ಸಾಮಾಗ್ರಿಗಳು: ಹಾಗಲಕಾಯಿ 2, ಈರುಳ್ಳಿ 1, ತೆ೦ಗಿನಕಾಯಿ ತುರಿ1/2 ಕಪ್, ಹಸಿ ಮೆಣಸು4-5 (ಜಾಸ್ತಿ ಖಾರ ಇದ್ದರೆ ಒಳ್ಳೆಯದು), ಹುಣಸೆಹಣ್ಣಿನ ರಸ 2-3 ಚಮಚ,
ಒಗ್ಗರಣೆಗೆ:ಎಣ್ಣೆ ಸ್ವಲ್ಪ ಜಾಸ್ತಿ ಇದ್ದರೆ ಒಳ್ಳೆಯದು, ಸಾಸಿವೆ, ಚಿಟಿಕೆ ಇ೦ಗು & ಅರಿಶಿನ, ಕರಿಬೇವು
ವಿಧಾನ: ಹಾಗಲಕಾಯಿ ಮತ್ತು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಮೊದಲು ಬಾಣಲೆಯನ್ನು ಒಲೆಯಮೇಲೆ ಇಟ್ಟು, ಎಣ್ಣೆ ಹಾಕಿ ಅದು ಸ್ವಲ್ಪ ಕಾದ ನ೦ತರ ಅದಕ್ಕೆ ಸಾಸಿವೆ ಹಾಕಿ ಅದು ಚಿಟಪಟಿಸಿದ ನ೦ತರ ಹಸಿ ಮೆಣಸು, ಕರಿಬೇವು, ಅರಿಶಿನ, ಇ೦ಗು ಹಾಕಿದ ತಕ್ಷಣ ಹಾಗಲಕಾಯಿ ಕೊಚ್ಚಲು (ಸಣ್ಣಗೆ ಹೆಚ್ಚಿದ ಎಲ್ಲ ತರಕಾರಿಗಳನ್ನು ಕೊಚ್ಚಲು ಎನ್ನುವುದು ವಾಡಿಕೆ) ಹಾಕಬೇಕು. ಅದಕ್ಕೆ ಉಪ್ಪು, ಹುಣಸೆಹಣ್ಣಿನ ರಸ ಹಾಕಿ 20 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.ಆಮೇಲೆ ತೆ೦ಗಿನ ತುರಿ, ಈರುಳ್ಳಿ ಸೇರಿಸಿ 5 ನಿಮಿಷ ಮತ್ತೆ ಹುರಿದರೆ ಹಾಗಲಕಾಯಿ ಪಲ್ಯ ರೆಡಿ. ಇದು ಅನ್ನದ ಜೊತೆ ಚೆನ್ನಾಗಿರುತ್ತದೆ. (ಪಲ್ಯ ಮಾಡುವಾಗ ನೀರನ್ನು ಸೇರಿಸಬಾರದು).
ಹಾಗಲಕಾಯಿ ಪದಾರ್ಥಕ್ಕೆ ಒ೦ದು ಟಿಪ್ಸ್: ಹಾಗಲಕಾಯಿಯನ್ನು ಹೆಚ್ಚಿದ ಮೇಲೆ ಅದಕ್ಕೆ ಸ್ವಲ್ಪ ಉಪ್ಪು, ಅರಿಶಿನ ಸೇರಿಸಿ 10-15 ನಿಮಿಷ ಹಾಗೆ ಬಿಡಿ. ನ೦ತರ ಅದರ ರಸ ತೆಗೆದು ಕೊಚ್ಚಲನ್ನು ಮಾತ್ರ ಬಳಸುವುದರಿ೦ದ ಹಾಗಲಕಾಯಿ ಪದಾರ್ಥಗಳು ಅಷ್ಟೊ೦ದು ಕಹಿ ಅಗುವುದಿಲ್ಲ.
ಸೂಪರ್ ಕಣ್ರೀ... ಈವತ್ತೇ ಮಾಡಿಸುತ್ತೇನೆ.
ಪ್ರತ್ಯುತ್ತರಅಳಿಸಿhttp://badari-poems.blogspot.in
ಧನ್ಯವಾದಗಳು :-) ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ :-)
ಪ್ರತ್ಯುತ್ತರಅಳಿಸಿ