ಶುಕ್ರವಾರ, ನವೆಂಬರ್ 2, 2018

ಮೆಂತ್ಯ ಹಿಟ್ಟಿನ ಮೊಸರು ಗೊಜ್ಜು :

ಹಿಂದಿನ ಸಂಚಿಕೆಯಲ್ಲಿ ಮೆಂತ್ಯ ಹಿಟ್ಟು ಮಾಡುವುದು ತಿಳಿಸಿದ್ದೆ. ಇಂದು ಆ ಹಿಟ್ಟನ್ನು ದಿಢೀರ್ ಮೊಸರು ಗೊಜ್ಜನ್ನು ಮಾಡುವ ವಿಧಾನ ತಿಳಿಯೋಣ. 2-3 ಅಡುಗೆ ಮಾಡಲು ಆಲಸ್ಯತನ ಉಂಟಾದಾಗ  ಒಂದು ಸಾರು / ಸಾಂಬಾರು ಮಾಡಿ ಈ ಗೊಜ್ಜನ್ನು ಮಾಡಿಬಿಟ್ಟರೆ ಅಂದಿನ ಅಡುಗೆಯ ಕಥೆ ಸಂಪೂರ್ಣವಾಗಿಬಿಡುತ್ತದೆ. 

ಸಾಮಗ್ರಿಗಳು :
ಮೆಂತ್ಯ ಹಿಟ್ಟು : 2 ಚಮಚ 
ಮೊಸರು : 2 ಕಪ್ 
ಸಣ್ಣ ಹೆಚ್ಚಿದ ಈರುಳ್ಳಿ : 1/4 ಕಪ್ 
ಒಣಮೆಣಸಿನ ಕಾಯಿ : 2-3 ಚೂರು 
ಹಸಿಮೆಣಸಿನ ಕಾಯಿ : 1-2 
ಎಣ್ಣೆ : 2 ಚಮಚ 
ಸಾಸಿವೆ: 1/2 ಚಮಚ 
ಉದ್ದಿನಬೇಳೆ : 1/2 ಚಮಚ 
ಉಪ್ಪು : ರುಚಿಗೆ 

ವಿಧಾನ :
 ಮೊಸರಿಗೆ ಮೆಂತ್ಯ ಹಿಟ್ಟು ಹಾಕಿ ಗಂಟಿಲ್ಲದಂತೆ ಕಲಸಿ. ಇದಕ್ಕೆ ಸಣ್ಣ ಹೆಚ್ಚಿದ ಈರುಳ್ಳಿ, ಉಪ್ಪು ಹಾಕಿ ಕಲಸಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಉದ್ದಿನಬೇಳೆ ಹಾಕಿ ಹೊಂಬಣ್ಣ ಬಂದ ಮೇಲೆ ಸಾಸಿವೆ ಹಾಕಿ ಚಿಟಪಟಾಯಿಸಿ, ಒಣ ಮೆಣಸಿನ ಚೂರು, ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿ ಗೊಜ್ಜಿಗೆ ಒಗ್ಗರಣೆ ಮಾಡಿದರೆ ರುಚಿಯಾದ, ದಿಢೀರ್ ಮೊಸರು ಗೊಜ್ಜು ಅನ್ನದ ಜೊತೆ ಸವಿಯಲು ಸಿದ್ಧ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ