ಪಡ್ಡು ಹಿಟ್ಟಿಗೆ ಸಾಮಗ್ರಿಗಳು :
ದೋಸೆ ಅಕ್ಕಿ : 2 ಕಪ್,
ದಪ್ಪ ಅವಲಕ್ಕಿ : 1/4 ಕಪ್,
ಮಂಡಕ್ಕಿ (ಪುರಿ) :1/4 ಕಪ್,
ಮೆಂತ್ಯ : 1 ಚಮಚ
ಇತರ ಸಾಮಗ್ರಿಗಳು:
ಈರುಳ್ಳಿ : 2,
ಕರಿ ಬೇವು : 1 ಎಸಳು,
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು : 2 ಚಮಚ,
ಅಚ್ಚ ಮೆಣಸಿನ ಪುಡಿ : 1 ಚಮಚ,
ಸಕ್ಕರೆ : 1 ಚಮಚ,
ಉಪ್ಪು: ರುಚಿಗೆ
ವಿಧಾನ :
ಹಿಟ್ಟು ತಯಾರಿಸಲು ಪಟ್ಟಿ ಮಾಡಿರುವ ಸಾಮಗ್ರಿಗಳನ್ನು ಚೆನ್ನಾಗಿ ತೊಳೆದು 5-6 ಗಂಟೆಗಳ ಕಾಲ ನೆನೆಹಾಕಿ. ಮಂಡಕ್ಕಿಯನ್ನು ಒಂದು ಗಂಟೆ ನೆನೆಸಿದರೂ ಸಾಕು.(ಬೆಳಿಗ್ಗೆ ನೆನೆ ಹಾಕಿ ರಾತ್ರಿಗೆ ರುಬ್ಬಿ). ನಂತರ ಎಲ್ಲವನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ ತಟ್ಟೆ ಮುಚ್ಚಿ ರಾತ್ರಿ ಹಾಗೆಯೇ ಬಿಡಿ. ಬೆಳಿಗ್ಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ, ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ದೋಸೆ ಹಿಟ್ಟಿನ ಹದಕ್ಕೆ ಗಟ್ಟಿ ಇರಲಿ. ಪಡ್ಡು ಕಾವಲಿಯನ್ನು ಕಾಯಿಸಿ ಎಲ್ಲಾ ಕುಳಿಗಳಿಗೆ ಕಾಲು ಚಮಚದಷ್ಟು ಎಣ್ಣೆ ಬಿಟ್ಟು ಪಡ್ಡು ಹಿಟ್ಟನ್ನು ಮುಕ್ಕಾಲು ಕುಳಿ ತುಂಬುವಷ್ಟು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ.
ಪಡ್ಡು ಉಬ್ಬಿ ದೊಡ್ಡದಾಗುತ್ತದೆ. ನಂತರ ಒಂದು ತೆಳ್ಳಗಿನ ಚಮಚ ಅಥವಾ ಕಡ್ಡಿಯ ಸಹಾಯದಿಂದ ಅದನ್ನು ತಿರುವಿ ಹಾಕಿ ಬೇಯಿಸಿ ತೆಗೆಯಿರಿ. ಬಿಸಿ ಬಿಸಿ ಪಡ್ಡುಗಳನ್ನು ಚಟ್ನಿ ಜೊತೆ ಸವಿಯಿರಿ.
ಪಡ್ಡು ಉಬ್ಬಿ ದೊಡ್ಡದಾಗುತ್ತದೆ. ನಂತರ ಒಂದು ತೆಳ್ಳಗಿನ ಚಮಚ ಅಥವಾ ಕಡ್ಡಿಯ ಸಹಾಯದಿಂದ ಅದನ್ನು ತಿರುವಿ ಹಾಕಿ ಬೇಯಿಸಿ ತೆಗೆಯಿರಿ. ಬಿಸಿ ಬಿಸಿ ಪಡ್ಡುಗಳನ್ನು ಚಟ್ನಿ ಜೊತೆ ಸವಿಯಿರಿ.
ಚಟ್ನಿಗೆ ಸಾಮಗ್ರಿಗಳು :
ತೆಂಗಿನ ತುರಿ : 1/2 ಕಪ್,
ಹುರಿಗಡಲೆ : 2 ಚಮಚ,
ಹಸಿಮೆಣಸಿನ ಕಾಯಿ : 3-4,
ಎಳ್ಳು : 1/4 ಚಮಚ,
ಎಣ್ಣೆ : 1/4 ಚಮಚ,
ಕೊತ್ತಂಬರಿ ಸೊಪ್ಪು : ಸ್ವಲ್ಪ,
ಶುಂಟಿ : ಸಣ್ಣ ಚೂರು,
ಉಪ್ಪು : ರುಚಿಗೆ
ವಿಧಾನ:
ಹಸಿಮೆಣಸಿನ ಕಾಯಿ ಮತ್ತು ಎಳ್ಳನ್ನು ಎಣ್ಣೆಯಲ್ಲಿ ಹುರಿದು, ಉಳಿದ ಸಾಮಗ್ರಿಗಳನ್ನು ಸೇರಿಸಿ ರುಬ್ಬಿದರೆ ಚಟ್ನಿ ಸಿಧ್ಧ.
ಸೂಚನೆಗಳು :
1) ಪಡ್ಡು ಹಿಟ್ಟಿಗೆ ಮೆಣಸಿನ ಪುಡಿ ಬದಲು ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಕಾಯಿ ಹಾಕಬಹುದು. ತಿನ್ನುವಾಗ ಬಾಯಿಗೆ ಸಿಕ್ಕು ಖಾರವೆನಿಸುವುದರಿಂದ ನಾನು ಹಾಕುವುದಿಲ್ಲ.
2) ಪಡ್ಡು ಹಿಟ್ಟಿಗೆ ಇಷ್ಟ ಪಡುವವರು ಸಾಸಿವೆ ಒಗ್ಗರಣೆ ಮಾಡಿ ಹಾಕಿಕೊಳ್ಳಬಹುದು.
3) ಚಟ್ನಿಗೂ ಬೇಕಿದ್ದರೆ ಸಾಸಿವೆ, ಕರಿಬೇವು, ಇಂಗಿನ ಒಗ್ಗರಣೆ ಮಾಡಿಕೊಳ್ಳಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ