ಸಾಮಗ್ರಿಗಳು:
ತೊಗರಿಬೇಳೆ - 3 ಟೇ.ಚಮಚ,
ಒಣಮೆಣಸು -5-6,
ಧನಿಯಾ, ಜೀರಿಗೆ, ಎಳ್ಳು - ತಲಾ 1/2 ಚಮಚ
ಉದ್ದಿನಬೇಳೆ - 1ಚಮಚ ,
ತೆ೦ಗಿನತುರಿ - 3-4 ಟೇ.ಚಮಚ,
ಈರುಳ್ಳಿ - 1,
ಉಪ್ಪು ರುಚಿಗೆ ತಕ್ಕಷ್ಟು,
ಬೆಲ್ಲ - 1 ಚಮಚ , ಹುಣಸೆಹಣ್ಣು ಚಿಕ್ಕ ನೆಲ್ಲಿಕಾಯಿ ಗಾತ್ರದಷ್ಟು
ವಿಧಾನ : ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ಮೇಲೆ ತೊಗರಿಬೇಳೆ, ಒಣಮೆಣಸು, ಧನಿಯಾ, ಜೀರಿಗೆ, ಎಳ್ಳು, ಉದ್ದಿನಬೇಳೆ ಇವೆಲ್ಲವನ್ನು ಸಣ್ಣ ಉರಿಯಲ್ಲಿ ಫ್ರೈ ಮಾಡಿ ಬದಿಗೆ ಇಡಿ. ಇದು ಬಿಸಿ ಆರಿದ ಮೇಲೆ, ತೆ೦ಗಿನತುರಿ, ಹುಣಸೆಹಣ್ಣು ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಉಪ್ಪು, ಬೆಲ್ಲ ಹಾಗು ಉದ್ದುದ್ದಕೆ ಹೆಚ್ಚಿದ ಈರುಳ್ಳಿ ಹಾಕಿ ನೀರು ಸೇರಿಸಿ ಸುಮಾರು ಸಾ೦ಬಾರಿನ ಹದಕ್ಕೆ ನೀರು ಹಾಕಿ ಗೊಜ್ಜಿನ ಹದ ಬರುವವರೆಗೆ ಕುದಿಸಿ. ಆಗಾಗ ಸೌಟಿನ್ನು ಆಡಿಸುತ್ತಿರಬೇಕು ಇಲ್ಲವಾದಲ್ಲಿ ಅಡಿ ಹಿಡಿಯುತ್ತದೆ. ಈಗ ಬಿಸಿ ಬಿಸಿ ತೊಗರಿಬೇಳೆ ಗೊಜ್ಜು ಅನ್ನ/ಚಪಾತಿ ಜೊತೆ ಸವಿಯಲು ಸಿದ್ಧ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ