ಸಾಮಗ್ರಿಗಳು:
ಕಡ್ಲೆಬೇಳೆ : 2 ಕಪ್
ಹೆಸರುಬೇಳೆ : 1 ಕಪ್
ಉದ್ದಿನಬೇಳೆ : 2 ಚಮಚ
ಮೆಂತ್ಯ ಕಾಳು : 1 ಚಮಚ
ಜೀರಿಗೆ : 2 ಚಮಚ
ಧನಿಯಾ ಬೀಜ : 1 ಚಮಚ
ಅಕ್ಕಿ : 2 ಚಮಚ
ಸೂಜಿ ರವೆ : 4 ಚಮಚ
ಅರಿಶಿನ ಪುಡಿ : 1/2 ಚಮಚ
ಇಂಗು : 1/4 ಚಮಚ
ವಿಧಾನ :
ಅರಿಶಿನ ಪುಡಿ ಮತ್ತು ಇಂಗು ಹೊರತು ಪಡಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ (Dry fry). ತಣ್ಣಗಾದ ಮೇಲೆ ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ಜೊತೆಗೆ ಅರಿಶಿನ ಪುಡಿ, ಇಂಗು ಸೇರಿಸಿ ನುಣ್ಣಗೆ ಪುಡಿ ಮಾಡಿ. ನೀರು ತಾಗಿಸದಂತೆ, ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟರೆ 6-8 ತಿಂಗಳು ಕೆಡುವುದಿಲ್ಲ. ಬಿಸಿ ಬಿಸಿ ಅನ್ನಕ್ಕೆ ಉಪ್ಪು, ಬೆಣ್ಣೆ ಅಥವಾ ತುಪ್ಪದ ಜೊತೆ ಕಲಸಿ ತಿನ್ನಲು ಬಲು ರುಚಿ. ಅಲ್ಲದೆ ಬೆಳ್ಳುಳ್ಳಿ ಬಿಡಿಸಿ ಜಜ್ಜಿಕೊಂಡು ಅದನ್ನು ತುಪ್ಪದಲ್ಲಿ ಹೊಂಬಣ್ಣ ಬರುವವರೆಗೆ ಫ್ರೈ ಮಾಡಿ ಬಿಸಿ ಅನ್ನ, ಮೆಂತ್ಯ ಹಿಟ್ಟು ಸೇರಿಸಿ ಅದಕ್ಕೆ ಹಾಕಿ ಕಲಸಿ ತಿಂದರೆ ಆಹಾ.....!! ಮುಂದಿನ ಸಂಚಿಕೆಯಲ್ಲಿ ಮೆಂತ್ಯ ಹಿಟ್ಟಿನ ದಿಢೀರ್ ಗೊಜ್ಜು ಮಾಡಲು ಹೇಳಿಕೊಡುತ್ತೇನೆ.