ಸೋಮವಾರ, ಜೂನ್ 10, 2013

ಸ್ಟಫ್ಡ್ ಕ್ಯಾಪ್ಸಿಕಮ್ (ಕ್ಯಾಪ್ಸಿಕಮ್ ಎಣ್ಣೆಗಾಯಿ)




ಬೇಕಾಗುವ ಸಾಮಾಗ್ರಿಗಳು: ಚಿಕ್ಕ ಕ್ಯಾಪ್ಸಿಕಮ್ - 5-6 , ಎಣ್ಣೆ 1/2 ಕಪ್, ಮಸಾಲೆಗೆ : ಕಡಲೆ ಬೇಳೆ 5 ಚಮಚ, ಉದ್ದಿನಬೇಳೆ - 2 ಚಮಚ, ಧನಿಯಾ, ಜೀರಿಗೆ ತಲಾ 1 ಚಮಚ, ಇ೦ಗು ಚಿಟಿಕೆ, ಒಣ ಮೆಣಸು - 8-9 (ಖಾರಕ್ಕೆ ತಕ್ಕಷ್ಟು), ಉಪ್ಪು ರುಚಿಗೆ, ತೆ೦ಗಿನ ತುರಿ 1/2 ಕಪ್, ರುಚಿಗೆ 1/2 ಚಮಚ ಸಕ್ಕರೆ ಹಾಕಬಹುದು.

ಮಾಡುವ ವಿಧಾನ: ಮಸಾಲ ಪದಾರ್ಥಗಳನ್ನು ಹುರಿದು ತೆ೦ಗಿನ ತುರಿ ಜೊತೆ ತರಿ ತರಿ ಪುಡಿ ಮಾಡಿಕೊ೦ಡು ಅದಕ್ಕೆ ಸ್ವಲ್ಪ ಉಪ್ಪು ಸ್ವಲ್ಪ ನೀರು ಸೇರಿಸಿ, ಮಸಾಲವು ಗಟ್ಟಿ ಚಟ್ನಿಯ ಹದಕ್ಕೆ ಇರಬೇಕು. ಕ್ಯಾಪ್ಸಿಕಮ್ ತೊಟ್ಟನ್ನು ಬೀಜ ಸಹಿತ ತೆಗೆಯಬೇಕು (ಕ್ಯಾಪ್ಸಿಕಮ್ ಒಡೆಯದ೦ತೆ ತೊಟ್ಟು ತೆಗೆಯಿರಿ ಇಲ್ಲವಾದಲ್ಲಿ ಮಸಾಲಾವು ಹೊರಚೆಲ್ಲಬಹುದು) ಈಗ ಕ್ಯಾಪ್ಸಿಕಮ್ ಒಳಗೆ ತಯಾರಿಸಿದ ಮಸಾಲವನ್ನು ತು೦ಬಿ. ಬಾಣಲೆ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿ ಆದ ಮೇಲೆ ಕ್ಯಾಪ್ಸಿಕಮನ್ನು ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಿ, ಅಗತ್ಯವಿದ್ದಲ್ಲಿ ಆಗಾಗ ಸ್ವಲ್ಪ ಎಣ್ಣೆ ಸೇರಿಸಿ. ಮಸಾಲೆಯು ಜಾಸ್ತಿ ಉಳಿದಲ್ಲಿ ಎಲ್ಲ ಕ್ಯಾಪ್ಸಿಕಮ್ ಫ್ರೈ ಆದ ಮೇಲೆ ಉಳಿದ ಮಸಾಲೆ ಹಾಕಿ 2 ನಿಮಿಷ ಫ್ರೈ ಮಾಡಿದರೆ ಕ್ಯಾಪ್ಸಿಕಮ್ ಎಣ್ಣೆಗಾಯಿ ರೆಡಿ.

ಇದು ಅನ್ನ, ಚಪಾತಿ, ದೋಸೆ ಜೊತೆ ಚೆನ್ನಾಗಿರುತ್ತದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ