ಸಾಮಗ್ರಿಗಳು : ಮಾವಿನ ಕಾಯಿ - 4-5 (ಚಿಕ್ಕದು), ಎಣ್ಣೆ 6 ಚಮಚ, ಸಾಸಿವೆ, 1/2 ಚಮಚ, ಉದ್ದಿನ ಬೇಳೆ 1 ಚಮಚ, ತೆಂಗಿನ ತುರಿ 1/4 ಕಪ್, ಹಸಿ ಮೆಣಸಿನಕಾಯಿ 3-4, ಕರಿಬೇವು ಸ್ವಲ್ಪ, ಸಕ್ಕರೆ 2 ಚಮಚ, ಅರಿಶಿನ ಪುಡಿ 1/4 ಚಮಚ, ಉಪ್ಪು ರುಚಿಗೆ ತಕ್ಕಷ್ಟು
ವಿಧಾನ: ಮಾವಿನ ಕಾಯಿಗೆ ನೀರು, ಸ್ವಲ್ಪ ಉಪ್ಪು ಹಾಕಿ ಹೆಚ್ಚಲು ಬರುವಷ್ಟು ಗಟ್ಟಿಯಾಗಿ ಬೇಯಿಸಿಕೊಂಡು, ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ, ಉದ್ದಿನ ಬೇಳೆ, ಹೆಚ್ಚಿದ ಹಸಿಮೆಣಸು, ಕರಿಬೇವು ಹಾಕಿ. ನಂತರ ಹೆಚ್ಚಿದ ಮಾವಿನಕಾಯಿ ಹಾಕಿ ಚೆನ್ನಾಗಿ ಬಾಡಿಸಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಹಾಕಿ 3-4 ನಿಮಿಷ ಫ್ರೈ ಮಾಡಿ ಕಾಯಿ ತುರಿ ಹಾಕಿ ಸ್ವಲ್ಪ ಹುರಿದರೆ ಮಾವಿನ ಕಾಯಿ ಪಲ್ಯ ಅನ್ನದ ಜೊತೆ ಸವಿಯಲು ಸಿದ್ಧ.
ಸೂಚನೆ: ಮಾವಿನ ಕಾಯಿ ಬೇಯಿಸುವಾಗ ಉಪ್ಪು ಹಾಕಿರುವುದರಿಂದ ಪಲ್ಯ ಮಾಡುವಾಗ ಸ್ವಲ್ಪವೇ ಉಪ್ಪು ಹಾಕಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ