ಬೇಕಾಗುವ ಸಾಮಗ್ರಿಗಳು : ಬೆಂಡೆ ಕಾಯಿ
15 - 20 , ಎಣ್ಣೆ
- 6 ಚಮಚ,
ಜೀರಿಗೆ
- 1 ಚಮಚ,
ಕೊತ್ತಂಬರಿ -3 ಚಮಚ, ಅಚ್ಚ ಮೆಣಸಿನ ಪುಡಿ - 1 ಚಮಚ, ತೆಂಗಿನ
ತುರಿ
- 1/2 ಕಪ್,
ಹಸಿ ಮೆಣಸಿನ ಕಾಯಿ 2
-3, ಬೆಳ್ಳುಳ್ಳಿ - 5 ಎಸಳು, ಶುಂಟಿ ಅರ್ಧ ಇಂಚು, ಕರಿಬೇವು 6-7 ಎಲೆಗಳು, ಬೆಲ್ಲ ಸ್ವಲ್ಪ (1-2 ಚಮಚ), ವಾಟೆ ಪುಡಿ (
or amchoor powder) ಅಥವಾ ನಿಂಬೆ ರಸ - 1 ಚಮಚ, ಅರಿಶಿನ ಪುಡಿ- 3-4 ಚಿಟಿಕೆ.
ಮಾಡುವ ವಿಧಾನ: ಬೆಂಡೆಕಾಯಿಯನ್ನು ತೊಳೆದು ನೀರು ಒರೆಸಿಕೊಂಡು ಸಿಗಿದು ಅರ್ಧ ಇಂಚು ಉದ್ದಕ್ಕೆ ಹೆಚ್ಚಿಕೊಳ್ಳಿ. ಚಿಕ್ಕ ಒಗ್ಗರಣೆ ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಕಾದ ನಂತರ ಜೀರಿಗೆ , ಕೊತ್ತಂಬರಿ ಹಾಗೂ ಕರಿಬೇವು ಹಾಕಿ ಹುರಿದುಕೊಳ್ಳಿ. ಮಿಕ್ಸರ್ ಗೆ ಅಚ್ಚ ಮೆಣಸಿನ ಪುಡಿ, ಶುಂಟಿ, ಬೆಳ್ಳುಳ್ಳಿ, ಹಸಿ ಮೆಣಸಿನ
ಕಾಯಿ ,
ತೆಂಗಿನ ತುರಿ, ಹುರಿದುಕೊಂಡ ಮಿಶ್ರಣ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬಾಣೆಲೆಗೆ 4 ಚಮಚ ಎಣ್ಣೆ ಹಾಕಿ , ಕಾದ ನಂತರ ಹೆಚ್ಚಿದ ಬೆಂಡೆ ಕಾಯಿ, ಉಪ್ಪು, ವಾಟೆ
ಪುಡಿ ಅಥವಾ ಲಿಂಬೆ ರಸ ಹಾಕಿ ಲೋಳೆ ಬಿಡುವ ತನಕ ಚೆನ್ನಾಗಿ ಹುರಿಯಿರಿ. ನಂತರ ಅರಿಶಿನ ಪುಡಿ, ರುಬ್ಬಿದ ಮಿಶ್ರಣ,
ಉಪ್ಪು,
ಸ್ವಲ್ಪ ಬೆಲ್ಲ ಹಾಗೂ ನೀರು ಹಾಕಿ ಕುದಿಸಿ
(ಗಟ್ಟಿ ಸಾಂಬಾರ್ ಹದಕ್ಕೆ ನೀರು ಹಾಕಿದರೆ ಸಾಕು). ಬಿಸಿ ಬಿಸಿ ಅನ್ನದ ಜೊತೆ ಬೆಂಡೆ ಮಸಾಲಾ
ಸವಿದು ನೋಡಿ. ಚಪಾತಿ / ರೋಟಿ ಜೊತೆ ಕೂಡ ಚೆನ್ನಾಗಿರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ