ಸಾಮಗ್ರಿ: ಬಲೂನ್ ಬದನೆ 1 (ಇದ್ದುದರಲ್ಲೇ ಚಿಕ್ಕದು), ತೆಂಗಿನ ತುರಿ 1 ಕಪ್, ಮೊಸರು 1 ಕಪ್, ಈರುಳ್ಳಿ ಸಣ್ಣದು 1
ಒಗ್ಗರಣೆಗೆ: ಎಣ್ಣೆ, ಉದ್ದಿನ ಬೇಳೆ, ಎಳ್ಳು - ಚಿಟಿಕೆ, ಹಸಿಮೆಣಸಿನ ಕಾಯಿ 1
ವಿಧಾನ : ಬದನೇಕಾಯಿಗೆ ಎಣ್ಣೆ ಸವರಿಕೊಂಡು ಒಲೆಯ ಮೇಲಿಟ್ಟು ಚೆನ್ನಾಗಿ ಸುಡಬೇಕು. ಸಿಪ್ಪೆ ಪೂರ್ತಿ ಕಪ್ಪಗಾದರೆ ಒಳಗಡೆ ಬೇಯುತ್ತದೆ. ಹಾಗೆಯೇ ಸುತ್ತಲೂ ಬೇಯಿಸಿ. ತಣ್ಣಗಾದ ಮೇಲೆ ನೀರಿನಲ್ಲಿ ಕೈ ನೆನೆಸಿಕೊಳ್ಳುತ್ತಾ ಸಿಪ್ಪೆ ತೆಗೆಯಿರಿ. ಸೌಟಿನಿಂದ (ಕೆಳಗೆ ತೋರಿಸಿದಂತೆ) ಹೆಚ್ಚಿಕೊಳ್ಳಿ.
ತೆಂಗಿನ ತುರಿಯನ್ನು ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಹೆಚ್ಚಿದ ಬದನೇಕಾಯಿ ಹಾಕಿ, ಮೊಸರು, ಉಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ. ನಂತರ ಎಣ್ಣೆ, ಉದ್ದಿನ ಬೇಳೆ, ಎಳ್ಳು, ಹೆಚ್ಚಿದ ಹಸಿಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಿದರೆ ಬದನೇಕಾಯಿ ಮೊಸರು ಬಜ್ಜಿ ಅನ್ನದ ಜೊತೆ ಸವಿಯಲು ಸಿದ್ಧ.
ಸೂಚನೆ: ಬದನೇಕಾಯಿಯನ್ನು ಇಡಿಯಾಗಿಯೇ ಸುಡುವುದರಿಂದ ಸಿಪ್ಪೆ ತೆಗೆದ ನಂತರ ಒಮ್ಮೆ ಸೀಳಿ ಒಳಗಡೆ ಕೆಡುಕಿಲ್ಲವೆಂದು ಖಚಿತ ಪಡಿಸಿಕೊಂಡು ಹೆಚ್ಚಿ.
ಖಂಡಿತ ಮನೆಯಲಿ ಮಾಡಿ ಸವಿಯುತ್ತೇವೆ. :)
ಪ್ರತ್ಯುತ್ತರಅಳಿಸಿಸವಿದು ನೋಡಿ ಈ ರುಚಿಯಾ :)
ಅಳಿಸಿ