ಗುರುವಾರ, ಜೂನ್ 23, 2016

ಮಾವಿನ ಹಣ್ಣಿನ ನೀರ್ ಗೊಜ್ಜು:

ಸಾಮಗ್ರಿಗಳು:
ಹುಳಿ ಮಾವಿನ ಹಣ್ಣು : 6-8 (ಕಾಡು ಮಾವು),
ಬೆಲ್ಲ : 1/2 ಕಪ್,
ಬೆಳ್ಳುಳ್ಳಿ : 8-10 ಎಸಳು,
ಒಣ ಮೆಣಸು: 1
ಹಸಿಮೆಣಸು :2-3,
ಎಣ್ಣೆ: 2 ಚಮಚ,
ಸಾಸಿವೆ: 1/2 ಚಮಚ,
ಉಪ್ಪು : ರುಚಿಗೆ

ವಿಧಾನ:
ಮಾವಿನ ಹಣ್ಣನ್ನು ತೊಳೆದು, ಸಿಪ್ಪೆ ತೆಗೆದು ಒಂದು ಪಾತ್ರೆಗೆ ಹಾಕಿ ಅದಕ್ಕೆ ಉಪ್ಪು, ಬೆಲ್ಲ ಹಾಕಿ ಅದನ್ನು ಚೆನ್ನಾಗಿ ಕಿವುಚಿರಿ. ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿಕೊಳ್ಳಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಸಾಸಿವೆ ಹಾಕಿ ಸಿಡಿದ ಮೇಲೆ ಒಣಮೆಣಸು, ಚೂರು ಮಾಡಿದ ಹಸಿಮೆಣಸು ಹಾಕಿ ಫ್ರೈ ಮಾಡಿ ಅದಕ್ಕೆ ಜಜ್ಜಿದ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ ಗೊಜ್ಜಿಗೆ ಹಾಕಿ. ಮೆಣಸಿನ ಕಾಯಿಯನ್ನು ನುರಿಯಿರಿ. ಹುಳಿ, ಸಿಹಿ, ಖಾರದ ಮಾವಿನಕಾಯಿ ಗೊಜ್ಜನ್ನು ಅನ್ನದ ಜೊತೆ ಸವಿಯಿರಿ.



ಶುಕ್ರವಾರ, ಜೂನ್ 17, 2016

ಮಾವಿನಹಣ್ಣಿನ ಸಾಸಿವೆ:



ಸಾಮಗ್ರಿಗಳು: 
ಹುಳಿ ಸಿಹಿ ಮಾವಿನಹಣ್ಣು - 5-6 
ಉಪ್ಪು ರುಚಿಗೆ ತಕ್ಕಷ್ಟು
ಬೆಲ್ಲ -2 ಚಮಚ, 
ತೆ೦ಗಿನತುರಿ 1/2 ಕಪ್, 
ಸಾಸಿವೆ 1/2 ಚಮಚ ,
ಹಸಿ ಮೆಣಸು-1, 
ಅರಿಶಿನ - ದೊಡ್ಡ ಚಿಟಿಕೆ.
ಒಗ್ಗರಣೆಗೆ : ಎಣ್ಣೆ,  ಒಣಮೆಣಸು,  ಸಾಸಿವೆ.



ವಿಧಾನ :  ತೆ೦ಗಿನತುರಿ, ಹಸಿ ಮೆಣಸು, ಸಾಸಿವೆ, ಅರಿಶಿನ ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಾವಿನಹಣ್ಣಿನ ಸಿಪ್ಪೆ ತೆಗೆದು ಅದಕ್ಕೆ ಉಪ್ಪು ಬೆಲ್ಲ ಹಾಕಿ ಕಿವಿಚಿ. ರುಬ್ಬಿದ ಮಿಶ್ರಣವನ್ನು ಇದಕ್ಕೆ ಹಾಕಿ. ನ೦ತರ ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಬಿಸಿ ಆದಮೇಲೆ ಒಣಮೆಣಸು ಸಾಸಿವೆ ಹಾಕಿ ಅದು ಚಿಟಪಟಿಸಿದ ಮೇಲೆ ಸಾಸಿವೆಗೆ ಒಗ್ಗರಣೆ ಸೇರಿಸಿದರೆ ಮಾವಿನಹಣ್ಣಿನ ಸಾಸಿವೆ ಅನ್ನದ ಜೊತೆ ಸವಿಯಲು ಸಿದ್ಧ.

ಶುಕ್ರವಾರ, ಜೂನ್ 10, 2016

ಟೊಮೇಟೊ ಗೊಜ್ಜು -2:

ಸಾಮಗ್ರಿಗಳು:
ಫಾರ್ಮ್ ಟೊಮೇಟೊ : 4,
ಮಧ್ಯಮ ಗಾತ್ರದ ಈರುಳ್ಳಿ : 2,
ಹಸಿಮೆಣಸಿನ ಕಾಯಿ : 3-4,
ಬೆಳ್ಳುಳ್ಳಿ : 4-5 ಎಸಳು,
ಸಕ್ಕರೆ : 2 ಚಮಚ,
ಉಪ್ಪು : ರುಚಿಗೆ,
ತುಪ್ಪ / ಎಣ್ಣೆ : 4 ಚಮಚ,
ಜೀರಿಗೆ : 1/2 ಚಮಚ,
ಸಾಸಿವೆ : 1/2 ಚಮಚ,
ಕರಿಬೇವು : 5-6 ಎಲೆಗಳು 

ವಿಧಾನ :
ಟೊಮೇಟೊ ಮತ್ತು ಈರುಳ್ಳಿ ಯನ್ನು ಹೆಚ್ಚಿಕೊಳ್ಳಿ. ಬೆಳ್ಳುಳ್ಳಿ ಬಿಡಿಸಿ ಜಜ್ಜಿಕೊಳ್ಳಿ. ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಈರುಳ್ಳಿ ಹಾಕಿ ಒಮ್ಮೆ ಕಲಕಿ, ಟೊಮೇಟೊ,ಹಸಿಮೆಣಸಿನಕಾಯಿ ಹಾಕಿ ಅರ್ಧ ನಿಮಿಷ ಹುರಿಯಿರಿ. ಇದು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ, ಜೀರಿಗೆ, ಸಾಸಿವೆ ಹಾಕಿ ಸಿಡಿಸಿ. ಅದಕ್ಕೆಕರಿಬೇವು, ಜಜ್ಜಿದ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಇದಕ್ಕೆ ರುಬ್ಬಿದ ಮಿಶ್ರಣ ಹಾಕಿ, ಸಕ್ಕರೆ, ಉಪ್ಪು ಹಾಕಿ ಕುದಿಸಿ. ಬಿಸಿ ಬಿಸಿ ಟೊಮೇಟೊ ಗೊಜ್ಜನ್ನು ಚಪಾತಿ, ದೋಸೆ ಜೊತೆ ಸವಿಯಿರಿ. 


ಸೋಮವಾರ, ಜೂನ್ 6, 2016

ರವಾ ಇಡ್ಲಿ:

ಸಾಮಗ್ರಿಗಳು : 
ಉಪ್ಪಿಟ್ಟಿನ ರವೆ - 1 ಕಪ್, 
ಚಿರೋಟಿ ರವ - 1 ಕಪ್, 
ಮೊಸರು - 3/4 ಕಪ್, 
ಕ್ಯಾರೇಟ್ 1, 
ಕೊತ್ತ೦ಬರಿ ಸೊಪ್ಪು,ಉಪ್ಪು, 
ಅಡುಗೆ ಸೋಡಾ - 1/4 ಚಮಚ, 
ಫ್ರೈ ಮಾಡಿದ ಗೋಡ೦ಬಿ ಚುರುಗಳು -  15-20
ಒಗ್ಗರಣೆಗೆ : ಎಣ್ಣೆ - 5  ಚಮಚ, ಕಡ್ಲೆಬೇಳೆ 2  ಚಮಚ , ಹಸಿಮೆಣಸು 3 , ಕರಿಬೇವು, ಸಾಸಿವೆ 1/2 ಚಮಚ.



ವಿಧಾನ : ಎರಡೂ ರವೆಯನ್ನು ಮೊಸರು ಸ್ವಲ್ಪ ನೀರು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಈಗ ಅದಕ್ಕೆ ಉಪ್ಪು, ಎಣ್ಣೆ, ಸೋಡಾ, ಸಣ್ಣದಾಗಿ ಕತ್ತರಿಸಿದ ಕೊತ್ತ೦ಬರಿಸೊಪ್ಪನ್ನು ಹಾಕಿ ಕಲೆಸಿ 20 ನಿಮಿಷ ಹಾಗೆ ಬಿಡಿ. ಈಗ ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಕಡ್ಲೆಬೇಳೆ ಹಾಕಿ ಅದು ಸ್ವಲ್ಪ ಫ್ರೈ ಆದ ಮೇಲೆ ಸಾಸಿವೆ, ಸಣ್ಣದಗಿ ಹೆಚ್ಚಿದ ಕರಿಬೇವು & ಹಸಿಮೆಣಸು ಹಾಕಿ ಇದನ್ನು ಇಡ್ಲಿ ಹಿಟ್ಟಿಗೆ ಸೇರಿಸಿ. ಈಗ ಇಡ್ಲಿ ಮಾಡುವ ಪಾತ್ರೆಗೆ ಹಿಟ್ಟು ಹಾಕಿ ಮೇಲಿ೦ದ ಕ್ಯಾರೇಟ್ ತುರಿ & ಫ್ರೈ ಮಾಡಿದ ಗೋಡ೦ಬಿ ಚುರುಗಳನ್ನು  ಉದುರಿಸಿ,, ಹಾಗೆ ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಿ. ಬಿಸಿ ಬಿಸಿ ಇಡ್ಲಿಯನ್ನು ಚಟ್ನಿ & ಸಾ೦ಬಾರ್ ಜೊತೆ ಸವಿಯಿರಿ.


ಚಟ್ನಿ: ಹಸಿ ಮೆಣಸು, ಎಳ್ಳನ್ನು ಸ್ವಲ್ಪ ಎಣ್ಣೆ ಹಾಕಿ ಬಾಡಿಸಿಕೊಡು ಕೊನೆಯಲ್ಲಿ ಸ್ವಲ್ಪ ಕೊತ್ತ೦ಬರಿ ಸೊಪ್ಪು ಸೇರಿಸಿ. ತೆ೦ಗಿನ ತುರಿ, ಹುರಿಗಡಲೆ (ಪುಟಾಣಿ ಬೇಳೆ) ಉಪ್ಪು ಹಾಕಿ ರುಬ್ಬಿದರೆ ಚಟ್ನಿ ರೆಡಿ. ಬೇಕಾದರೆ ಕೊನೆಯಲ್ಲಿ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ.
ಸಾ೦ಬಾರ್: ಸಾ೦ಬಾರನ್ನು ೨-೩ ವಿಧದಲ್ಲಿ ಮಾಡಬಹುದು. ಒ೦ದು ವಿಧಾನ ಹೇಳುತ್ತೇನೆ. ಈರುಳ್ಳಿ, ಆಲೂಗಡ್ಡೆ & ಟೊಮ್ಯಾಟೊವನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. (ತಲಾ ಒ೦ದೊ೦ದು) ಮೊದಲು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ಒ೦ದು ಬಾಣಲೆಯಲ್ಲಿ ಧನಿಯಾ, ಜೀರಿಗೆ,(೧ ಚಮಚ), ೪ ಕಾಳು ಮೆ೦ತೆ, ೧ ಲವ೦ಗ, ೩-೪ ಒಣಮೆಣಸು ಹಾಕಿ ಹುರಿದುಕೊಳ್ಳಿ. ಸ್ವಲ್ಪ ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿ. ಈ ಮಸಾಲೆಗೆ ಬೇಯಿಸಿದ ಆಲೂಗಡ್ಡೆ, ಹೆಚ್ಚಿಟ್ಟ ಈರುಳ್ಳಿ,ಟೊಮ್ಯಾಟೊ, ಉಪ್ಪು, ಸ್ವಲ್ಪ ಸಕ್ಕರೆ (೧/೨ ಚಮಚ) ಕೊತ್ತ೦ಬರಿ ಸೊಪ್ಪು ಹಾಕಿ ನೀರು ಸೇರಿಸಿ ಕುದಿಸಿ. ಕೊನೆಯಲ್ಲಿ ಇ೦ಗು ಹಾಕಿ ಒಗ್ಗರಣೆ ಕೊಡಿ.