ಸೋಮವಾರ, ಫೆಬ್ರವರಿ 6, 2017

ಹಸಿ ಬಟಾಣಿ ರೊಟ್ಟಿ :

ಸಾಮಗ್ರಿಗಳು :
ಹಸಿ ಬಟಾಣಿ (green peas) : 1 ಕಪ್
ಅಕ್ಕಿ ಹಿಟ್ಟು : 2 ಕಪ್
ಜೀರಿಗೆ :1೧ ಚಮಚ
ಕೊತ್ತಂಬರಿ ಸೊಪ್ಪು : 2-3 ಚಮಚ (ಸಣ್ಣಗೆ ಹೆಚ್ಚಿದ್ದು)
ತೆಂಗಿನ ತುರಿ : 3-4 ಚಮಚ
ಹಸಿಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು : 1 ಚಮಚ (ಅಥವಾ ಅಚ್ಚ ಮೆಣಸಿನ ಪುಡಿ - 1 ಚಮಚ) 
ಉಪ್ಪು : ರುಚಿಗೆ 
ಎಣ್ಣೆ : ಬೇಯಿಸಲು 
ಬಾಳೆ ಎಲೆ  ಅಥವಾ ಒಬ್ಬಟ್ಟಿನ ಶೀಟ್ ರೊಟ್ಟಿ ತಟ್ಟಲು 

ವಿಧಾನ :
ಹಸಿ ಬಟಾಣಿ ತೊಳೆದು,  ನೀರು ಹಾಕಿ ಬೇಯಿಸಿಕೊಂಡು, ನೀರು ಬಸಿದುಕೊಳ್ಳಿ.  ದಪ್ಪ ತಳದ ಪಾತ್ರೆ ಅಥವಾ ಬಾಣಲೆಗೆ 2 ಕಪ್ ನೀರು ಹಾಕಿ ಅದಕ್ಕೆ ಉಪ್ಪು, ಜೀರಿಗೆ ಹಾಕಿ ಕುದಿಯಲು ಬಿಡಿ. ನಂತರ ಒಂದು ಸೌಟಿನಷ್ಟು ಅಕ್ಕಿಹಿಟ್ಟು ಹಾಕಿ ಗಂಟಿಲ್ಲದೆ ಕಲಕಿ ಉಳಿದ ಅಕ್ಕಿಹಿಟ್ಟನ್ನು ಹಾಕಿ ಚೆನ್ನಾಗಿ ಕಲಕಿ ಉರಿ ಆರಿಸಿ. ಸ್ವಲ್ಪ ತಣ್ಣಗಾದ ಮೇಲೆ (ಕೈ ಇಂದ ಹಿಟ್ಟನ್ನು ಕಲೆಸಲು ಆಗುವಷ್ಟು) ಇದಕ್ಕೆ ಬೇಯಿಸಿದ ಬಟಾಣಿ, ತೆಂಗಿನ ತುರಿ, ಹಸಿಮೆಣಸು/ ಅಚ್ಚ ಖಾರದ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಹಿಟ್ಟು ರೊಟ್ಟಿ ತಟ್ಟುವಷ್ಟು ಮೆತ್ತಗಿರಬೇಕು. ಗಟ್ಟಿ ಎನಿಸಿದರೆ ಸ್ವಲ್ಪ ಬಿಸಿ ನೀರು ಹಾಕಿ ಕಲಸಿಕೊಳ್ಳಿ. ನಂತರ ಒಬ್ಬಟ್ಟಿನ ಶೀಟ್ ಗೆ ಎಣ್ಣೆ ಸವರಿ, ಕಲಸಿದ ಹಿಟ್ಟಿನಿಂದ  ಚಪಾತಿ ಉಂಡೆ ಗಾತ್ರದ ಉಂಡೆ ಮಾಡಿ ಶೀಟ್ ಮೇಲೆ ತಟ್ಟಿ. ಬಾಳೆ ಎಲೆ ಇದ್ದರೆ ಅದನ್ನು ಸೀಳಿಕೊಂಡು ಸ್ವಲ್ಪ ಬೆಂಕಿಯಲ್ಲಿ ಬಾಡಿಸಿ ಎಣ್ಣೆ ಸವರಿ ರೊಟ್ಟಿ ತಟ್ಟಬಹುದು. ಈಗ ಕಾದ ತವಾ ಮೇಲೆ ತಟ್ಟಿದ ರೊಟ್ಟಿ ಹಾಕಿ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ಎರಡೂ ಕಡೆ ಬೇಯಿಸಿ.ಸೂಚನೆಗಳು :
೧) ಬಟಾಣಿ ತುಂಬಾ ಬಲಿತಿದ್ದರೆ ಚೆನ್ನಾಗಿರುವುದಿಲ್ಲ. ಸ್ವಲ್ಪ ಎಳೆಯದಾಗೇ  ಇರಲಿ.
೨) ಇದೇ ರೀತಿ ಹಿತುಕಿದ ಅವರೇಕಾಳು ಹಾಕಿ ರೊಟ್ಟಿ ಮಾಡಬಹುದು. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ