ಸಾಮಗ್ರಿಗಳು:
ಸಣ್ಣ ಹೆಚ್ಚಿದ ಮೆಂತ್ಯ ಸೊಪ್ಪು : 1.5 ಕಪ್
ಕಡ್ಲೆ ಬೇಳೆ : 3 ಟೇಬಲ್ ಚಮಚ
ಉದ್ದಿನಬೇಳೆ : 1.5 ಟೇಬಲ್ ಚಮಚ
ಒಣ ಕೊಬ್ಬರಿತುರಿ : 1/4 ಕಪ್
ಬಿಳಿ ಎಳ್ಳು : 1 ಟೇಬಲ್ ಚಮಚ
ಒಣಮೆಣಸಿನಕಾಯಿ : 6-7
ಇಂಗು : 2-3 ಚಿಟಿಕೆ
ಸಣ್ಣ ಹೆಚ್ಚಿದ ಈರುಳ್ಳಿ : 1/4 ಕಪ್
ವಾಟೆ ಪುಡಿ / ಆಮಚೂರ್ ಪುಡಿ : 1/4 ಚಮಚ
ಸಕ್ಕರೆ : 1/4 ಟೀ ಚಮಚ
ಎಣ್ಣೆ : 4-5 ಚಮಚ
ಸಾಸಿವೆ: 1/4 ಚಮಚ
ಉಪ್ಪು : ರುಚಿಗೆ
ವಿಧಾನ :
ಮೆಂತ್ಯ ಸೊಪ್ಪು ಹೆಚ್ಚುವ ಮೊದಲು ಚೆನ್ನಾಗಿ ಬಿಡಿಸಿ ತೊಳೆದುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕದೆಯೇ ಕಡ್ಲೆಬೇಳೆ, ಉದ್ದಿನಬೇಳೆ, ತುರಿದ ಕೊಬ್ಬರಿ, ಎಳ್ಳು ಎಲ್ಲವನ್ನೂ 'ಬೇರೆ-ಬೇರೆಯಾಗಿ' ಹುರಿದುಕೊಳ್ಳಿ. ನಂತರ ೨-೩ ಹನಿ ಎಣ್ಣೆ ಹಾಕಿ ಒಣಮೆಣಸಿನಕಾಯಿ ಹುರಿದುಕೊಳ್ಳಿ. ಈಗ ಹುರಿದ ಸಾಮಗ್ರಿಗಳು, ಇಂಗು ಸೇರಿಸಿ ಮಿಕ್ಸಿಗೆ ಹಾಕಿ ನೀರು ಹಾಕದೇ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಹಾಕಿ ಸಿಡಿಸಿ. ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಹೆಚ್ಚಿದ ಸೊಪ್ಪು ಹಾಕಿ ಸ್ವಲ್ಪ ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಹುರಿಯಿರಿ. ನೀರು ಹಾಕುವ ಅವಶ್ಯಕತೆ ಇಲ್ಲ. ಉಪ್ಪು, ಸಕ್ಕರೆ ಹಾಕಿದಾಗ ಸೊಪ್ಪು ಸ್ವಲ್ಪ ನೀರಿನಂಶ ಬಿಡುತ್ತದೆ. ಅದರಲ್ಲೇ ಸಣ್ಣ ಉರಿಯಲ್ಲಿ ಬೇಯುವತನಕ ಫ್ರೈ ಮಾಡಿ. ನಂತರ ಮತ್ತೆ ಪುಡಿಗೆ ಬೇಕಾಗುವಷ್ಟು ಉಪ್ಪು, ವಾಟೆಪುಡಿ / ಆಮಚೂರ್ ಪುಡಿ ಹಾಕಿ, ಮಾಡಿಟ್ಟುಕೊಂಡ ಪುಡಿ ಹಾಕಿ (ಖಾರ ಕಮ್ಮಿ ಎನಿಸಿದರೆ ಅಚ್ಚ ಖಾರದ ಪುಡಿ ಹಾಕಬಹುದು) ಚೆನ್ನಾಗಿ ಮಿಕ್ಸ್ ಮಾಡಿ ಉರಿ ಆರಿಸಿ. ಬಿಸಿ ಬಿಸಿ ಅನ್ನದ ಜೊತೆ ಪಲ್ಯ ಸವಿದರೆ ಆಹಾ....!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ