ಭಾನುವಾರ, ಫೆಬ್ರವರಿ 12, 2017

ಸಿಹಿ ಕು೦ಬಳ (ಗೋವೆಕಾಯಿ) ಕಡುಬು:

ಸಾಮಗ್ರಿಗಳು: 
ಅಕ್ಕಿ - 1 ಕಪ್, 
ಬೆಲ್ಲ - 1/2 ಕಪ್, 
ಸಿಹಿ ಕು೦ಬಳ ಸಿಪ್ಪೆ ತೆಗೆದು ಹೆಚ್ಚಿದ್ದು - 1 ಕಪ್,
ಉಪ್ಪು - 1/2 ಚಮಚ.
ತೆ೦ಗಿನ ತುರಿ - 2-3 ಚಮಚ





ವಿಧಾನ: ಅಕ್ಕಿಯನ್ನು 3 ಗ೦ಟೆ ನೆನೆಸಿಟ್ಟುಕೊಳ್ಳಿ. ನ೦ತರ ಇದನ್ನು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹೆಚ್ಚಿಟ್ಟುಕೊ೦ಡ ಸಿಹಿ ಕು೦ಬಳಕ್ಕೆ ಉಪ್ಪು, ಬೆಲ್ಲ ಸ್ವಲ್ಪ ನೀರು ಹಾಕಿ 10-15 ನಿಮಿಷ ಬೇಯಿಸಿ. ನ೦ತರ ಉರಿ ಸಣ್ಣ ಮಾಡಿ ರುಬ್ಬಿಟ್ಟ ಅಕ್ಕಿ ಹಿಟ್ಟನ್ನು ಹಾಕಿ ಗ೦ಟಾಗದ೦ತೆ ಕಲೆಸುತ್ತಾ ಇರಬೇಕು. 10 ನಿಮಿಷ ಬಿಡದೆ ಕಲಸಿ, ಉರಿ ಆರಿಸಿ. ಬಿಸಿ ಆರಿದ ಮೇಲೆ ಬಾಳೆ ಎಲೆಗೆ ಸ್ವಲ್ಪ ನೀರು ಹಾಕಿ ವರೆಸಿಕೊ೦ಡು ಹಿಟ್ಟನ್ನು ತೆಳ್ಳಗೆ ತಟ್ಟಿ ಅದರ ಮೇಲೆ ತೆ೦ಗಿನ ತುರಿ ಉದುರಿಸಿ. ನ೦ತರ ಬಾಳೆ ಎಲೆಯನ್ನು ಮಡಿಸಿ ಇಡ್ಲಿ ಪಾತ್ರೆಯಲ್ಲಿ ಹಾಕಿ 45 ನಿಮಿಷ  ಬೇಯಿಸಿ. ಈಗ ಬಿಸಿ ಬಿಸಿ ಸಿಹಿಕು೦ಬಳದ ಕಡುಬು ತಿನ್ನಲು ಸಿದ್ಧ. ಇದಕ್ಕೆ ತುಪ್ಪ ಅಥವಾ ಗಟ್ಟಿ ಮೊಸರು ಹಾಕಿಕೊ೦ಡು ತಿನ್ನಲು ಚೆನ್ನಾಗಿರುತ್ತದೆ.


ಇದು ದೀಪಾವಳಿ ಹಬ್ಬದ ವಿಶೇಷ ಸಿಹಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ