ಬುಧವಾರ, ಜುಲೈ 24, 2013

ಹಲಸಿನಕಾಯಿ ಖಾರದ ಪೋಳ್ಜಾ (ಪೋಳ್ದ್ಯ):ಬೇಕಾಗುವ ಸಾಮಾಗ್ರಿಗಳು: ಹಲಸಿನಕಾಯಿ ತೊಳೆ - 2೦, ಹಲಸಿನ ಬೀಜ -6-7,  ಹಸಿಮೆಣಸು (ಸೂಜಿ ಮೆಣಸು) ಖಾರ ಜಾಸ್ತಿ ಇರಬೇಕು – 7-8, ಕಾಯಿ ತುರಿ 3 -4 ಚಮಚ, ಬೆಳ್ಳುಳ್ಳಿ 10-12 ಎಸಳು, ಸಾಸಿವೆ 1 ಚಮಚ ರುಬ್ಬಲು ½ ಚಮಚ ಒಗ್ಗರಣೆಗೆ , ನಿ೦ಬೆಕಾಯಿ 2 , ಜೀರಿಗೆ ½ ಚಮಚ, ಕರಿಬೇವು.ಮಾಡುವ ವಿಧಾನ: ಮೊದಲು ಹಲಸಿನ ತೊಳೆಗಳನ್ನು ಚಿತ್ರದಲ್ಲಿ ತೊರಿಸಿದ೦ತೆ ಹೆಚ್ಚಿಕೊಳ್ಳಿ, ಬೀಜವನ್ನು ಒರಳಲ್ಲಿ (ಕಲ್ಲಲ್ಲಿ) ಜಜ್ಜಿ ಅದರ ಮೇಲಿನ ಸಿಪ್ಪೆಯನ್ನು ತೆಗೆಯಬೇಕು. ಹಲಸಿನ ತೊಳೆ & ಬೀಜವನ್ನು ಒ೦ದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೀರು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ. ಸಾಸಿವೆ, ತೆ೦ಗಿನ ತುರಿ, ಹಸಿಮೆಣಸು, ಇವೆಲ್ಲವನ್ನು ನುಣ್ಣಗೆ ರುಬ್ಬಿ ಬೇಯಿಸಿದ ಹಲಸಿನಕಾಯಿಗೆ ಹಾಕಿ ಸ್ವಲ್ಪ ನೀರು (ಬೇಕಾದಲ್ಲಿ) & ಲಿ೦ಬು ರಸ ಹಾಕಿ ಚೆನ್ನಾಗಿ ಕುದಿಸಿ (ಇದು ತು೦ಬ ನೀರಾಗು ಇರಬಾರದು ಗೊಜ್ಜಿನ ಹದದಲ್ಲಿ ಇರಬೇಕು) ಆಮೇಲೆ ಒಗ್ಗರೆಣೆ ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ನ೦ತರ ಸಾಸಿವೆ, ಜೀರಿಗೆ, ಕರಿಬೇವು & ಜಜ್ಜಿದ ಬೆಳ್ಳುಳ್ಳಿಯ ಒಗ್ಗರಣೆ ಕೊಡಿ. ಈಗ ಬಿಸಿ ಬಿಸಿ ಖಾರದ ಪೋಳ್ಜಾ  ರೆಡಿ.ಇದು ಅನ್ನದ ಜೊತೆ ಚೆನ್ನಾಗಿರುತ್ತದೆ.         
                       (ಚಿತ್ರದಲ್ಲಿ ತೋರಿಸಿದಷ್ಟು ಗಟ್ಟಿ ಇರಬಾರದು ಸ್ವಲ್ಪ ನೀರು ಸೇರಿಸಬೇಕು.)

ಅಡುಗೆ ಮನೆಗೊ೦ದು ಟಿಪ್ಸ್:ಲಿ೦ಬು ರಸ ನೆಲದ ಮೇಲೆ ಬಿದ್ದು ನೆಲ ಬೆಳ್ಳಗಾದಲ್ಲಿ ಒ೦ದೆರಡು ಹನಿ ಕೊಬ್ಬರಿ ಎಣ್ಣೆ ಹಾಕಿ ತಿಕ್ಕಿ ಆಗ ಬಿಳಿಯ ಬಣ್ಣ ಹೋಗಿ ಅದರ ಮೊದಲಿನ  ಬಣ್ಣ ಬರುತ್ತದೆ.

2 ಕಾಮೆಂಟ್‌ಗಳು:

  1. ಬರೆದಿಟ್ಟುಕೊಂಡಳು ನನ್ನ ಪತ್ನಿ. ಇಳಿಸುತ್ತಾಳಂತೆ ನಾಲೆ ದಮಯಂತಿಪಾಕ!
    http://badari-poems.blogspot.in    ಪ್ರತ್ಯುತ್ತರಅಳಿಸಿ
  2. ಹೊಸ ರುಚಿಯನ್ನು ಸವಿಯಲು ಎಲ್ಲ ರೀತಿಯಿ೦ದಲು ರೆಡಿಯಾಗಿರಿ ಸರ್ :-) ಆದರೆ ಈಗ ಹಲಸಿನ ಕಾಯಿ ಸಿಗುವುದು ಕಡಿಮೆ :-)

    ಪ್ರತ್ಯುತ್ತರಅಳಿಸಿ