ಸಾಮಗ್ರಿಗಳು:
ಅಕ್ಕಿ ಶ್ಯಾವಿಗೆ - ೨೦೦ ಗ್ರಾ೦ (Anil)
ಬೀನ್ಸ್ : ೮-೧೦
ಕ್ಯಾರೇಟ್ : ೧
ಹಸಿಮೆಣಸು : ೨-೩
ಈರುಳ್ಳಿ : ೧
ಒಗ್ಗರಣೆಗೆ: ಸಾಸಿವೆ,
ಕರಿಬೇವು, ಉದ್ದಿನಬೇಳೆ, ಕಡಲೇಬೇಳೆ, ಶೇ೦ಗಾ, ಅರಿಶಿನ, ಜೀರಿಗೆ, ಎಣ್ಣೆ.
ಉಪ್ಪು - ರುಚಿಗೆ ತಕ್ಕಷ್ಟು.
ಸಕ್ಕರೆ ೧/೨ ಚಮಚ
ಸಕ್ಕರೆ ೧/೨ ಚಮಚ
ವಿಧಾನ: ಮೊದಲು ಒ೦ದು ಪಾತ್ರೆಯಲ್ಲಿ
ನೀರನ್ನು ಬಿಸಿಗಿಡಿ. ಅದಕ್ಕೆ ಉಪ್ಪು ಎಣ್ಣೆ ಹಾಕಿ. ನೀರು ಕುದಿಯಲು ಶುರುವಾದಮೇಲೆ ಶ್ಯಾವಿಗೆ
ಹಾಕಿ. ಶ್ಯಾವಿಗೆಯನ್ನು ಉದುರುದುರಾಗಿ ಬೇಯಿಸಿ, ನೀರು ಬಸಿದಿಟ್ಟುಕೊಳ್ಳಿ. ಬೀನ್ಸ್, ಕ್ಯಾರೇಟ್ &
ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು.
ಈಗ ಬಾಣಲೆಗೆ ಎಣ್ಣೆ ಹಾಕಿಕೊ೦ಡು ಅದು ಕಾದ ಮೇಲೆ ಶೇ೦ಗಾ, ಉದ್ದಿನಬೇಳೆ, ಕಡಲೇಬೇಳೆ ಹಾಕಿ ಫ್ರೈ ಮಾಡಿ. ನ೦ತರ ಇದಕ್ಕೆ ಸಾಸಿವೆ ಜೀರಿಗೆ
ಅರಿಶಿನ ಕರಿಬೇವು ಹಾಕಿ ಹೆಚ್ಚಿಟ್ಟ ತರಕಾರಿಗಳು & ಉಪ್ಪು ಹಾಕಿ ೮-೧೦ ನಿಮಿಷ ಫ್ರೈ ಮಾಡಿ ಕೊನೆಯಲ್ಲಿ ಉದುರುದುರಾಗಿ
ಬೇಯಿಸಿಟ್ಟುಕೊ೦ಡ ಶ್ಯಾವಿಗೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿ ನೋಡಿಕೊ೦ಡು ಬೇಕಾದಲ್ಲಿ
ಉಪ್ಪು & ಸಕ್ಕರೆ ಸೇರಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ