ಸೋಮವಾರ, ಜುಲೈ 22, 2013

ಬೇಸನ್ ಲಾಡು :

ಸಾಮಗ್ರಿ: ಗೋಧಿ ಹಿಟ್ಟು 1.5 ಕಪ್, ಕಡ್ಲೆ ಹಿಟ್ಟು 1 ಕಪ್, ತುಪ್ಪ 1 ಕಪ್, ಸಕ್ಕರೆ 2 ಕಪ್, ಕೊಬ್ಬರಿ ತುರಿ 1/2 ಕಪ್, ಒಣ ದ್ರಾಕ್ಷಿ 10-12, ಗೋಡಂಬಿ 8-10 (ಚೂರು ಮಾಡಿಕೊಳ್ಳಿ).   ವಿಧಾನ: ಸಕ್ಕರೆಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಕೊಬ್ಬರಿ ತುರಿಯನ್ನು ಬಾಣಲೆಗೆ ಹಾಕಿ ಸ್ವಲ್ಪವೇ ಹುರಿದುಕೊಂಡು ಮಿಕ್ಸಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ದಪ್ಪ ತಳದ ಬಾಣಲೆಗೆ ಗೋಧಿ ಹಿಟ್ಟು, ಕಡ್ಲೆ ಹಿಟ್ಟು ಮತ್ತು ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಮಿಶ್ರಣ ಮುದ್ದೆ ಮುದ್ದೆಯಾಗುತ್ತದೆ, ದ್ರಾಕ್ಷಿ ಮತ್ತು ಗೋಡಂಬಿ ಚೂರುಗಳನ್ನು ಹಾಕಿ, ಬಿಡದೇ ಕೈ ಆಡಿಸುತ್ತಿರಿ. ತಳದಲ್ಲಿ ಹಿಟ್ಟು ಸ್ವಲ್ಪ ಸ್ವಲ್ಪ ಕಂದು ಬಣ್ಣವಾಗಿ ಹಿಡಿಯಲು ಪ್ರಾರಂಭಿಸುತ್ತದೆ ಮತ್ತು ಕಮ್ಮನೆ ಪರಿಮಳ ಬರಲು ಶುರುವಾದರೆ ಹಿಟ್ಟು ಹುರಿದಿದೆ ಎಂದರ್ಥ. (ಸುಮಾರು 10 - 15 ನಿಮಿಷ ಬೇಕಾಗಬಹುದು). ಈಗ ಉರಿ ಆರಿಸಿ ಹಿಟ್ಟನ್ನು ಕೆಳಗಿಳಿಸಿ. ಇದಕ್ಕೆ ಪುಡಿ ಮಾಡಿಕೊಂಡ ಸಕ್ಕರೆ ಮತ್ತು ಕೊಬ್ಬರಿ ಹಾಕಿ ಚೆನ್ನಾಗಿ ಕಲಸಿ. ಮಿಶ್ರಣ ಸ್ವಲ್ಪ ಬಿಸಿಯಿರುವಾಗಲೇ ಲಡ್ಡು ಗಾತ್ರಕ್ಕೆ ಮಿಶ್ರಣ ತೆಗೆದುಕೊಂಡು ಕೈ ಅಲ್ಲಿ ಒತ್ತಿ ಒತ್ತಿ ಉಂಡೆ ಕಟ್ಟಿ. ರುಚಿಯಾದ ಬೇಸನ್ ಲಾಡು ಸವಿಯಲು ಸಿದ್ಧ. (ಸುಮಾರು 15-20 ಲಡ್ಡು ಆಗುತ್ತದೆ).  
ಸೂಚನೆ : ಸಿಹಿ ಸ್ವಲ್ಪ ಜಾಸ್ತಿ ಬೇಕಾದವರು ಇನ್ನು ಅರ್ಧ ಕಪ್ ಸಕ್ಕರೆ ಜಾಸ್ತಿ ಹಾಕಿಕೊಳ್ಳಬಹುದು. 


ಸುಮ್ನೆ ಟ್ರೈ ಮಾಡಿ : ದಪ್ಪ ಅವಲಕ್ಕಿಯನ್ನು ಬಿಸಿ ಅವಲಕ್ಕಿ ಒಗ್ಗರಣೆ ಮಾಡುವಾಗ, ಈರುಳ್ಳಿ ಹಾಕಿದರೆ ರುಚಿ ಹೆಚ್ಚು ಎಂಬುದು ನಿಮಗೆ ಗೊತ್ತಲ್ವಾ... ಈರುಳ್ಳಿ ಫ್ರೈ ಆದಮೇಲೆ ಅದಕ್ಕೆ ಸ್ವಲ್ಪ ರಸಂ ಪೌಡರ್ ಹಾಕಿ ಆಮೇಲೆ ನೆನಸಿದ ಅವಲಕ್ಕಿ ಹಾಕಿ ಹುರಿದು ನೋಡಿ......!! ರುಚಿ ಬೇರೆ ಥರವೂ, ಚೆನ್ನಾಗಿಯೂ ಇರುತ್ತದೆ ....  

4 ಕಾಮೆಂಟ್‌ಗಳು: