ಬೆಳಿಗ್ಗೆ ತಿಂಡಿಗೆ ಮಾಡಿದ ಉಪ್ಪಿಟ್ಟು ಉಳಿದುಬಿಟ್ಟರೆ ಅದನ್ನು ಮತ್ತೆ ಮೂಸಿ ನೋಡುವವರೂ ಇರುವುದಿಲ್ಲ. ಹೆಂಗಸರು ಬಿಸಾಕಲು ಬೇಜಾರಾಗಿ ತಿನ್ನಬೇಕಾಗುತ್ತದೆ. ಆದರೆ ಉಳಿದ ಉಪ್ಪಿಟ್ಟಿನಿಂದ ಈ ಕಟ್ಲೆಟ್ ಮಾಡಿ ನೋಡಿ ಮನೆಯವರೆಲ್ಲಾ ಚಪ್ಪರಿಸಿಕೊಂಡು ಸವಿಯುತ್ತಾರೆ. ಮಕ್ಕಳಿಗಾದರೆ ಸ್ವಲ್ಪ ಖಾರ ಕಮ್ಮಿ ಹಾಕಿ ಮಾಡಿ ಮಕ್ಕಳೂ ಇಷ್ಟ ಪಟ್ಟು ತಿನ್ನುತ್ತಾರೆ. ಆಮೇಲೆ ದೊಡ್ಡವರಿಗೆ ಖಾರ ಹಾಕಿ ಮಾಡಿಕೊಡಿ.
ಸಾಮಗ್ರಿಗಳು :
ಉಳಿದ ಉಪ್ಪಿಟ್ಟು : 1 ಕಪ್
ಬೇಯಿಸಿದ ಆಲೂಗಡ್ಡೆ : 2 ಮಧ್ಯಮ ಗಾತ್ರದ್ದು
ಸಣ್ಣ ಹೆಚ್ಚಿದ ಮಿಶ್ರ ತರಕಾರಿ (ಕ್ಯಾರೆಟ್, ಕ್ಯಾಪ್ಸಿಕಂ, ಬೀನ್ಸ್) : 1/2 ಕಪ್ (ಉಪ್ಪಿಟ್ಟಿಗೆ ತರಕಾರಿ ಹಾಕದಿದ್ದರೆ ಇನ್ನು 1/4 ಕಪ್ ಜಾಸ್ತಿ ಬೇಕು)
ಸಣ್ಣ ಹೆಚ್ಚಿದ ಈರುಳ್ಳಿ : 1 ಮಧ್ಯಮ ಗಾತ್ರದ್ದು
ಸಣ್ಣ ಹೆಚ್ಚಿದ ಕೊತ್ತಂಬರಿ ಸೊಪ್ಪು : 2 ಟೇಬಲ್ ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ : 1 ಟೀ ಚಮಚ
ಅಚ್ಚ ಖಾರದ ಪುಡಿ : 1/2 ಚಮಚ
ಗರಂ ಮಸಾಲಾ ಪುಡಿ : 1/4 ಟೀ ಚಮಚ
ಲಿಂಬು ರಸ : 1 ಚಮಚ
ಬ್ರೆಡ್ ಕ್ರಮ್ಸ್ ಅಥವಾ ಚಿರೋಟಿ ರವಾ : 1/2 - 3/4 ಕಪ್
ಎಣ್ಣೆ : ತವಾ ಫ್ರೈ ಮಾಡಲು
ಉಪ್ಪು: ರುಚಿಗೆ
ವಿಧಾನ :
ಹೆಚ್ಚಿದ ತರಕಾರಿಗಳನ್ನು ಬೇಯಿಸಿಕೊಳ್ಳಿ. ಬ್ರೆಡ್ ಕ್ರಮ್ಸ್ ಗೆ ಎರಡು ಬ್ರೆಡ್ ಅನ್ನು ಚೂರು ಮಾಡಿ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬಹುದು, ಇಲ್ಲದಿದ್ದರೆ ಚಿರೋಟಿ ರವೆ ಆದರೂ ಆದೀತು. ಆಲೂಗಡ್ಡೆಯನ್ನು ನುಣ್ಣಗೆ ಮಸೆದು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ಬ್ರೆಡ್ ಪುಡಿ / ಚಿರೋಟಿ ರವೆ, ಎಣ್ಣೆ ಬಿಟ್ಟು ಉಳಿದೆಲ್ಲ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
ಇದರಿಂದ ನಿಂಬೆ ಗಾತ್ರದ ಉಂಡೆ ಮಾಡಿಕೊಂಡು ಕಟ್ಲೆಟ್ ಆಕಾರಕ್ಕೆ ಚಪ್ಪಟೆಯಾಗಿ ತಟ್ಟಿಕೊಂಡು ಬ್ರೆಡ್ ಪುಡಿ ಅಥವಾ ಚಿರೋಟಿ ರವೆಯಲ್ಲಿ ಎರಡೂ ಕಡೆ ಚೆನ್ನಾಗಿ ಹೊರಳಿಸಿ ಕಾದ ತವಾ ಮೇಲೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ತಟ್ಟಿಕೊಂಡ ಕಟ್ಲೆಟ್ ಹಾಕಿ, ಮೇಲಿಂದ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ಎರಡೂ ಕಡೆ ಬೇಯಿಸಿ (shallow fry). ಟೊಮೇಟೊ ಸಾಸ್ ಜೊತೆ ಸರ್ವ್ ಮಾಡಿ.