ಬೇಕಾಗುವ ಸಾಮಾಗ್ರಿಗಳು:
ಕನ್ನೆಕುಡಿ (ಸೊರ್ಲೆಕುಡಿ)- 40-50 ಎಲೆಗಳು
ಮೆಣಸಿನ ಕಾಳು (ಬೋಳ್ಕಾಳು) - 10-12
ಜೀರಿಗೆ - 1/4 ಚಮಚ
ತೆ೦ಗಿನ ತುರಿ - 1 ಬಟ್ಟಲು
ಹಸಿ ಮೆಣಸಿನ ಕಾಯಿ - 2 (ಸ್ವಲ್ಪ ಖಾರ ಇದ್ದರೆ ಒಳ್ಳೆಯದು)
ಒಗ್ಗರಣೆಗೆ: ಎಣ್ಣೆ, ಬೆಳ್ಳುಳ್ಳಿ 2-3 ಎಸಳು, 1 ಒಣಮೆಣಸು, ಸ್ವಲ್ಪ ಜೀರಿಗೆ ಮತ್ತು ಸಾಸಿವೆ.
ಮಾಡುವ ವಿಧಾನ :
ಮೊದಲು ಕನ್ನೆಕುಡಿ,ಹಸಿ ಮೆಣಸಿನ ಕಾಯಿ,ಮೆಣಸಿನ ಕಾಳು,ಜೀರಿಗೆ ಎಲ್ಲವನ್ನು ಸ್ವಲ್ಪ ಎಣ್ಣೆ ಹಾಕಿ ಹುರಿಯಬೇಕು (ಹಸಿ ವಾಸನೆ ಹೋಗುವಹಾಗೆ) ಹುರಿದ ಮಿಶ್ರಣಕ್ಕೆ ಕಾಯಿತುರಿ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಉಪ್ಪು, ಹಾಕಿ ಕುದಿಸಿ. ಅದು ಕುದಿಯುತ್ತಿರುವಾಗಲೇ ಸ್ವಲ್ಪ ಎಣ್ಣೆಗೆ ಜೀರಿಗೆ, ಸಾಸಿವೆ, ಜಜ್ಜಿದ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಕೊಡಿ.
ಇದು ಮಳೆಗಾಲದಲ್ಲಿ ಅನ್ನದ ಜೊತೆ ತಿನ್ನಲು ಬಲು ರುಚಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ