಿಶೇಷ ಸಿಹಿ.

ಸೋಮವಾರ, ಫೆಬ್ರವರಿ 6, 2017

ಹಸಿ ಬಟಾಣಿ ರೊಟ್ಟಿ :

ಸಾಮಗ್ರಿಗಳು :
ಹಸಿ ಬಟಾಣಿ (green peas) : 1 ಕಪ್
ಅಕ್ಕಿ ಹಿಟ್ಟು : 2 ಕಪ್
ಜೀರಿಗೆ :1೧ ಚಮಚ
ಕೊತ್ತಂಬರಿ ಸೊಪ್ಪು : 2-3 ಚಮಚ (ಸಣ್ಣಗೆ ಹೆಚ್ಚಿದ್ದು)
ತೆಂಗಿನ ತುರಿ : 3-4 ಚಮಚ
ಹಸಿಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು : 1 ಚಮಚ (ಅಥವಾ ಅಚ್ಚ ಮೆಣಸಿನ ಪುಡಿ - 1 ಚಮಚ) 
ಉಪ್ಪು : ರುಚಿಗೆ 
ಎಣ್ಣೆ : ಬೇಯಿಸಲು 
ಬಾಳೆ ಎಲೆ  ಅಥವಾ ಒಬ್ಬಟ್ಟಿನ ಶೀಟ್ ರೊಟ್ಟಿ ತಟ್ಟಲು 

ವಿಧಾನ :
ಹಸಿ ಬಟಾಣಿ ತೊಳೆದು,  ನೀರು ಹಾಕಿ ಬೇಯಿಸಿಕೊಂಡು, ನೀರು ಬಸಿದುಕೊಳ್ಳಿ.  ದಪ್ಪ ತಳದ ಪಾತ್ರೆ ಅಥವಾ ಬಾಣಲೆಗೆ 2 ಕಪ್ ನೀರು ಹಾಕಿ ಅದಕ್ಕೆ ಉಪ್ಪು, ಜೀರಿಗೆ ಹಾಕಿ ಕುದಿಯಲು ಬಿಡಿ. ನಂತರ ಒಂದು ಸೌಟಿನಷ್ಟು ಅಕ್ಕಿಹಿಟ್ಟು ಹಾಕಿ ಗಂಟಿಲ್ಲದೆ ಕಲಕಿ ಉಳಿದ ಅಕ್ಕಿಹಿಟ್ಟನ್ನು ಹಾಕಿ ಚೆನ್ನಾಗಿ ಕಲಕಿ ಉರಿ ಆರಿಸಿ. ಸ್ವಲ್ಪ ತಣ್ಣಗಾದ ಮೇಲೆ (ಕೈ ಇಂದ ಹಿಟ್ಟನ್ನು ಕಲೆಸಲು ಆಗುವಷ್ಟು) ಇದಕ್ಕೆ ಬೇಯಿಸಿದ ಬಟಾಣಿ, ತೆಂಗಿನ ತುರಿ, ಹಸಿಮೆಣಸು/ ಅಚ್ಚ ಖಾರದ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಹಿಟ್ಟು ರೊಟ್ಟಿ ತಟ್ಟುವಷ್ಟು ಮೆತ್ತಗಿರಬೇಕು. ಗಟ್ಟಿ ಎನಿಸಿದರೆ ಸ್ವಲ್ಪ ಬಿಸಿ ನೀರು ಹಾಕಿ ಕಲಸಿಕೊಳ್ಳಿ. ನಂತರ ಒಬ್ಬಟ್ಟಿನ ಶೀಟ್ ಗೆ ಎಣ್ಣೆ ಸವರಿ, ಕಲಸಿದ ಹಿಟ್ಟಿನಿಂದ  ಚಪಾತಿ ಉಂಡೆ ಗಾತ್ರದ ಉಂಡೆ ಮಾಡಿ ಶೀಟ್ ಮೇಲೆ ತಟ್ಟಿ. ಬಾಳೆ ಎಲೆ ಇದ್ದರೆ ಅದನ್ನು ಸೀಳಿಕೊಂಡು ಸ್ವಲ್ಪ ಬೆಂಕಿಯಲ್ಲಿ ಬಾಡಿಸಿ ಎಣ್ಣೆ ಸವರಿ ರೊಟ್ಟಿ ತಟ್ಟಬಹುದು. ಈಗ ಕಾದ ತವಾ ಮೇಲೆ ತಟ್ಟಿದ ರೊಟ್ಟಿ ಹಾಕಿ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ಎರಡೂ ಕಡೆ ಬೇಯಿಸಿ.



ಸೂಚನೆಗಳು :
೧) ಬಟಾಣಿ ತುಂಬಾ ಬಲಿತಿದ್ದರೆ ಚೆನ್ನಾಗಿರುವುದಿಲ್ಲ. ಸ್ವಲ್ಪ ಎಳೆಯದಾಗೇ  ಇರಲಿ.
೨) ಇದೇ ರೀತಿ ಹಿತುಕಿದ ಅವರೇಕಾಳು ಹಾಕಿ ರೊಟ್ಟಿ ಮಾಡಬಹುದು.