ಸಾಮಗ್ರಿಗಳು :
ಹೆಚ್ಚಿದ ಬೆಂಡೆಕಾಯಿ : 1.5 ಕಪ್, (ಚಿತ್ರದಲ್ಲಿ ತೋರಿಸಿದಂತೆ ಅಥವಾ ಉದ್ದುದ್ದ ಹೆಚ್ಚಿಕೊಳ್ಳಬಹುದು)
ಸಣ್ಣಗೆ ಹೆಚ್ಚಿದ ಈರುಳ್ಳಿ : 1/2 ಕಪ್,
ಸಣ್ಣಗೆ ಹೆಚ್ಚಿದ ಟೊಮೇಟೊ: 3/4 ಕಪ್,
ಮೊಸರು: 1/2 ಕಪ್ (ಹುಳಿ ಇರಬಾರದು),
ಎಣ್ಣೆ: 2-3 ಟೇಬಲ್ ಚಮಚ,
ಜೀರಿಗೆ: 1/4 ಟೇಬಲ್ ಚಮಚ,
ಸಾಸಿವೆ: 1/4 ಟೇಬಲ್ ಚಮಚ,
ಉದ್ದಿನ ಬೇಳೆ: 1/4 ಟೇಬಲ್ ಚಮಚ,
ಒಣ ಮೆಣಸಿನ ಕಾಯಿ: 1,
ಕರಿ ಬೇವು: 5-6 ಎಲೆಗಳು,
ಒಣ ಮೆಣಸಿನ ಪುಡಿ: 1/2 ಟೇಬಲ್ ಚಮಚ (ನಿಮ್ಮ ಖಾರಕ್ಕೆ ತಕ್ಕಂತೆ),
ಗರಂ ಮಸಾಲಾ ಪುಡಿ: 1/4 ಟೇಬಲ್ ಚಮಚ,
ಅರಿಶಿನ ಪುಡಿ: 1/4 ಟೀ ಚಮಚ,
ಉಪ್ಪು: ರುಚಿಗೆ ತಕ್ಕಷ್ಟು.
ರುಬ್ಬಲು ಸಾಮಗ್ರಿಗಳು:
ತೆಂಗಿನ ತುರಿ: 1/2 ಕಪ್,
ಗೋಡಂಬಿ: 5-6
ವಿಧಾನ:
ತೆಂಗಿನ ತುರಿ & ಗೋಡಂಬಿ ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಹೆಚ್ಚಿಕೊಂಡ ಬೆಂಡೆ ಕಾಯಿ ಹಾಕಿ ಅದು ಸ್ವಲ್ಪ ಗರಿಯಾಗುವ ತನಕ (ಬೇಯುವ ತನಕ) ಹುರಿದು ಟಿಶ್ಯೂ ಪೇಪರ್ ಮೇಲೆ ಹರವಿಡಿ.
ಅದೇ ಬಾಣಲೆಯಲ್ಲಿ ಉಳಿದ ಎಣ್ಣೆಗೆ ಇನ್ನೊಂದು ಚಮಚ ಎಣ್ಣೆ ಬೇಕಿದ್ದಲ್ಲಿ ಸೇರಿಸಿ ಕಾದ ಮೇಲೆ ಉದ್ದಿನ ಬೇಳೆ, ಜೀರಿಗೆ, ಸಾಸಿವೆ ಒಗ್ಗರಣೆ ಮಾಡಿ ಅದಕ್ಕೆ ಕತ್ತರಿಸಿದ ಒಣ ಮೆಣಸು, ಕರಿಬೇವು ಹಾಕಿ ಕಲಕಿ. ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ 2-3 ನಿಮಿಷ ಫ್ರೈ ಮಾಡಿ. ನಂತರ ಹೆಚ್ಚಿದ ಟೊಮೇಟೊ ಹಾಕಿ ಸ್ವಲ್ಪ ಫ್ರೈ ಮಾಡಿ ಇದಕ್ಕೆ ಒಣ ಮೆಣಸಿನ ಪುಡಿ, ಅರಿಶಿನ ಪುಡಿ ಹಾಕಿ ಕಲಕಿ, ರುಬ್ಬಿದ ಮಿಶ್ರಣ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಧ್ಯಮ ಉರಿಯಲ್ಲಿ 2-3 ನಿಮಿಷ ಕುದಿಸಿ. ಮೊಸರಿಗೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ ಸಣ್ಣ ಉರಿಯಲ್ಲಿ 1 ನಿಮಿಷ ಬಿಡದೇ ಕಲಕುತ್ತಿರಿ. ನಂತರ ಇದಕ್ಕೆ ಹುರಿದಿಟ್ಟ ಬೆಂಡೆ ಹೋಳುಗಳನ್ನು ಹಾಕಿ 1-2 ನಿಮಿಷ ಕುದಿಸಿದರೆ ಮೊಸರು - ಬೆಂಡೆ ಮಸಾಲಾ ಸಿದ್ಧ. ಇದನ್ನು ಬಿಸಿ ಬಿಸಿಯಾಗಿ ಚಪಾತಿ/ಪುಲ್ಕಾ, ಪೂರಿ ಜೊತೆ ಸರ್ವ್ ಮಾಡಿ.
ಈವತ್ತೇ ಟ್ರೈ ನಿಮಗೂ ಪಾರ್ಸಲ್...
ಪ್ರತ್ಯುತ್ತರಅಳಿಸಿSure Sir... :)
ಅಳಿಸಿ