ಸಾಮಗ್ರಿಗಳು :
ಮೆಂತ್ಯ ಸೊಪ್ಪು : 1 ಕಟ್ಟು
ತೊಗರಿಬೇಳೆ : 3-4 ಚಮಚ
ಸಣ್ಣ ಹೆಚ್ಚಿದ ಈರುಳ್ಳಿ : 1
ತೆಂಗಿನ ತುರಿ : 1/2 ಕಪ್
ಲಿಂಬು ರಸ / ವಾಟೆ ಪುಡಿ / ಆಮ್ಚೂರ್ ಪುಡಿ : ಹುಳಿಗೆ ತಕ್ಕಷ್ಟು
ಹಸಿಮೆಣಸಿನ ಕಾಯಿ : 2-3
ಎಣ್ಣೆ : 4 ಚಮಚ
ಸಾಸಿವೆ : 1/2 ಚಮಚ
ಸಕ್ಕರೆ : 1 ಚಮಚ
ಉಪ್ಪು : ರುಚಿಗೆ
ವಿಧಾನ :
ಮೆಂತ್ಯ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿ. ತೊಗರಿಬೇಳೆ ತೊಳೆದು ಸ್ವಲ್ಪ ಗಟ್ಟಿ ಇರುವಂತೆ (ಪೂರ್ತಿ ಬೆಂದು ಕರಗದಂತೆ) ಬೇಯಿಸಿಕೊಳ್ಳಿ. ಹಸಿಮೆಣಸಿನಕಾಯಿ ಉದ್ದುದ್ದ ಸೀಳಿಕೊಳ್ಳಿ. ಬಾಣಲೆಗೆ ಎಣ್ಣೆ, ಸಾಸಿವೆ ಹಾಕಿ ಚಿಟಪಟಾಯಿಸಿ. ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಈಗ ಹೆಚ್ಚಿದ ಮೆಂತ್ಯ ಸೊಪ್ಪು ಹಾಕಿ ಸ್ವಲ್ಪ ಉಪ್ಪು, ಸಕ್ಕರೆ ಹಾಕಿ ಸೊಪ್ಪನ್ನು ಚೆನ್ನಾಗಿ ಫ್ರೈ ಮಾಡಿ. ಉಪ್ಪು, ಸಕ್ಕರೆ ಹಾಕಿ ಫ್ರೈ ಮಾಡುವುದರಿಂದ ಮೆಂತ್ಯ ಸೊಪ್ಪಿನ ಕಹಿ ಅಂಶ ಹೋಗುತ್ತದೆ. ನಂತರ ಬೇಯಿಸಿದ ಬೇಳೆ, ಸ್ವಲ್ಪ ನೀರು, ಮುಂಚೆ ಹಾಕಿರುವ ಉಪ್ಪನ್ನು ಗಮನದಲ್ಲಿಟ್ಟುಕೊಂಡು ಇನ್ನು ಸ್ವಲ್ಪ ಉಪ್ಪು, ವಾಟೆ ಪುಡಿ / ಆಮ್ಚೂರ್ ಪುಡಿ (ಲಿಂಬುರಸ ಆದರೆ ಕೊನೆಯಲ್ಲಿ ಉರಿ ಆರಿಸಿ ಹಾಕಿ), ತೆಂಗಿನತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 1-2 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ, ನೀರು ಆರಿಸಿದರೆ ಮೆಂತ್ಯ ಸೊಪ್ಪು - ತೊಗರಿಬೇಳೆ ಪಲ್ಯ ಸಿದ್ಧ. ಅನ್ನ ಮತ್ತು ಚಪಾತಿಯ ಜೊತೆ ಚೆನ್ನಾಗಿರುತ್ತದೆ.