ಮಂಗಳವಾರ, ಏಪ್ರಿಲ್ 23, 2013

ಹಲಸಿನ ಕಾಯಿ ಪಲ್ಯ








ಬೇಕಾಗುವ ಸಾಮಾಗ್ರಿಗಳು: ಎಳೆಯ ಹಲಸಿನಕಾಯಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ್ದು :1 ಕಪ್, ಈರುಳ್ಳಿ -1, ಉಪ್ಪು ರುಚಿಗೆ, ಮಸಾಲೆಗೆ:ಧನಿಯ-2 ಚಮಚ, ಜೀರಿಗೆ 1/2 ಚಮಚ, ಸಾಸಿವೆ & ಮೆ೦ತೆ ಒ೦ದು ಚಿಟಿಕೆ , ಒಣ ಮೆಣಸು (ಬ್ಯಾಡಗಿ ಮೆಣಸು)-5-6 (ನಿಮ್ಮ ಖಾರಕ್ಕೆ ಅನುಗುಣವಾಗಿ), ಇ೦ಗು, ಕಾಯಿತುರಿ, ಹುಣಸೆಹಣ್ಣು -ಹುಳಿಗೆ
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು.

ಮಾಡುವ ವಿಧಾನ: ಚಿಕ್ಕದಾಗಿ ಹೆಚ್ಚಿದ ಹಲಸಿನ ಕಾಯಿಯನ್ನು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ ನೀರು ಬಸಿದುಕೊಳ್ಳಿ, ಮೇಲೆ ಹೇಳಿದ ಮಸಾಲೆಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಒ೦ದು ಬಾಣಲೆಗೆ ಎಣ್ಣೆ, ಕರಿಬೇವು, ಸಾಸಿವೆ ಹಾಕಿ ಅದು ಚಿಟಪಟಿ ಸಿಡಿದ ನ೦ತರ ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ 3 ನಿಮಿಷ ಫ್ರೈ ಮಾಡಿ ಅದಕ್ಕೆ ಬೇಯಿಸಿಟ್ಟ ಹಲಸಿನ ಕಾಯಿ ರುಬ್ಬಿದ ಮಸಾಲೆಯನ್ನು ಹಾಕಿ 10-15 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ.

ಇದು ಅನ್ನ ಮತ್ತು ಚಪಾತಿ ಜೊತೆ ಚೆನ್ನಾಗಿರುತ್ತದೆ.



(ಈ ಸಾ೦ಬಾರದ ಬದಲು, ಹಸಿ ಮೆಣಸು, ಬೆಳ್ಳುಳ್ಳಿ ಹಾಕಿ ಕೂಡ ಮಾಡಬಹುದು)

2 ಕಾಮೆಂಟ್‌ಗಳು: