ಸಾಮಗ್ರಿಗಳು:
ಸಣ್ಣಗೆ ಹೆಚ್ಚಿದ ಟೊಮೇಟೊ 1 ಕಪ್, ಉದ್ದುದ್ದ ಹೆಚ್ಚಿದ ಈರುಳ್ಳಿ 1 ಕಪ್, ಬೆಳ್ಳುಳ್ಳಿ 5-6 ಎಸಳು, ರಸಂ ಪುಡಿ 1/2 ಚಮಚ, ಉದ್ದ ಸೀಳಿದ ಹಸಿಮೆಣಸಿನ ಕಾಯಿ 1, ಅಚ್ಚ ಖಾರದ ಪುಡಿ 1/4 ಚಮಚ, ಕರಿಬೇವು 8-10 ಎಲೆಗಳು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಎಣ್ಣೆ 2-3 ಚಮಚ, ಜೀರಿಗೆ - ಸಾಸಿವೆ ತಲಾ 1/2 ಚಮಚ, ಉಪ್ಪು ರುಚಿಗೆ
ವಿಧಾನ :
ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ ಸಿಡಿದ ಮೇಲೆ ಹಸಿಮೆಣಸಿನ ಕಾಯಿ, ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಬಾಡಿಸಿ. ನಂತರ ಈರುಳ್ಳಿ ಹಾಕಿ 1 ನಿಮಿಷ ಹುರಿದು, ಸಣ್ಣ ಹೆಚ್ಚಿದ ಟೊಮೇಟೊ ಹಾಕಿ ಸ್ವಲ್ಪ ಉಪ್ಪು ಹಾಕಿ ಅದು ಮೆತ್ತಗಾಗುವ ತನಕ ಹುರಿಯಿರಿ. ಇದಕ್ಕೆ ರಸಂ ಪುಡಿ, ಅಚ್ಚ ಖಾರದ ಪುಡಿ (ರಸಂ ಪುಡಿ ಖಾರವಿದ್ದರೆ ಖಾರದ ಪುಡಿ ಹಾಕಬೇಕಾಗಿಲ್ಲ) ಹಾಕಿ ಕಲಕಿ ನಂತರ ಕರಿಬೇವು, ಕೊತ್ತಂಬರಿ ಸೊಪ್ಪು ೨-೩ ಕಪ್ ನೀರು ಹಾಕಿ. ಬೇಕಿದ್ದರೆ ಸ್ವಲ್ಪ ಉಪ್ಪು ಹಾಕಿ ಕುದಿಸಿ ದಿಡೀರ್ ಸಾರು ಸವಿಯಲು ಸಿದ್ಧ.
(ವಿಜಯವಾಣಿ ಪತ್ರಿಕೆಗೆ ಕಳಿಸಿ ಪ್ರಕಟವಾದ ಅಡುಗೆ)