ಸಾಮಗ್ರಿಗಳು : ಮೈದಾಹಿಟ್ಟು 1 ಕಪ್, ಮೊಸರು 1/2 ಕಪ್, ಹಸಿಮೆಣಸು 4-5, ತೆ೦ಗಿನಕಾಯಿ (ಕೊಬ್ಬರಿ) ಚೂರುಗಳು 1-2 ಚಮಚ, ಸೋಡಾ ಚಿಟಿಕೆ, ಜೀರಿಗೆ 1/2 ಚಮಚ, ಕರಿಬೇವು 5-6 ಎಲೆ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.
ವಿಧಾನ : ಮೊದಲು ಹಸಿಮೆಣಸು & ತೆ೦ಗಿನಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಇದಕ್ಕೆ ಮೈದಾಹಿಟ್ಟು ಸೋಡಾ, ಜೀರಿಗೆ, ಉಪ್ಪು, ಮೊಸರು, ಕರಿಬೇವು ಚೂರು ಮಾಡಿಕೊ೦ಡು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ ಕಾದ ಮೇಲೆ ಈ ಹಿಟ್ಟನ್ನು ಬಜ್ಜಿ ಥರ ಎಣ್ಣೆಯಲ್ಲಿ ಹೊ೦ಬಣ್ಣ ಬರುವವರೆಗೆ ಕರಿದರೆ ಬಿಸಿ ಬಿಸಿ ಮ೦ಗಳೂರು ಬಜ್ಜಿ ಸವಿಯಲು ಸಿದ್ಧ.
ಇದಕ್ಕೆ ಚಟ್ನಿ ಹಾಕಿಕೊ೦ಡು ತಿನ್ನಬೇಕು.
ಚಟ್ನಿ :
ಸಾಮಗ್ರಿಗಳು : ಕಾಯಿತುರಿ, ಎಳ್ಳು, ಪುದಿನಾಸೊಪ್ಪು, ಪುಟಾಣಿಬೇಳೆ (ಹುರಿಗಡಲೆ), ಹಸಿಮೆಣಸು, ಉಪ್ಪು ರುಚಿಗೆ ತಕ್ಕಷ್ಟು.
ವಿಧಾನ : ಪುದಿನಾಸೊಪ್ಪು ಹಸಿಮೆಣಸು ಎಳ್ಳು ಇವೆಲ್ಲವನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದುಕೊ೦ಡು ಕಾಯಿತುರಿ ಉಪ್ಪು ಪುಟಾಣಿಬೇಳೆ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿದರೆ ಚಟ್ನಿ ರೆಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ