ಮಂಗಳವಾರ, ಜುಲೈ 2, 2013

ಬೇರು ಹಲಸಿನ (ದೀವಿ ಹಲಸು) ಪೋಡಿ:

ಸಾಮಗ್ರಿಗಳು: ಚೆನ್ನಾಗಿ ಬಲಿತ ಬೇರು ಹಲಸು 1, ಗೋಧಿ ರವೆ / ಉಪ್ಪಿಟ್ಟು ರವೆ (ಮೀಡಿಯಂ) 2 ಕಪ್,  ಅಚ್ಚ ಮೆಣಸಿನ ಪುಡಿ ಖಾರಕ್ಕೆ, ಉಪ್ಪು ರುಚಿಗೆ, ಜೀರಿಗೆ ಪುಡಿ 1/4 ಚಮಚ, ಎಣ್ಣೆ ಬೇಯಿಸಲು. 



ವಿಧಾನ: ಬೇರು ಹಲಸಿನ ಸಿಪ್ಪೆ ತೆಗೆದು ಸೀಳಿಕೊಂಡು ಮಧ್ಯದ ಗಟ್ಟಿ ಭಾಗವನ್ನು (ಮೂಗು) ತೆಗೆದುಕೊಳ್ಳಿ. ನಂತರ ಇದನ್ನು ತೆಳ್ಳಗೆ, ಉದ್ದುದ್ದ ಸ್ಲೈಸ್ ಮಾಡಿಕೊಂಡು ನೀರಿನಲ್ಲಿ ಹಾಕಿಡಿ. ಒಂದು ತಟ್ಟೆಯಲ್ಲಿ ರವೆ, ಮೆಣಸಿನ ಪುಡಿ, ಜೀರಾ ಪುಡಿ ಹಾಕಿ, ಪುಡಿ ಉಪ್ಪನ್ನು ಮತ್ತೊಮ್ಮೆ ಚೆನ್ನಾಗಿ ಕೈ ಅಲ್ಲಿ ನುರಿದು ಹಾಕಿ ಸರಿಯಾಗಿ ಕಲಸಿ. ಹಲಸಿನ ಕಾಯಿ ಸ್ಲೈಸ್ ಅನ್ನು ನೀರಿನಿಂದ ತೆಗೆದಿಟ್ಟುಕೊಳ್ಳಿ. (ರವೆಗೆ ಹಾಕುವ ಮುನ್ನ ನೀರು ಸ್ವಲ್ಪ ಆರಲಿ ಇಲ್ಲವಾದಲ್ಲಿ ರವೆ ಮುದ್ದೆಯಾಗುತ್ತದೆ). ಕಾವಲಿಯನ್ನು (ತವಾ) ಒಲೆಯ ಮೇಲಿಡಿ. ಬೇರು ಹಲಸಿನ ಸ್ಲೈಸ್ ಅನ್ನು ರವೆಯ ಮಿಶ್ರಣದಲ್ಲಿ ಅದ್ದಿ ಸರಿಯಾಗಿ ರವೆ ಹಿಡಿದುಕೊಂಡ ಮೇಲೆ ತವಾ ಮೇಲೆ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ ಸ್ವಲ್ಪ ನೀರು ಸಿಂಪಡಿಸಿ ಮುಚ್ಚಳ ಮುಚ್ಚಿ ಅರ್ಧ ನಿಮಿಷದಷ್ಟು ಕಾಲ ಹಾಗೆಯೇ ಬಿಡಿ (ಮೀಡಿಯಂ ಫ್ಲೇಮ್ ಇರಲಿ).  ನಂತರ ಅದನ್ನು ತಿರುವಿ ಹಾಕಿ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ. ಎರಡೂ ಕಡೆ ಚೆನ್ನಾಗಿ ರೋಸ್ಟ್ ಮಾಡಿದರೆ ಬಿಸಿ ಬಿಸಿ ಪೋಡಿ ಸವಿಯಲು ಸಿದ್ಧ. 



ಸಲಹೆ : ಇದೇ ರೀತಿ ಬಾಳೆಕಾಯಿ ಪೋಡಿ ಕೂಡ ಮಾಡಬಹುದು. ಬಾಳೆಕಾಯಿ ಸಿಪ್ಪೆ ತೆಗೆದು ಅರ್ಧ ಮಾಡಿಕೊಂಡು ಅದರಲ್ಲಿ ಸ್ಲೈಸ್ ಮಾಡಿ ಇದೇ ವಿಧಾನದಲ್ಲಿ ಟ್ರೈ ಮಾಡಿ... 


ಸುಮ್ಮನೆ ಒಂದು ಕಿವಿಮಾತು : ಹೊಸದಾಗಿ ಮನೆಗೆ ಹಚ್ಚಿದ ಪೇಯಿಂಟ್ ವಾಸನೆ ಬೇಗನೆ ಹೋಗುವಂತೆ ಮಾಡಲು ಬಟ್ಟಲಿನಲ್ಲಿ ಸ್ವಲ್ಪ ಉಪ್ಪು ಹಾಕಿ ಪ್ರತೀ ಮೂಲೆಯಲ್ಲೂ ಇಡಿ. 

ಕಾವ್ಯಾ :)

8 ಕಾಮೆಂಟ್‌ಗಳು:

  1. ಇದು ಅನ್ಯಾಯ...

    ಸುಖಾ ಸುಮ್ಮನೆ ಬಾಯಲ್ಲಿ ನೀರು ತರಿಸುವವರಿಗೆ ಧಿಕ್ಕಾರ....

    "ಇನ್ನೊಮ್ಮೆ ಮನೆಗೆ ಕರೆದು ನಮಗೂ ರುಚಿ ತೋರಿಸಲಿ" ಎಂದು ಶಾಪ ಕೊಡುವೆವು...

    ಪ್ರತ್ಯುತ್ತರಅಳಿಸಿ
  2. ವಿಧಾನ ಓದಿ .. ಚಿತ್ರ ನೋಡಿ ನಿಜಕ್ಕೂ ಬಾಯಲ್ಲಿ ನೀರೂರುತ್ತಿದೆ.. ಅವಕಾಶ ಸಿಕ್ಕಾಗ ಖಂಡಿತಾ ಟ್ರೈ ಮಾಡುವ ಮನಸ್ಸು ಇದೆ ..

    ಮತ್ತೆ ಪ್ರಕಾಶಣ್ಣ ನ ಜೊತೆ ನನ್ನದೂ ಒಂದು ಧಿಕ್ಕಾರವಿದೆ... :)

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸಂಧ್ಯಾ ಟ್ರೈ ಮಾಡಿ ಹೇಳಿ.. :) ಹಾ ಹಾ ಹಾ ವಿಧಾನ ಹೇಳಿಕೊತ್ತಿದ್ದಕ್ಕೆ ಜೈಕಾರಕ್ಕೆ ಬದಲು ಧಿಕ್ಕಾರ ಕೂಗಿದರೆ ಹೇಗೆ ಮೇಡಂ... ;) :P

      ಅಳಿಸಿ
  3. ನಿಮ್ಮ ಬ್ಲಾಗ್ ಚೆನ್ನಾಗಿದೆ
    ಆದರೆ ಅಡುಗೆಗಳನ್ನ ತಿಂಡಿ, ಗೊಜ್ಜು ಪಲ್ಯ....ಮುಂತಾದ ಹೆಸರಿಂದ ಲೇಬಲ್ ಮಾಡಿ
    ಅಥವಾ ಇನ್ಯಾವುದೇ ರೀತಿಯಲ್ಲಿ ವಿಭಾಗಿಸಿದರೆ ಓದುಗರಿಗೆ ರೆಸಿಪಿ ಹುಡುಕಲು ಸುಲಭವಾಗುತ್ತದೆ
    ಪೋಡಿ ಟ್ರೈ ಮಾಡಿ ಜೈ ಹೇಳ್ತೇನೆ..:)
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ