ಗುರುವಾರ, ಏಪ್ರಿಲ್ 19, 2018

ಖರ್ಜೂರ ಬಾದಾಮಿ ಮಿಲ್ಕ್ ಶೇಕ್ :

ಇದು ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಆರೋಗ್ಯಕರ ಪೇಯ. ಖರ್ಜೂರದಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುವುದರಿಂದ  ಕೆಂಪು ರಕ್ತದ ಕಣಗಳನ್ನು ಜಾಸ್ತಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಗರ್ಭಿಣಿಯರು ವಾರಕ್ಕೆರಡು ಮೂರು ಬಾರಿ ಸೇವಿಸಿದರೆ ಒಳ್ಳೆಯದು. 

ಸಾಮಗ್ರಿಗಳು: 
ಕಾಯಿಸಿ ತಣ್ಣಗಾದ ಹಾಲು : 2 ಗ್ಲಾಸ್ 
ಖರ್ಜೂರ : 8-10 
ನೆನೆಸಿದ ಬಾದಾಮಿ : 8-10 
ಜೇನುತುಪ್ಪ : 2 ಚಮಚ (ಖರ್ಜೂರ ಸಿಹಿ ಇರುವುದರಿಂದ ಜೇನುತುಪ್ಪ ಹಾಕಿದರೆ ಸಿಹಿ ಜಾಸ್ತಿ ಎನಿಸಿದರೆ ಬಿಡಬಹುದು)  

ವಿಧಾನ :
ಮಿಕ್ಸಿ ಜಾರ್ ಗೆ ಖರ್ಜೂರ, ನೆನೆಸಿದ ಬಾದಾಮಿ, ಸ್ವಲ್ಪ ಹಾಲು ಸೇರಿಸಿ ರುಬ್ಬಿಕೊಂಡು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ಉಳಿದ ಹಾಲು, ಜೇನುತುಪ್ಪ ಹಾಕಿ ಕಲಕಿ ಗ್ಲಾಸ್ ಗೆ ಬಗ್ಗಿಸಿದರೆ ಆರೋಗ್ಯಕರ ಪೇಯ ಕುಡಿಯಲು ರೆಡಿ. ಬೇಕಿದ್ದರೆ ಐಸ್ ಕ್ಯೂಬ್ಸ್ ಹಾಕಿ ಅಥವಾ ಹಾಲನ್ನು ಫ್ರಿಡ್ಜ್ ನಲ್ಲಿಟ್ಟು ತಣ್ಣಗೆ ಮಾಡಿ ಸೇರಿಸಿ ಕುಡಿಯಬಹುದು.  






1 ಕಾಮೆಂಟ್‌: