ಬುಧವಾರ, ಡಿಸೆಂಬರ್ 16, 2015

ಗೋಧಿ ಹಿಟ್ಟಿನ ದೋಸೆ :

ಸಾಮಗ್ರಿಗಳು:
ಗೋಧಿ ಹಿಟ್ಟು : 1 ಕಪ್,
ಅಕ್ಕಿ ಹಿಟ್ಟು : 1 ಟೇಬಲ್ ಚಮಚ,
ಬೆಲ್ಲ : 3-4 ಚಮಚ,
ತೆಂಗಿನ ತುರಿ : 2 ಚಮಚ,
ಉಪ್ಪು : ರುಚಿಗೆ 

ವಿಧಾನ :
ಮಿಕ್ಸಿಗೆ ಗೋಧಿ ಹಿಟ್ಟು, ಅಕ್ಕಿ ಹಿಟ್ಟು, ನೀರು ಹಾಕಿ ಗಂಟಿಲ್ಲದೇ ರುಬ್ಬಿ. ಅಥವಾ ಪಾತ್ರೆಗೆ ಹಾಕಿ ಸೌಟಿನಲ್ಲೇ ಗಂಟಿಲ್ಲದಂತೆ ಕಲಕಬಹುದು.
ಬೇರೆ ದೋಸೆ ಹಿಟ್ಟಿನಕಿಂತ ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಿ. ಇದಕ್ಕೆ ಬೆಲ್ಲ, ಉಪ್ಪು, ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಕಿ. ನಂತರ ಕಾದ ತವಾಗೆ ಎಣ್ಣೆ ಸವರಿ ತೆಳ್ಳಗೆ ದೋಸೆ ಮಾಡಿ ಎರಡೂ  ಕಡೆ ಬೇಯಿಸಿ.  


ಚಿತ್ರದಲ್ಲಿ ಇರುವುದಕ್ಕಿಂತ ಸ್ವಲ್ಪ ದಪ್ಪಗೆ ಕೂಡ ದೋಸೆ ಮಾಡಬಹುದು. ಬಿಸಿ ಬಿಸಿ, ಸಿಹಿ ದೋಸೆಯನ್ನು ತುಪ್ಪ ಮತ್ತು ಚಟ್ನಿಪುಡಿ ಜೊತೆ ಸರ್ವ್ ಮಾಡಿ. 2 ಕಾಮೆಂಟ್‌ಗಳು: