ಅರಿಶಿನದ ಗಿಡವನ್ನು ಮನೆಯಲ್ಲೇ ಬೆಳೆದುಕೊಂಡರೆ ಅದರಿಂದ ರುಚಿಕರ ತಂಬುಳಿ, ಗೊಜ್ಜು ಮಾಡಬಹುದು. ಬೇಕಾದಾಗ ಮಣ್ಣು ಅಗೆದು ಅರಿಶಿನ ಕೊಂಬು ಕಿತ್ತು ಫ್ರೆಶ್ ಆಗಿ ಅಡುಗೆ ತಯಾರಿಸಬಹುದು. ಆರೋಗ್ಯಕ್ಕೂ ತುಂಬಾ ಒಳ್ಳೆಯದು ಅರಿಶಿನ ಜೊತೆಗೆ ಹಾಲಿನ ಕೆನೆಯ ಜೊತೆ ತೇಯ್ದು ಮುಖಕ್ಕೆ ಹಚ್ಚಿಕೊಂಡರೆ ಮುಖದ ಕಾಂತಿಯೂ ದ್ವಿಗುಣಗೊಳ್ಳುತ್ತದೆ.
ಸಾಮಗ್ರಿಗಳು :
ಹಸಿ ಅರಿಶಿನ ಕೊಂಬು : 1/2 ಇಂಚು
ತೆಂಗಿನ ತುರಿ : 1 ಕಪ್
ಬೆಲ್ಲ : 3-4 ಟೇಬಲ್ ಚಮಚ
ಮಜ್ಜಿಗೆ ಅಥವಾ ಮೊಸರು : 1/2 ಕಪ್
ಎಣ್ಣೆ : 1 ಚಮಚ
ಸಾಸಿವೆ: 1/2 ಚಮಚ
ಒಣ ಮೆಣಸಿನಕಾಯಿ : 1/2
ಉಪ್ಪು : ರುಚಿಗೆ
ವಿಧಾನ:
ಅರಿಶಿನ ಕೊಂಬನ್ನು ಚೆನ್ನಾಗಿ ತೊಳೆದು ತೆಳ್ಳಗೆ ಸ್ಲೈಸ್ ಮಾಡಿಕೊಳ್ಳಿ. ತೆಂಗಿನ ತುರಿಗೆ ಹೆಚ್ಚಿದ ಅರಿಶಿನ ಸೇರಿಸಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ. ಅದಕ್ಕೆ ಮಜ್ಜಿಗೆ ಹಾಕಿ. ಮೊಸರು ಹಾಕುವುದಾದರೆ ಸೌಟಿನಿಂದ ಗಂಟಿಲ್ಲದಂತೆಕಲಕಿ ಹಾಕಿ, ಅರ್ಧ - ಮುಕ್ಕಾಲು ಕಪ್ ನೀರು, ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಕಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಒಣ ಮೆಣಸಿನ ಚೂರು, ಸಾಸಿವೆ ಹಾಕಿ ಚಿಟಪಟಾಯಿಸಿ ಯಂಬುಳಿಗೆ ಒಗ್ಗರಣೆ ಮಾಡಿ, ಒಣ ಮೆಣಸನ್ನು ಕೈಯಿಂದ ನುರಿಯಿರಿ. ಅನ್ನದ ಜೊತೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ