ಸಾಮಗ್ರಿಗಳು :
ತೆಂಗಿನ ಕಾಯಿ : 2
ಸಕ್ಕರೆ : 1/2 ಕಿ ಗ್ರಾಂ
ಏಲಕ್ಕಿ ಪುಡಿ : 1/4 ಟೀ ಚಮಚ
ಉಪ್ಪು : 2 ಚಿಟಿಕೆ
ತುಪ್ಪ : 3-4 ಟೇಬಲ್ ಚಮಚ
ವಿಧಾನ :
ತೆಂಗಿನ ಕಾಯಿ ಒಡೆದು ತುರಿದುಕೊಂಡು ನೀರು ಹಾಕದೇ ತರಿ ತರಿಯಾಗಿ ರುಬ್ಬಿಕೊಳ್ಳಿ. ದಪ್ಪ ತಳದ ಪಾತ್ರೆ ಅಥವಾ ಬಾಣಲೆಗೆ ರುಬ್ಬಿದ ತೆಂಗಿನ ಕಾಯಿ, ಸಕ್ಕರೆ, ಏಲಕ್ಕಿ ಪುಡಿ, ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಕಲಕುತ್ತಿರಿ. ಸಕ್ಕರೆ ಕರಗಿದ ಮೇಲೆ 2-3 ಚಮಚ ತುಪ್ಪ ಹಾಕಿ ಸಣ್ಣ ಉರಿಯಲ್ಲೇ ಕಲಕುವುದನ್ನು ಮುಂದುವರೆಸಿ. ಬೇಗ ತಳ ಹಿಡಿಯುವುದರಿಂದ ಕೈ ಬಿಡದೇ ಕಲಕುತ್ತಲೇ ಇರಬೇಕು. ಸುಮಾರು ಅರ್ಧ - ಮುಕ್ಕಾಲು ಘಂಟೆಯ ನಂತರ ಮಿಶ್ರಣ ಗಟ್ಟಿಯಾಗುತ್ತದೆ. ಸೌಟಿಗೆ ಅಂಟಿಕೊಳ್ಳದೆ ಪೂರ್ತಿಯಾಗಿ ಬಿಟ್ಟುಕೊಳ್ಳುತ್ತದೆ.
ತಕ್ಷಣ ಒಂದು ತಟ್ಟೆ (ಪ್ಲೇಟ್) ಗೆ ತುಪ್ಪ ಸವರಿಕೊಂಡು ಬಿಸಿ ಮಿಶ್ರಣವನ್ನು ತಟ್ಟೆಗೆ ಹಾಕಿ ಸಮನಾಗಿ ಹರವಿಕೊಂಡು ಬಿಸಿ ಇರುವಾಗಲೇ ನಿಮಗೆ ಬೇಕಾದ ಆಕಾರ, ಅಳತೆಗೆ ಕತ್ತರಿಸಿ.
ತಣ್ಣಗಾದ ಮೇಲೆ ತಟ್ಟೆಯಿಂದ ಬಿಡಿಸಿ ಸರ್ವ್ ಮಾಡಿ.
ಮನೆ ಮದ್ದು : ಹೊಟ್ಟೆ ಕೆಟ್ಟು ಹಸಿವಾಗುತ್ತಿಲ್ಲವಾದಲ್ಲಿ ಒಂದು ಕಪ್ Black Tea ಗೆ ಒಂದು ಟೀ ಚಮಚ ತುಪ್ಪ ಹಾಕಿಕೊಂಡು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಿರಿ ಮತ್ತು ಆಹಾರವನ್ನೂ ಅತಿಯಾಗಿ ಸೇವಿಸಬೇಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ