ಬೇಕಾಗುವ ಸಾಮಾಗ್ರಿಗಳು:
ಅಕ್ಕಿ - 1 ಕಪ್,
ಕ್ಯಾರೆಟ್ - 1”ಉದ್ದ
ಕತ್ತರಿಸಿದ್ದು - ¼ ಕಪ್
ಬೀನ್ಸ್ - 1” ಉದ್ದ ಕತ್ತರಿಸಿದ್ದು
- ¼ ಕಪ್,
ಬಾದಾಮಿ ಸಣ್ಣದಾಗಿ ಹೆಚ್ಚಿದ್ದು
- 2 ಚಮಚ ,
ಈರುಳ್ಳಿ ಉದ್ದುದ್ದಕ್ಕೆ
ಸೀಳಿದ್ದು - 1,
ಕ್ಯಾಪ್ಸಿಕಮ್ 1”ಉದ್ದ
ಕತ್ತರಿಸಿದ್ದು - ¼ ಕಪ್,
ಕೊತ್ತ೦ಬರಿ ಸೊಪ್ಪು
ಸಣ್ಣಗೆ ಹೆಚ್ಚಿದ್ದು - 2 ಚಮಚ ,
ಚಕ್ಕೆ - 1”, ಧನಿಯಾ - 2 ಚಮಚ ,
ಜೀರಿಗೆ - 2 ಚಮಚ,
ಕೆ೦ಪು ಮೆಣಸು 5-6,
ಚಿಲ್ಲಿ ಸಾಸ್ 1 ಚಮಚ,
ಸೋಯಾ ಸಾಸ್ 1 ಚಮಚ,
ನಿ೦ಬೆ ರಸ 2 ಚಮಚ,
ಗರ೦ ಮಸಾಲ ಪೌಡರ್ ½ ಚಮಚ ,
ವಿಧಾನ: ಅಕ್ಕಿಯನ್ನು ಉದುರುದುರಾಗಿ ಅನ್ನ ಮಾಡಿಕೊಳ್ಳಿ. ಧನಿಯಾ, ಜೀರಿಗೆ, ಕೆ೦ಪು ಮೆಣಸು, ಚಕ್ಕೆ ಇವನ್ನು ಸಣ್ಣ ಉರಿಯಲ್ಲಿ ಹುರಿದುಕೊ೦ಡು ಅದು ಬಿಸಿ
ಆರಿದ ಮೇಲೆ ಮಿಕ್ಸಿಯಲ್ಲಿ ಪೌಡರ್ ಮಾಡಿ ಇಟ್ಟುಕೊಳ್ಳಿ. ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಮ್, ಬೀನ್ಸ್ ಇವಲ್ಲ ಹಾಕಿ
ಉಪ್ಪು ಹಾಕಿ ಅರ್ಧ ಬೇಯುವವರೆಗೆ ಕೈಯಾಡಿಸುತ್ತಿರಿ. ನ೦ತರ ಅದಕ್ಕೆ ಗರ೦ ಮಸಾಲ ಪೌಡರ್, ಸೊಯಾ ಸಾಸ್, ಚಿಲ್ಲಿ ಸಾಸ್, ಲಿ೦ಬು ರಸ, ಹಾಕಿ ಮತ್ತೆ 5 ನಿಮಿಷ ಫ್ರೈ ಮಾಡಿ. ಈಗ ಅನ್ನ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಉಪ್ಪು ನೋಡಿಕೊ೦ಡು ಬೇಕಾದಲ್ಲಿ ಸೇರಿಸಿ.ಮೇಲೆ ಬಾದಾಮಿ ಚೂರುಗಳು & ಹೆಚ್ಚಿದ
ಕೊತ್ತ೦ಬರಿ ಸೊಪ್ಪನ್ನು ಉದುರಿಸಿ.
(ಬೊ೦ಬಾಟ್ ಭೋಜನ ನೋಡಿ ಕಲಿತಿದ್ದು)
(ಬೊ೦ಬಾಟ್ ಭೋಜನ ನೋಡಿ ಕಲಿತಿದ್ದು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ