ಬುಧವಾರ, ಫೆಬ್ರವರಿ 27, 2013

ಹಲಸು ಹಣ್ಣಿನ ಕಡುಬು:




ಬೇಕಾಗುವ ಸಾಮಾಗ್ರಿಗಳು: ಹಲಸಿನ ಹಣ್ಣಿನ ರಸ (ಗುಳ)- 2 ಕಪ್, ಅಕ್ಕಿ ಕಡಿ - 1.5 ಕಪ್, ತೆ೦ಗಿನಕಾಯಿತುರಿ - 2 ಚಮಚ, ಬೆಲ್ಲ 1/2 ಕಪ್ (ಸಿಹಿ ಆಗುವಷ್ಟು), ಉಪ್ಪು ಒಂದು ಚಿಟಿಕೆ (ಸೌಳು ಹೋಗಲು), ಯಾಲಕ್ಕಿ ಪುಡಿ - ಒಂದು ಚಿಟಿಕೆ(ಸುವಾಸನೆಗೆ).
ಮಾಡುವ ವಿಧಾನ:  ಮೇಲೆ ಹೇಳಿದ ಪದಾರ್ಥಗಳನ್ನು ಮಿಶ್ರಣ ಮಾಡಿ (ನೀರು ಹಾಕಬಾರದು), ಇಡ್ಲಿ ತಟ್ಟೆಗೆ ಸಲ್ಪ ಎಣ್ಣೆ ಅಥವಾತುಪ್ಪ ಸವರಿ ಅದಕ್ಕೆ ಈ ಮಿಶ್ರಣವನ್ನು ಹಾಕಿ ಇಡ್ಲಿ ಮಾಡುವ ಪಾತ್ರೆಯಲ್ಲಿ ಇಟ್ಟು 45 ನಿಮಿಷ ಬೇಯಿಸಿದರೆ ಬಿಸಿ ಬಿಸಿ ಹಲಸಿನ ಹಣ್ಣಿನ ಕಡುಬು ರೆಡಿ. ಇದಕ್ಕೆ ತುಪ್ಪ ಹಾಕಿಕೊ೦ಡು ತಿ೦ದರೆ ರುಚಿ ಹೆಚ್ಚು.

ವಿ.ಸೂ: ಒ೦ದು ಮುಷ್ಟಿ ಮಿಶ್ರಣ ತೆಗೆದುಕೊ೦ಡಾಗ ಅಕ್ಕಿ ಕಡಿ ಕೈಗೆ ಸಿಗುವ೦ತಿರಬೇಕು 

1 ಕಾಮೆಂಟ್‌:

  1. ಅಕ್ಕಿ ಕಡಿ ಮಾಡುವ ವಿಧಾನ: ಮೊದಲು ಅಕ್ಕಿಯನ್ನು ತೊಳೆದು ನೀರು ಬಸಿಯಿರಿ. ಇದನ್ನು ಒಣಗಿದ ಕಾಟನ್ ಬಟ್ಟೆಯ ಮೇಲೆ ಹರಗಿ 1-2 ಗಂಟೆ ಇಡಿ. ನಂತರ ಇದನ್ನು ಮಿಕ್ಸರ್ ಗೆ ಹಾಕಿ ಪುಡಿ ಮಾಡಿಕೊಂಡು ದೊಡ್ಡ ರವೆ ತೆಗೆಯುವ ಜರಡಿಯಲ್ಲಿ ಹಾಕಿ ದೊಡ್ಡ ಕಡಿ ತೆಗೆದು ಉಪಯೋಗಿಸಿ. (2-3 ರೌಂಡ್ ಮಿಕ್ಸರ್ ತಿರುಗಿಸಿದರೆ ಸಾಕು).... :)

    ಪ್ರತ್ಯುತ್ತರಅಳಿಸಿ