ಸಾಮಗ್ರಿಗಳು:
ದೊಡ್ಡ ಅಥವಾ ಮಧ್ಯಮ ಗೋಧಿ ನುಚ್ಚು (ಕಡಿ): 1.5 ಕಪ್
ಹಾಲು : 2 ಕಪ್
ತೆಂಗಿನ ತುರಿ :1/2 ಕಪ್
ಸಕ್ಕರೆ :3 ಕಪ್
ಒಣ ದ್ರಾಕ್ಷಿ : 1 ಚಮಚ
ಗೋಡಂಬಿ : 8
ಖರ್ಜೂರ : 4-5
ತುಪ್ಪ : 2 ಚಮಚ
ಉಪ್ಪು: 1/4 ಚಮಚ
ವಿಧಾನ:
ಗೋಧಿ ನುಚ್ಚನ್ನು 4-5 ಘಂಟೆ ನೀರಿನಲ್ಲಿ ನೆನೆಸಿಕೊಳ್ಳಿ. ನಂತರ ಆ ನೀರಿನ ಜೊತೆಯೇ ಕುಕ್ಕರ್ ನಲ್ಲಿ ೩ ವಿಶಲ್ ಕೂಗಿಸಿ ಬೇಯಿಸಿಕೊಳ್ಳಿ. ಇದನ್ನು ದಪ್ಪ ತಳದ ಪಾತ್ರೆಗೆ ಹಾಕಿ ಹಾಲು, ಸಕ್ಕರೆ ಹಾಕಿ ಒಲೆಯ ಮೇಲಿಡಿ. ಇತ್ತ ತೆಂಗಿನ ತುರಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಪಾಯಸಕ್ಕೆ ಹಾಕಿ. ದ್ರಾಕ್ಷಿ, ಗೋಡಂಬಿ ಚೂರುಗಳು ಮತ್ತು ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಪಾಯಸ ದಪ್ಪ ಅನಿಸಿದರೆ ಹಾಲು / ನೀರು ಸೇರಿಸಿ ಕುದಿಸಿ. ಕೊನೆಯಲ್ಲಿ ಖರ್ಜೂರವನ್ನು ಸಣ್ಣದಾಗಿ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಪಾಯಸಕ್ಕೆ ಹಾಕಿದರೆ ರುಚಿಯಾದ ಪಾಯಸ ಸಿದ್ಧ.
ಸಲಹೆ :
1) ಗೋಧಿ ಕಡಿ / ನುಚ್ಚಿನ ಬದಲು ಗೋಧಿಯಿಂದಲೇ ಪಾಯಸ ಮಾಡಬಹುದು. ಆದರೆ ರಾತ್ರಿಯಿಡೀ ಗೋಧಿಯನ್ನು ನೆನೆಸಿಟ್ಟು ಮಾಡಬೇಕು. ಪೂರ್ತಿ ಗೋಧಿ ಅಗಿಯಲು ಸಿಗುವದರಿಂದ ಗೋಧಿ ಪಾಯಸ ಕೂಡ ಚೆನ್ನಾಗಿರುತ್ತದೆ.
2) ಹಾಲನ್ನು ಹಾಕುವಾಗ ಪಾಯಸ ನಿಮಗೆ ಎಷ್ಟು ದಪ್ಪ ಬೇಕು ನೋಡಿಕೊಂಡು ಹಾಕಿಕೊಳ್ಳಿ. ಪೂರ್ತಿ ಹಾಲನ್ನು ಒಮ್ಮೆಲೇ ಹಾಕಿಕೊಳ್ಳಬೇಡಿ.
3) ಸಕ್ಕರೆ ಬದಲು ಬೆಲ್ಲ ಕೂಡ ಹಾಕಬಹುದು. ಅಥವಾ ಬೆಲ್ಲ ಸಕ್ಕರೆ ಎರಡನ್ನೂ ಹಾಕಿ ಮಾಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ