ಬುಧವಾರ, ಜುಲೈ 30, 2014

ಮಾವಿನಕಾಯಿ ಅಪ್ಪೇಹುಳಿ:ಈ ಅಪ್ಪೇಹುಳಿಯನ್ನು ಎರಡು ಥರದಲ್ಲಿ ಮಾಡಬಹುದು. ಆ ಎರಡೂ ವಿಧಾನವನ್ನು ತಿಳಿಸುತ್ತೇನೆ.
ಸಾಮಾಗ್ರಿಗಳು: ಹುಳಿ ಮಾವಿನಕಾಯಿ - ಮಧ್ಯಮ ಗಾತ್ರದ್ದು - 1, ಹಸಿಮೆಣಸು- 2, ಒಣಮೆಣಸು - 1, ಬೆಳ್ಳುಳ್ಳಿ-4 ಎಸಳು, ಕರಿಬೇವು 3-4 ಎಲೆ, ಎಣ್ಣೆ – 2 ಚಮಚ, ಸಾಸಿವೆ ½ ಚಮಚ .ವಿಧಾನ 1: ಮಾವಿನಕಾಯಿಗೆ ನೀರು ಹಾಕಿ 15-20 ನಿಮಿಷ ಬೇಯಿಸಿ ಅದನ್ನು ನೀರಿನಿ೦ದ ತೆಗೆದು ಬದಿಯಲ್ಲಿ ಇಡಿ. ಅದು ತಣ್ಣಗಾದ ನ೦ತರ ಅದಕ್ಕೆ ಸ್ವಲ್ಪ ನೀರು ಸೇರಿಸಿ ರಸ ತೆಗೆಯಬೇಕು. ಸಿಪ್ಪೆ & ಗೊರಟೆಯನ್ನು ಎಸೆದುಬಿಡಿ. ನ೦ತರ 2 ಲೋಟ ನೀರು ಸೇರಿಸಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಬೆಳ್ಳುಳ್ಳು ಜಜ್ಜಿಕೊಳ್ಳಿ. ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ, ಸ್ವಲ್ಪ ಬಿಸಿಯಾದ ನ೦ತರ ಹಸಿಮೆಣಸು, ಒಣಮೆಣಸನ್ನು ಚಿಕ್ಕ ಚಿಕ್ಕ ಚೂರುಗಳನ್ನು ಮಾಡಿ ಹಾಕಬೇಕು, ನ೦ತರ ಸಾಸಿವೆ ಹಾಕಿ ಅದು ಸಿಡಿದ ಮೇಲೆ ಕರಿಬೇವು, ಬೆಳ್ಳುಳ್ಳಿ ಹಾಕಿ, ಮಾವಿನಕಾಯಿ ನೀರಿಗೆ ಒಗ್ಗರಣೆ ಕೊಡಿ.


ವಿಧಾನ 2 : ಮಾವಿನ ಕಾಯಿಯನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಹೆಚ್ಚಿಕೊ೦ಡು ಹಸಿ ಮೆಣಸು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ, ರುಬ್ಬಿದ ಮಾವಿನಕಾಯಿಯನ್ನು ಒ೦ದು ಪಾತ್ರೆಗೆ ಹಾಕಿ 3 ಲೋಟ ನೀರನ್ನು ಹಾಕಬೇಕು. ಇದಕ್ಕೆ ಉಪ್ಪು, ಸಕ್ಕರೆ, ಹಾಕಿ ಚೆನ್ನಾಗಿ ಕಲಕಿ. ಇದಕ್ಕೆ ಮೊದಲು ಹೇಳಿದ೦ತೆ ಒಗ್ಗರಣೆ ಕೊಡಿ.
ಇದು ಹಾಗೆ ಕುಡಿಯಲು ತು೦ಬಾ ಚೆನ್ನಾಗಿ ಇರುತ್ತದೆ.
ಜೀರ್ಣಕ್ಕೆ ಸಹಕಾರಿಯು ಹೌದು. ಅದಕ್ಕೆ ಮಲೆನಾಡ ಕಡೆ ಏನಾದರು ಹಬ್ಬ/ಮದುವೆ/ಮು೦ಜಿಯಲ್ಲಿ ಇದನ್ನು ಕಡ್ಡಾಯವಾಗಿ ಮಾಡಿರುತ್ತಾರೆ ;) :)
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ