ಇದು ತು೦ಬಾ ಸರಳ ವಿಧಾನ. ಸ್ವಲ್ಪ ಗಡಿಬಿಡಿಯಲ್ಲಿ ಇರುವಾಗ ಕಡಿಮೆ ಸಮಯದಲ್ಲಿ ಸುಲಭವಾಗಿ, ಕಡಿಮೆ ಪದಾರ್ಥಗಳನ್ನು ಬಳಸಿ ಮಾಡಬಹುದು. ಕ್ಯಾರೆಟ್ ಹೆಸರು ಕಾಳು ಆರೋಗ್ಯಕ್ಕೆ ಕೂಡ ಒಳ್ಳೆಯದು.
ಬೇಕಾಗುವ ಸಾಮಾಗ್ರಿಗಳು: ಕಾರೆಟ್ ದೊಡ್ಡ ಗಾತ್ರದ್ದು 1, ಹೆಸರು ಕಾಳು ½ ಚಿಕ್ಕ ಕಪ್, ಹಸಿ ಮೆಣಸು 2-3, ಕಾಳುಮೆಣಸಿನ ಪುಡಿ 1 ಚಮಚ, ಲಿ೦ಬು ರಸ, 1 ಲೋಟ ಅಕ್ಕಿ.
ಮಾಡುವ ವಿಧಾನ: ಒ೦ದು ಲೋಟ ಅಕ್ಕಿಯ ಅನ್ನ ಮಾಡಿ ಬದಿಗೆ ಇರಿಸಿ, ಹೆಸರುಕಾಳನ್ನು ೪-೫ ಗ೦ಟೆ ಮೊದಲು ನೀರಲ್ಲಿ ನೆನೆಸಿಡಬೇಕು.ನೆನೆಸಿದ ಹೆಸರುಕಾಳನ್ನು ಪಾತ್ರೆಯಲ್ಲಿ
ಹಾಕಿ ಕುಕ್ಕರ್ ನಲ್ಲಿ ಇಟ್ಟು ಒ೦ದು ವಿಷಲ್ ಕೂಗಿಸಿ ಉರಿಯನ್ನು ಆರಿಸಿ. (ಹೆಸರುಕಾಳು ಜಾಸ್ತಿ ಬೆ೦ದರೆ
ರುಚಿ ಕಳೆದುಕೊಳ್ಳುತ್ತದೆ) ಒ೦ದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಸ್ವಲ್ಪ ಬಿಸಿ ಅದ ಮೇಲೆ ಸಾಸಿವೆ
ಕರಿಬೇವು, ಹಸಿಮೆಣಸು ಹಾಕಿ ಅದು ಚಿಟಪಟಿಸಿದ ನ೦ತರ ಅದಕ್ಕೆ ತುರಿದ ಕ್ಯಾರೆಟ್ ಜೊತೆ ಸ್ವಲ್ಪ ಉಪ್ಪು
ಹಾಕಿ ಹುರಿಯಿರಿ, ೭೦% ಬೆ೦ದ ನ೦ತರ ಅದಕ್ಕೆ ಬೇಯಿಸಿದ ಹೆಸರುಕಾಳನ್ನು ಹಾಕಿ
ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ. ಉರಿಯನ್ನು ಆರಿಸಿ ಅನ್ನ ಹಾಕಿ ಕಲೆಸಿ. ರುಚಿ
ನೋಡಿಕೊ೦ಡು ಉಪ್ಪು & ಲಿ೦ಬು ರಸ ಸೇರಿಸಿ.
ನಿಮ್ಮ ಅಡುಗೆಯ ಉಪಯೋಗಕ್ಕಾಗಿ: ಪಲ್ಯ ಬೇಯಿಸುವಾಗ ನೀರು ಹಾಕಿ ಹಾಗೆ ಬಟ್ಟಲನ್ನು ಮುಚ್ಚಿ
ಇಟ್ಟು, ಸ್ವಲ್ಪ ಹೊತ್ತು ಅದನ್ನು ತೊಳೆಸದೆ ಇದ್ದರೆ ತರಕಾರಿ ತಳ
ಹಿಡಿಯುತ್ತದೆ, ಅದಕ್ಕೆ ಬಟ್ಟಲನ್ನು ಮುಚ್ಚಿ ಅದರ ಮೇಲೆ ಸ್ವಲ್ಪ ನೀರು ಹಾಕಿ
ಇಟ್ಟರೆ ಪಲ್ಯ ತಳ ಹಿಡಿಯದೆ ಚೆನ್ನಾಗಿ ಬೇಯುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ