ಸಾಮಗ್ರಿಗಳು:
ಮೊಳಕೆ ಕಟ್ಟಿದ ಹೆಸರುಕಾಳು (sprouts) : 2.5 ಕಪ್
ಈರುಳ್ಳಿ : 1 (ಮಧ್ಯಮ ಗಾತ್ರ)
ಬೆಳ್ಳುಳ್ಳಿ : 8-10 ಎಸಳು
ಕರಿಬೇವು : 8-10 ಎಲೆಗಳು
ಎಣ್ಣೆ : 4 ಚಮಚ
ಜೀರಿಗೆ : 1/2 ಚಮಚ
ಸಾಸಿವೆ : 1/2 ಚಮಚ
ಹಸಿಮೆಣಸಿನ ಕಾಯಿ : 2
ಅರಿಶಿನ ಪುಡಿ :1/4 ಚಮಚ
ಅರಿಶಿನ ಪುಡಿ :1/4 ಚಮಚ
ಗರಂ ಮಸಾಲ ಪುಡಿ : 1/2 ಚಮಚ
ಅಚ್ಚ ಮೆಣಸಿನ ಪುಡಿ : 1/2 ಚಮಚ (ನಿಮ್ಮ ಖಾರಕ್ಕೆ ಅನುಗುಣವಾಗಿ)
ಲಿಂಬೆ ರಸ : 2-3 ಚಮಚ
ಉಪ್ಪು : ರುಚಿಗೆ ತಕ್ಕಷ್ಟು
ವಿಧಾನ :
ಮೊಳಕೆ ಕಾಳನ್ನು ಕುಕ್ಕರ್ ನಲ್ಲಿ ತುಂಬಾ ಮೆತ್ತಗಾಗದಂತೆ (ಕರಗದಂತೆ) ಬೇಯಿಸಿಕೊಳ್ಳಿ. ಅರ್ಧ ಕಪ್ ನಷ್ಟು ಬೆಂದ ಕಾಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈರುಳ್ಳಿಯನ್ನು ತೆಳ್ಳಗೆ, ಉದ್ದುದ್ದ ಹೆಚ್ಚಿಕೊಳ್ಳಿ. ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿಕೊಳ್ಳಿ. ಹಸಿಮೆಣಸನ್ನು ಉದ್ದಕ್ಕೆ ಸೀಳಿಕೊಳ್ಳಿ. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಿಸಿ, ಜೀರಿಗೆ ಸಾಸಿವೆ ಹಾಕಿ ಸಿಡಿಸಿ. ಇದಕ್ಕೆ ಹಸಿಮೆಣಸಿನ ಕಾಯಿ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಬಾಡಿಸಿ. ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ. ಇದಕ್ಕೆ ಅರಿಶಿನ ಪುಡಿ, ಗರಂ ಮಸಾಲಾ ಪುಡಿ, ಅಚ್ಚ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿಕೊಂಡು ಬೇಯಿಸಿಟ್ಟ ಹೆಸರು ಕಾಳು ಮತ್ತು ರುಬ್ಬಿದ ಕಾಳನ್ನು ಹಾಕಿ, ೨ ಕಪ್ ನಷ್ಟು ನೀರು, ಉಪ್ಪು ಹಾಕಿ ಕುದಿಸಿ. ಕೊನೆಯಲ್ಲಿ ಲಿಂಬೆ ರಸ ಹಾಕಿ ಉರಿ ಆರಿಸಿ. ಬಿಸಿ ಬಿಸಿಯಾದ ಹೆಸರುಕಾಳು ಸಾರು ಅನ್ನದ ಜೊತೆ ಸವಿಯಲು ಸಿದ್ಧ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ