ಸಾಮಗ್ರಿಗಳು:
ಪಾಲಕ್ ಸೊಪ್ಪು - 1 ಕಟ್ಟು
ತೆಂಗಿನ ತುರಿ - 1 ಕಪ್
ಮೊಸರು - 1 ಕಪ್
ಈರುಳ್ಳಿ - 1 (ಮೀಡಿಯಂ ಗಾತ್ರದ್ದು)
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗೆ: ಎಣ್ಣೆ 1 ಚಮಚ, ಉದ್ದಿನ ಬೇಳೆ 1/2 ಚಮಚ, ಒಣ ಮೆಣಸಿನ ಕಾಯಿ 1, ಸಾಸಿವೆ 1/4 ಚಮಚ
ವಿಧಾನ:
ಪಾಲಕ್ ಎಲೆಗಳನ್ನು ನೀರಿನಲ್ಲಿ ಶುಚಿಯಾಗಿ ತೊಳೆದು ಸಣ್ಣಗೆ ಹೆಚ್ಚಿಕೊಂಡು 1/4 ನೀರು ಹಾಕಿ ಚೆನ್ನಾಗಿ ಬೇಯಿಸಿ ತಣ್ಣಗಾಗಲು ಬಿಡಿ.
ತೆಂಗಿನ ತುರಿಯನ್ನು ನುಣ್ಣಗೆ ರುಬ್ಬಿಕೊಂಡು ಬೇಯಿಸಿದ ಸೊಪ್ಪಿಗೆ ಹಾಕಿ, ಮೊಸರು, ಉಪ್ಪು ಹಾಕಿ ಕಲಕಿ. (ಮೊಸರು ಜಾಸ್ತಿ ಹುಳಿ ಇದ್ದರೆ 1/4 ಚಮಚ ಸಕ್ಕರೆ ಸೇರಿಸಿ) ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ. ನಂತರ ಎಣ್ಣೆ, ಉದ್ದಿನ ಬೇಳೆ, ಒಣ ಮೆಣಸಿನ ಕಾಯಿ, ಸಾಸಿವೆ ಒಗ್ಗರಣೆ ಮಾಡಿ, ಒಣ ಮೆಣಸಿನ ಕಾಯಿಯನ್ನು ಸಣ್ಣಗೆ ಅರೆಯಿರಿ. ಬಿಸಿ ಬಿಸಿ ಅನ್ನದ ಜೊತೆ ಪಾಲಕ್ ಹಶಿ / ಮೊಸರು ಬಜ್ಜಿ ಸವಿದು ನೋಡಿ......

ಮನೆ ಮದ್ದು: ಒಣ ಕೆಮ್ಮು ಶುರುವಾದರೆ ರಾತ್ರಿ ಮಲಗಿದಾಗ ತೊಂದರೆ ಕೊಡುವುದು ಜಾಸ್ತಿ ಅಲ್ಲವೇ...?! ಮಲಗುವಾಗ 3-4 ಒಣ ದ್ರಾಕ್ಷಿಯನ್ನು ಸುಮ್ಮನೆ ಬಾಯಲ್ಲಿರಿಸಿಕೊಂಡು ಮಲಗಿ (ಅಗಿಯಬಾರದು). ಕೆಮ್ಮು ಕಮ್ಮಿಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ.
ಒಣ ದ್ರಾಕ್ಷಿ ಟ್ರಿಕ್ಕು ಪ್ರಯೋಗಿಸಿ ನೋಡುತ್ತೀನಿ ಕಣ್ರೀ!
ಪ್ರತ್ಯುತ್ತರಅಳಿಸಿನೋಡಿ ಸರ್... ಕೆಮ್ಮು ಕಮ್ಮಿ ಆಗಿ ಜುಮ್ಮನೆ ನಿದ್ದೆ ಬರುತ್ತೆ .. :)
ಅಳಿಸಿ