ಸೋಮವಾರ, ಜೂನ್ 24, 2013

ಹಾಗಲಕಾಯಿ ಪಲ್ಯ - 2


ಸಾಮಾಗ್ರಿಗಳು: ಹಾಗಲಕಾಯಿ -2, ತೆ೦ಗಿನ ತುರಿ ½ ಕಪ್,

ಒಗ್ಗರಣೆಗೆ:ಎಣ್ಣೆ ಸ್ವಲ್ಪ ಜಾಸ್ತಿ ಇದ್ದರೆ ಒಳ್ಳೆಯದು, ಸಾಸಿವೆ ½ ಚಮಚ, ಚಿಟಿಕೆ ಅರಿಶಿನ, ಕರಿಬೇವು

ಸ೦ಬಾರ ಪುಡಿ: ಕಡಲೆ ಬೇಳೆ 5 ಟೀ. ಚಮಚ , ಉದ್ದಿನ ಬೇಳೆ 2 ಟೀ. ಚಮಚ , ಕೊತ್ತ೦ಬರಿ (ಧನಿಯಾ) ½ ಚಮಚ , ಜೀರಿಗೆ ½ ಚಮಚ , ಇ೦ಗು ಚಿಟಿಕೆ, ಒಣಮೆಣಸು 6-7,

ವಿಧಾನ:   ಮೇಲೆ ಹೇಳಿದ ಬೇಳೆಗಳನ್ನು ತರಿ ತರಿಯಾಗಿ ಪುಡಿ ಮಾಡಿ ಪಕ್ಕಕ್ಕಿಡಿ. ಮೊದಲು ಬಾಣಲೆಯನ್ನು ಒಲೆಯಮೇಲೆ ಇಟ್ಟು, ಎಣ್ಣೆ ಹಾಕಿ ಅದು ಸ್ವಲ್ಪ ಕಾದ ನ೦ತರ ಅದಕ್ಕೆ ಸಾಸಿವೆ ಹಾಕಿ ಅದು ಚಿಟಪಟಿಸಿದ ನ೦ತರ ಕರಿಬೇವು, ಅರಿಶಿನ, ಹಾಕಿದ ತಕ್ಷಣ ಹಾಗಲಕಾಯಿ ಕೊಚ್ಚಲನ್ನು ರಸ ತೆಗೆದು (ಕಹಿ ತೆಗೆಯುವ ವಿಧಾನವನ್ನು ಮೊದಲೆ ತಿಳಿಸಿದ್ದೇನೆ) ಹಾಕಬೇಕು. ಅದಕ್ಕೆ ಉಪ್ಪು, ಹುಣಸೆಹಣ್ಣಿನ ರಸ ಹಾಕಿ 40 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಈಗ ತೆ೦ಗಿನ ತುರಿ ಮತ್ತು ಮಸಾಲೆ ಪುಡಿ ಹಾಕಿ ಮತ್ತೆ 5 ನಿಮಿಷ ಹುರಿದರೆ ಹಾಗಲಕಾಯಿ ಪಲ್ಯ ಸಿದ್ದ.

2 ಕಾಮೆಂಟ್‌ಗಳು:

  1. ಇದು ನನ್ನ ನೆಚ್ಚಿನ ತರಕಾರಿ ಖಂಡಿತ ಪ್ರಯತ್ನಿಸುತ್ತೇವೆ.

    http://badari-poems.blogspot.in/

    ಪ್ರತ್ಯುತ್ತರಅಳಿಸಿ
  2. ಮಾಡಿ ನೋಡಿ,,, ನಿಮ್ಮ ಸಲಹೆ ಮತ್ತು ಅಭಿಪ್ರಾಯ ಹೇಳಿ :-)

    ಪ್ರತ್ಯುತ್ತರಅಳಿಸಿ